ETV Bharat / state

ಹಾವೇರಿ: ಹತ್ತಿ ಇಳುವರಿ ಕುಂಠಿತ, ಬೆಳೆಯಿಂದ ರೈತ ವಿಮುಖ - ಹಾವೇರಿ ಎಪಿಎಂಸಿ ಮಾರುಕಟ್ಟೆ

ಡಿಸೆಂಬರ್, ಜನವರಿ ತಿಂಗಳಿನಲ್ಲಿ ತುಂಬಿ ತುಳುಕುತ್ತಿದ್ದ ಹಾವೇರಿ ಎಪಿಎಂಸಿ ಮಾರುಕಟ್ಟೆ ಇದೀಗ ಖಾಲಿ ಖಾಲಿಯಾಗಿದೆ.

ಹಾವೇರಿಯಲ್ಲಿ ಹತ್ತಿ ಇಳುವರಿ ಕುಂಠಿತ
ಹಾವೇರಿಯಲ್ಲಿ ಹತ್ತಿ ಇಳುವರಿ ಕುಂಠಿತ
author img

By

Published : Dec 9, 2022, 9:25 PM IST

ಹಾವೇರಿ: ರಾಣೆಬೆನ್ನೂರು ಮತ್ತು ಹಾವೇರಿ ಎಪಿಎಂಸಿಗಳ ಮಾರುಕಟ್ಟೆಗಳ ಪ್ರಾಂಗಣಗಳು ಈ ಸೀಸನ್‌ನಲ್ಲಿ ಹತ್ತಿ ಅಂಗಡಿಗಳಿಂದ ತುಂಬಿ ತುಳುಕುತ್ತಿದ್ದವು. ಇಲ್ಲಿಯ ಹತ್ತಿ ಖರೀದಿಗೆ ಗೋಕಾಕ್, ರಾಯಚೂರು ಸೇರಿದಂತೆ ಬೇರೆ ರಾಜ್ಯಗಳಿಂದ ವರ್ತಕರು ಬರುತ್ತಿದ್ದರು. ಡಿಸೆಂಬರ್, ಜನವರಿ ತಿಂಗಳಿನಲ್ಲಿ ತುಂಬಿ ತುಳುಕುತ್ತಿದ್ದ ಹಾವೇರಿ ಎಪಿಎಂಸಿ ಮಾರುಕಟ್ಟೆ ಇದೀಗ ಖಾಲಿ ಖಾಲಿಯಾಗಿದೆ.

ಹಲವು ದಲ್ಲಾಳಿ ಅಂಗಡಿಗಳು ಬಂದ್ ಆಗಿವೆ. ನೂರಾರು ಸಂಖ್ಯೆಯಲ್ಲಿದ್ದ ಹಮಾಲರ ಸಂಖ್ಯೆ ಬೆರಳೆಣಿಕೆಯಷ್ಟಾಗಿದೆ. ಹತ್ತಿ ಬೆಳೆಗೆ ಬೇಕಾಗುವ ಅಧಿಕ ಕೂಲಿಕಾರ್ಮಿಕರು, ಅಧಿಕ ಕೀಟನಾಶಕಗಳ ಬಳಕೆ ಮತ್ತು ಇಳುವರಿ ಕುಂಠಿತವಾಗಿರುವ ಕಾರಣ ಹತ್ತಿಯಿಂದ ಹಾವೇರಿ ಜಿಲ್ಲೆಯ ರೈತ ವಿಮುಖನಾಗಿದ್ದಾನೆ ಎಂಬ ಮಾತುಗಳು ಕೇಳಿಬರುತ್ತಿವೆ.

