ETV Bharat / state

ಕಾಲೇಜುಗಳು ಆರಂಭವಾದ್ರೂ ಆಗದ ಅತಿಥಿ ಉಪನ್ಯಾಸಕರ ನೇಮಕ

author img

By

Published : Jan 19, 2021, 10:33 PM IST

ಜಿಲ್ಲೆಯಲ್ಲಿ ಕೇವಲ 30 ಪ್ರತಿಶತ ಸರ್ಕಾರಿ ಉಪನ್ಯಾಸಕರಿದ್ದು, ಉಳಿದ 70 ಪ್ರತಿಶತ ಅತಿಥಿ ಉಪನ್ಯಾಸಕರಿದ್ದಾರೆ. ಇದರಿಂದಾಗಿ ಬಡ ವಿದ್ಯಾರ್ಥಿಗಳು ಪಾಠಗಳಿಲ್ಲದೆ ಪರೀಕ್ಷೆ ಬರೆಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

appointment-of-guest-lecturers-have-not-started-yet
ಅತಿಥಿ ಉಪನ್ಯಾಸಕರ ನೇಮಕ

ಹಾವೇರಿ : ಜಿಲ್ಲೆಯ ಅತಿಥಿ ಉಪನ್ಯಾಸಕರು ಇದೀಗ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕಾಲೇಜುಗಳು ಆರಂಭವಾದರೂ ಸಹ ಅತಿಥಿ ಉಪನ್ಯಾಸಕರ ನೇಮಕಾತಿ ಆದೇಶವಾಗಿಲ್ಲ. ಇದರಿಂದಾಗಿ ಜಿಲ್ಲೆಯ 13 ಪದವಿ ಕಾಲೇಜುಗಳ 456 ಅತಿಥಿ ಉಪನ್ಯಾಸಕರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಕಾಲೇಜುಗಳು ಆರಂಭವಾದ್ರೂ ಆಗದ ಅತಿಥಿ ಉಪನ್ಯಾಸಕರ ನೇಮಕ

ಕೊರೊನಾ ಇರುವ ಕಾರಣ ಸಾಕಷ್ಟು ಸಮಸ್ಯೆ ಎದುರಿಸಿದ್ದೇವೆ. ಸರ್ಕಾರ ಅಗಸ್ಟ್​ವರೆಗೆ ನಮಗೆ ವೇತನ ನೀಡಿದೆ. ನಂತರ ವೇತನ ಬಂದಿಲ್ಲ ಎನ್ನುತ್ತಾರೆ ಅತಿಥಿ ಉಪನ್ಯಾಸಕರು.

ಇದನ್ನೂ ಓದಿ: ರಾಜ್ಯದಲ್ಲಿಂದು 645 ಮಂದಿಗೆ ಕೋವಿಡ್ ಸೋಂಕು ದೃಢ, 6 ಮಂದಿ ಸಾವು

ಇದರಿಂದಾಗಿ ಸಾವಿರಾರು ಬಡವಿದ್ಯಾರ್ಥಿಗಳು ಸಮಸ್ಯೆ ಎದುರಿಸುತ್ತಿದ್ದಾರೆ. ಜಿಲ್ಲೆಯಲ್ಲಿ ಕೇವಲ 30 ಪ್ರತಿಶತ ಸರ್ಕಾರಿ ಉಪನ್ಯಾಸಕರಿದ್ದು, ಉಳಿದ 70 ಪ್ರತಿಶತ ಅತಿಥಿ ಉಪನ್ಯಾಸಕರಿದ್ದಾರೆ. ಇದರಿಂದಾಗಿ ಬಡ ವಿದ್ಯಾರ್ಥಿಗಳು ಪಾಠಗಳಿಲ್ಲದೆ ಪರೀಕ್ಷೆ ಬರೆಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಸರ್ಕಾರ ಈ ಕೂಡಲೇ ತಮಗೆ ಬಾಕಿ ವೇತನ ಪಾವತಿಸಬೇಕು ಮತ್ತು ನೇಮಕಾತಿ ಆದೇಶ ನೀಡಬೇಕು ಎಂದು ಅತಿಥಿ ಉಪನ್ಯಾಸಕರು ಒತ್ತಾಯಿಸಿದ್ದಾರೆ. ಅಲ್ಲದೆ ಉದ್ಯೋಗ ಭದ್ರತೆ ಒದಗಿಸುವಂತೆ ಮನವಿ ಮಾಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.