ETV Bharat / state

ಹಾಸನಾಂಬೆ ದೇವಾಲಯದ ಹುಂಡಿಯಲ್ಲಿ ಲಕ್ಷ ಲಕ್ಷ ಹಣ... ಅಚ್ಚರಿ ಮೂಡಿಸಿದ ಸ್ವಾರಸ್ಯಕರ ಪತ್ರಗಳು!

author img

By

Published : Oct 30, 2019, 5:29 PM IST

ಹಾಸನಾಂಬೆ ದೇವಾಲಯದಲ್ಲಿ ನಿನ್ನೆ ಬಾಗಿಲು ಮುಚ್ಚಲಾಗಿದ್ದು, ಇಂದು ಬೆಳಗ್ಗಿನಿಂದ ಹುಂಡಿ ಹಣ ಎಣಿಕೆ ಕಾರ್ಯ ನಡೆಯಿತು.

ಹಾಸನಾಂಬೆ ದೇವಾಲಯದಲ್ಲಿ ಹುಂಡಿ ಎಣಿಕೆ ಕಾರ್ಯ

ಹಾಸನ: ವರ್ಷಕ್ಕೊಮ್ಮೆ ಬಾಗಿಲು ತೆರೆಯೋ ಹಾಸನಾಂಬೆ ದೇವಸ್ಥಾನದಲ್ಲಿ ನಿನ್ನೆ‌ ಮಧ್ಯಾಹ್ನ 1:16 ಗಂಟೆಗೆ ಶಾಸ್ತ್ರೋಕ್ತವಾಗಿ ದೇಗುಲದ ಬಾಗಿಲು ಮುಚ್ಚಿದ್ದು, 13 ದಿನಗಳ ಕಾಲ ಭಕ್ತರು ದೇವಿ ದರ್ಶನ ಪಡೆದು ಪುನೀತರಾಗಿದ್ದಾರೆ.

ಹಾಸನಾಂಬೆ ದೇವಾಲಯದ ಹುಂಡಿ ಎಣಿಕೆ ಕಾರ್ಯ

ಇನ್ನು, ಇಂದು ಬೆಳಿಗ್ಗೆಯಿಂದ ಹುಂಡಿ ಹಣ ಎಣಿಕೆ ಕಾರ್ಯ ನಡೆದಿದ್ದು, ಹುಂಡಿ ತೆಗೆದ ಕೂಡಲೇ ಎಲ್ಲರಿಗೂ ಕೆಲ ಅಚ್ಚರಿಯ ಸಂಗತಿಗಳು ಎದುರಾದವು. ದೇವರಿಗೆ ಬರೆದ ಪತ್ರಗಳು, ಕೋಟಾನೋಟು, ವಿದೇಶಿ ಹಣ ಎಲ್ಲವನ್ನೂ ಕಂಡು ಎಲ್ಲರು ಅಚ್ಚರಿಗೊಂಡರು. ಅಲ್ಲದೆ ಕೆಲ ಪತ್ರಗಳನ್ನು ಓದಿ ನಗೆಗಡಲಲ್ಲಿ ತೇಲಿದರು. ಕೆಲ ವರ್ಷಗಳಿಂದ ದೇವಾಲಯದ ಆದಾಯ ಕೋಟಿಗಳ ಗಡಿ ದಾಟಿದ್ದು, ನಿನ್ನೆಯವರೆಗೂ ಟಿಕೆಟ್ ಮೂಲಕ ಪಡೆದ ದರ್ಶನದಿಂದ 1.6 ಕೋಟಿ ರೂ. ಸಂಗ್ರಹವಾಗಿದೆ.

ಇನ್ನು ಹುಂಡಿ ಎಣಿಕೆ ಕಾರ್ಯದಲ್ಲಿ ದೇವಾಲಯದ ಆಡಳಿತಾಧಿಕಾರಿ, ತಾಲೂಕು ತಹಶೀಲ್ದಾರ್, ಕಂದಾಯ ಇಲಾಖೆ ಸಿಬ್ಬಂದಿ, ಬ್ಯಾಂಕ್ ಸಿಬ್ಬಂದಿ, ಸ್ಕೌಟ್ಸ್ ಅಂಡ್​ ಗೈಡ್ಸ್ ಸದಸ್ಯರು ಪಾಲ್ಗೊಂಡಿದ್ದರು. ಹುಂಡಿಯಲ್ಲಿ ಲಕ್ಷ ಲಕ್ಷ ಹಣದ ಜೊತೆಗೆ, ಪ್ರತಿ ವರ್ಷದಂತೆ ಸ್ವಾರಸ್ಯಕರ ಪತ್ರಗಳು ಪತ್ತೆಯಾಗಿದ್ದು ಅಚ್ಚರಿ ಮೂಡಿಸಿದವು. ಸರ್ಕಾರಿ ಕೆಲಸ ಕೊಡಿಸು, ನನ್ನನ್ನು ಸೆಲೆಬ್ರಿಟಿನ್ನಾಗಿ ಮಾಡು, ಎಸ್ಎಸ್​ಎಲ್​​ಸಿ, ಪಿಯುಸಿಯಲ್ಲಿ ಒಳ್ಳೆ ಅಂಕ ಬರಲಿ. ಸಾಲ ಕೊಟ್ಟ ಎಂಟು ಲಕ್ಷ ಹಣ ವಾಪಸ್ ಕೊಡಿಸು ಎಂದು ಬರೆದು ಹುಂಡಿಯಲ್ಲಿ ಹಾಕಿದ್ದಲ್ಲದೇ ನಾನಾ ಬೇಡಿಕೆಗಳ ಪತ್ರಗಳನ್ನ ಭಕ್ತರು ಹುಂಡಿಗೆ ಹಾಕಿದ್ದಾರೆ.