ಹತ್ತಿ ಇಳುವರಿ ಕುಂಠಿತವಾಗಿರುವ ಬಗ್ಗೆ ರೈತ ನಿಂಗಪ್ಪ ಅವರು ಮಾತನಾಡಿದ್ದಾರೆ

ಹತ್ತಿಗಿಂತ ಮೆಕ್ಕೆಜೋಳ, ಕಬ್ಬು, ಶೇಂಗಾ ಮತ್ತು ಸೋಯಾಬಿನ್‌ನಲ್ಲಿ ಅಧಿಕ ಲಾಭವಿದೆ. ಇದರಿಂದ ಅನ್ನದಾತನಿಗೆ ವರಮಾನದ ಜೊತೆಗೆ ರೈತನ ಜಾನುವಾರುಗಳಿಗೆ ಸಹ ಮೇವು ಸಿಗುತ್ತೆ. ಹೀಗಾಗಿ, ಬಹುತೇಕ ರೈತರು ಹತ್ತಿ ಬೆಳೆ ಬಿಟ್ಟಿದ್ದಾರೆ. ಪ್ರಸ್ತುತ ವರ್ಷವಂತೂ ಮುಂಗಾರಿನಲ್ಲಿ ಅಷ್ಟೇ ಅಲ್ಲದೆ ಪದೇ ಪದೆ ಸುರಿದ ಮಳೆಯಿಂದ ಇದ್ದಬದ್ದ ಹತ್ತಿ ಬೆಳೆ ನೀರುಪಾಲಾಗಿದೆ ಎನ್ನುತ್ತಾರೆ ರೈತ ನಿಂಗಪ್ಪ.

ರಾಜ್ಯದಲ್ಲಿ ಸುರಿದ ಅತಿವೃಷ್ಠಿಯಿಂದ ಹತ್ತಿ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದೆ. ಕಳಪೆ ಹತ್ತಿ ಬೀಜ ಪೂರೈಕೆ, ನಿರ್ದಿಷ್ಟ ಬೆಲೆ ಸಿಗದಿರುವುದು ಸಹ ರೈತನನ್ನು ಹತ್ತಿ ಬೆಳೆಯಿಂದ ಬೇರೆ ಕಡೆ ಸೆಳೆದಿದೆ. ಬಿಳಿ ಬಂಗಾರ ಎಂದು ಕರೆಯುತ್ತಿದ್ದ ಹತ್ತಿ ಬೆಳೆಯ ಬೆಳೆಯುವ ಪ್ರದೇಶ ಕಡಿಮೆಯಾಗಿ ಏಷ್ಯಾ ಖಂಡದಲ್ಲಿ ಅತಿಹೆಚ್ಚು ಹತ್ತಿ ಬೆಳೆಯುವ ಜಿಲ್ಲೆಯ ಪಟ್ಟಿಯಿಂದ ಹಾವೇರಿ ಈಗ ಹೊರಬಂದಿದೆ.

ಸಂಕಷ್ಟಕ್ಕೆ ಸಿಲುಕಿದ ವರ್ತಕರು: ಜಿಲ್ಲೆಯ ರೈತರಿಗೆ, ವರ್ತಕರಿಗೆ 10 ವರ್ಷಗಳ ಹಿಂದೆ ಇದ್ದ ಹಾವೇರಿ ಎಪಿಎಂಸಿ ಮಾರುಕಟ್ಟೆ ಈಗ ಇಲ್ಲ. ಅಂದು ಬರುತ್ತಿದ್ದ ಹತ್ತಿ 10 ಪರ್ಸೆಂಟ್ ಸಹ ಹತ್ತಿ ಮಾರುಕಟ್ಟೆಗೆ ಬರುತ್ತಿಲ್ಲ. ಹೀಗಾಗಿ ಎಪಿಎಂಸಿಯನ್ನು ಅವಲಂಬಿಸಿದ ವರ್ತಕರು ಸಹ ಸಂಕಷ್ಟಕ್ಕೆ ಸಿಲುಕಿದ್ದಾರೆ. ವರ್ಷದಿಂದ ವರ್ಷಕ್ಕೆ ಹತ್ತಿ ಬೆಳೆಯುವ ರೈತರ ಸಂಖ್ಯೆ ಕಡಿಮೆಯಾಗುತ್ತಿರುವುದು ವರ್ತಕರನ್ನು ಇನ್ನಷ್ಟು ಸಮಸ್ಯೆಗೆ ಸಿಲುಕುವಂತೆ ಮಾಡಿದೆ. ಹತ್ತಿ ಬೆಳೆಯುವ ರೈತರ ಸಂಖ್ಯೆ ಅಧಿಕವಾಗಿ ಎಪಿಎಂಸಿ ಈ ಹಿಂದಿನ ವೈಭವ ಕಾಣಲಿ ಎನ್ನುತ್ತಿದ್ದಾರೆ ವರ್ತಕ ಮಲ್ಲಿಕಾರ್ಜುನ್.

ಇದನ್ನೂ ಓದಿ: ಹುಬ್ಬಳ್ಳಿ: ಎಪಿಎಂಸಿ ಮಾರುಕಟ್ಟೆಯಲ್ಲಿ ಕಳ್ಳರ ಕಾಟ-ಆತಂಕದಲ್ಲಿ ವ್ಯಾಪಾರಸ್ಥರು!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.