ಹಾವೇರಿ: ದೇಶಾದ್ಯಂತ ಲಾಕ್ಡೌನ್ ಕಾರಣ ಸಾವಿರಾರು ರೂಪಾಯಿ ಖರ್ಚು ಮಾಡಿ ಬೆಳೆದ ಮೆಣಸಿನಕಾಯಿ ಮಾರಾಟವಾಗದೇ ರೈತರು ಪರಿತಪಿಸುವಂತಾಗಿದೆ.
ಹಾನಗಲ್ ತಾಲೂಕಿನಲ್ಲಿ ರೈತರೊಬ್ಬರು ಒಂದು ಎಕರೆಗೆ 30 ರಿಂದ 35 ಸಾವಿರ ರೂಪಾಯಿ ಖರ್ಚುಮಾಡಿ ಬೆಳೆದ ಮೆಣಸಿನ ಗಿಡಗಳು ಇದೀಗ ಫಲ ಕೊಡುತ್ತಿವೆ. ಆದರೆ, ಮಹಾಮಾರಿ ಕೊರೊನಾದಿಂದ ಹೊರ ರಾಜ್ಯಗಳಿಂದ ಬರುತ್ತಿದ್ದ ವ್ಯಾಪಾರಸ್ಥರು ಇದೀಗ ಬರುತ್ತಿಲ್ಲ. ಹೀಗಾಗಿ ಮೆಣಸು ಸಂಪೂರ್ಣ ಗಿಡಗಳಲ್ಲಿಯೇ ಮಾಗಿ ಉದುರಲು ಪ್ರಾರಂಭಿಸಿದೆ.