ETV Bharat / state

ಹಾನಗಲ್‌ ಗೆಲುವು: ಹಾವೇರಿ ಜನತೆಗೆ ಡಿ.ಕೆ.ಶಿವಕುಮಾರ್ ಧನ್ಯವಾದ

ಇಂದು ಶಿಗ್ಗಾಂವಿಯಲ್ಲಿ ನಡೆದ ಬ್ಲಾಕ್ ಕಾಂಗ್ರೆಸ್ ಅಭಿನಂದನಾ ಸಮಾರಂಭದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​ ಹಾನಗಲ್‌ನಲ್ಲಿ ಕಾಂಗ್ರೆಸ್ ಗೆಲ್ಲಿಸಿದ್ದಕ್ಕೆ ಮತದಾರರಿಗೆ ಧನ್ಯವಾದ ಅರ್ಪಿಸಿದರು.

DK Shivkumar
ಡಿಕೆ ಶಿವಕುಮಾರ್
author img

By

Published : Nov 5, 2021, 4:19 PM IST

ಹಾವೇರಿ: ದೀಪಾವಳಿ ಹಬ್ಬ ಕತ್ತಲಿನಿಂದ‌ ಬೆಳಕಿಗೆ ಹೋಗಬೇಕು ಎಂದು ಹೇಳುತ್ತಾ, ಹಾನಗಲ್‌ನಲ್ಲಿ ಕಾಂಗ್ರೆಸ್​ ಪಕ್ಷವನ್ನು ಗೆಲ್ಲಿಸಿದ್ದಕ್ಕೆ ಡಿ.ಕೆ.ಶಿವಕುಮಾರ್​ ಜನತೆಗೆ ಅಭಿನಂದನೆ ಸಲ್ಲಿಸಿದರು.

ಶಿಗ್ಗಾಂವಿಯಲ್ಲಿ ನಡೆದ ಬ್ಲಾಕ್ ಕಾಂಗ್ರೆಸ್ ಆಯೋಜಿಸಿದ್ದ ಅಭಿನಂದನಾ ಸಮಾರಂಭ

'ಇದು ಮೊದಲನೇ ಚುನಾವಣೆ. ಟ್ರೈಯಲ್ ರನ್. ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತರು ಗ್ರಾಮಗಳಲ್ಲಿ ತಿರುಗಾಡಿ, ಪ್ರಚಾರ ಮಾಡಿ ಹಾನಗಲ್‌ನಲ್ಲಿ ಮಾನೆಯವರನ್ನು ಗೆಲ್ಲಿಸಿದ್ದೀರಾ, ಇದು ಕಾಂಗ್ರೆಸ್​ಗೆ ಸಂದ ಜಯ' ಎಂದು ಹೇಳಿದರು.

'2023ಕ್ಕೆ ಇದು ಪ್ರಾರಂಭ. ಜಿಲ್ಲೆಯ ಜನತೆ ಹಣಕ್ಕಾಗಿ ಮತಗಳನ್ನು ಮಾರಿಕೊಳ್ಳಲಿಲ್ಲ. ನಿಮ್ಮಲ್ಲೂ ಸಂಘಟನೆ, ಬದಲಾವಣೆಯಾಗಬೇಕು. ಮುಂದಿನ‌ ಚುನಾವಣೆಯಲ್ಲಿ ನೀವೆಲ್ಲರೂ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಬೇಕು' ಎಂದು ಡಿಕೆಶಿ ಜನರಲ್ಲಿ ಮನವಿ ಮಾಡಿದರು.

ಇದಕ್ಕೂ ಮೊದಲು ಡಿ.ಕೆ.ಶಿವಕುಮಾರ್, ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್, ನೂತನ ಶಾಸಕ ಶ್ರೀನಿವಾಸ್ ಮಾನೆ ಸೇರಿದಂತೆ ಕಾಂಗ್ರೆಸ್ ಮುಖಂಡರನ್ನು ತೆರೆದ ವಾಹನದಲ್ಲಿ ಮೆರವಣಿಗೆ ಮಾಡಲಾಯಿತು. ಇದೇ ವೇಳೆ ಶಿಗ್ಗಾಂವಿ ಬ್ಲಾಕ್ ಕಾಂಗ್ರೆಸ್​​ನಿಂದ ನೂತನ ಶಾಸಕ ಶ್ರೀನಿವಾಸ ಮಾನೆ ಮತ್ತು ಡಿ.ಕೆ.ಶಿವಕುಮಾರ್ ಅವರನ್ನು ಸನ್ಮಾನಿಸಲಾಯಿತು.

ಇದನ್ನೂ ಓದಿ: ಬೈಕ್​​ನಲ್ಲಿ ಪಟಾಕಿ ಸಾಗಿಸುವಾಗ ಸಿಡಿದ ಕ್ರ್ಯಾಕರ್ಸ್​.. ತಂದೆ-ಮಗ ಸಜೀವದಹನ - Video

ETV Bharat Logo

Copyright © 2024 Ushodaya Enterprises Pvt. Ltd., All Rights Reserved.