ರಾಣೆಬೆನ್ನೂರು: ಕೊರೊನಾ ವೈರಸ್ ಹಾವಳಿ ನಿಯಂತ್ರಣ ದೇಶಕ್ಕೆ ಸವಾಲಾಗಿ ಪರಿಣಮಿಸಿದೆ. ಆದರೆ ಜನರ ಆರೋಗ್ಯ ದೃಷ್ಠಿಯಿಂದ ಎಲ್ಲಾ ನಿಯಮ ಜಾರಿ ಮಾಡಿದ್ದರೂ, ರಾಣೆಬೆನ್ನೂರು ನಗರಸಭೆ ಅಧಿಕಾರಿಗಳು ಮಾತ್ರ ಪರಿಹಾರಾತ್ಮಕ ಕ್ರಮ ಕೈಗೊಂಡಿಲ್ಲ.
ನಗರದಲ್ಲಿ ಒಂದು ವಾರದಿಂದ ಯಾವುದೇ ಮುಂಜಾಗ್ರತಾ ಕ್ರಮಗಳನ್ನು ತಗೆದುಕೊಂಡಿಲ್ಲ ಎಂಬುದಕ್ಕೆ ಕಲುಷಿತ ಕುಡಿಯುವ ನೀರು ಸಾಕ್ಷಿಯಾಗಿದೆ. ನಗರಸಭೆ ವಾರಕ್ಕೊಮ್ಮೆ ರಾಣೆಬೆನ್ನೂರು ನಗರದ ವಿವಿಧ ಬಡಾವಣೆಗಳಿಗೆ ನೀರು ಸರಬರಾಜು ಮಾಡುತ್ತಿದೆ. ಆದರೆ ಈ ನೀರಿನಲ್ಲಿ ಮೋರಿ ನೀರು ಸೇರಿದ್ದು ಕುಡಿಯುವುದಕ್ಕೆ ಅಯೋಗ್ಯವಾಗಿದೆ. ಕಲುಷಿತ ನೀರು ಪೂರೈಕೆ ಮಾಡಿದ ನಗರಸಭೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.