ಇನ್ನು ರಾಜ್ಯ, ಹೊರ ರಾಜ್ಯಗಳಿಂದ ಹಾಸನಾಂಬೆ ಭಕ್ತರು ದರ್ಶನ ಪಡೆದಿದ್ದು, ಇತ್ತೀಚಿನ ವರ್ಷಗಳಲ್ಲಿ ದೇವಾಲಯದ ಆದಾಯ ಕೂಡ ಕೋಟಿಗಳ ಗಡಿ ದಾಟುತ್ತಿದೆ. ಕಳೆದ ವರ್ಷ 2.65 ಕೋಟಿ ಆದಾಯ ಬಂದಿದ್ದು, ಟಿಕೆಟ್, ಪ್ರಸಾದ, ಲಾಡು ಮಾರಾಟ ಮತ್ತು ಹುಂಡಿ ಹಣ ಸೇರಿ ಕೋಟ್ಯಂತರ ರೂ. ಸಂಗ್ರಹವಾಗುತ್ತಿದೆ. ಇನ್ನು ಒಡವೆ-ವಸ್ತ್ರಗಳಿಂದ ಹರಕೆ ರೂಪದಲ್ಲಿಯೂ ಆದಾಯ ಬರುತ್ತಿದೆ.

Intro:ವರ್ಷಕ್ಕೊಮ್ಮೆ ಬಾಗಿಲು ತೆರೆಯೋ ಹಾಸನಾಂಬೆ ದೇವಿ ಬಾಗಿಲು ಶಾಸ್ತ್ರೋಕ್ತವಾಗಿ ನೆನ್ನೆ‌ ಮಧ್ಯಾಹ್ನ 1. 16ರ ಸುಮಾರಿಗೆ ಬಾಗಿಲು ಮುಚ್ಚಿದ್ದು 13 ದಿನಗಳ ಕಾಲ ಭಕ್ತರು ದೇವಿ ದರ್ಶನ ಪುನೀತರಾಗಿದ್ದಾರೆ. ಬೆಳಿಗ್ಗೆಯಿಂದ ಹುಂಡಿ ಹಣ ಎಣಿಕೆ ಕಾರ್ಯ ನಡೆದಿದ್ದು ಹುಂಡಿ ತೆಗೆದ ಕೂಡಲೇ ಎಲ್ಲರಿಗೂ ಕೆಲ ಅಚ್ಚರಿಯ ಸಂಗತಿಗಳು ಎದುರಾದವು. ಸ್ವಾದಿಷ್ಟಕರ ಪತ್ರಗಳು, ಕೋಟಾ ನೋಟು, ವಿದೇಶಿ ಹಣ ಎಲ್ಲವನ್ನೂ ಕಂಡು ಎಲ್ಲರು ಅಚ್ಚರಿಗೊಂಡಿದ್ದಲ್ಲದೇ ಕೆಲ ಪತ್ರಗಳನ್ನು ಕಂಡು ನಗೆಗಡಲಿಗೆ ಜಾರಿದರು... ಕಳೆದ ಕೆಲ ವರ್ಷಗಳಿಂದ ದೇವಾಲಯದ ಆದಾಯ ಕೋಟಿಗಳ ಗಡಿ ದಾಟಿದ್ದು ನೆನ್ನೆಯವರೆಗೂ ಟಿಕೆಟ್ ದರ್ಶನ ಒಂದರಲ್ಲೇ 1.6 ಕೋಟಿ ಸಂಗ್ರಹವಾಗಿದೆ. ಇಂದು ಬೆಳಿಗ್ಗೆಯಿಂದ ಹುಂಡಿ ಹಣ ಎಣಿಕೆ ಕಾರ್ಯ ನಡೆದಿದ್ದು ಹುಂಡಿ ತೆಗೆದ ಕೂಡಲೇ ಎಲ್ಲರಿಗೂ ಕೆಲ ಅಚ್ಚರಿಯ ಸಂಗತಿಗಳು ಎದುರಾದವು. ಸ್ವಾದಿಷ್ಟಕರ ಪತ್ರಗಳು, ಕೋಟಾ ನೋಟು, ವಿದೇಶಿ ಹಣ ಎಲ್ಲವನ್ನೂ ಕಂಡು ಎಲ್ಲರು ಅಚ್ಚರಿಗೊಂಡಿದ್ದಲ್ಲದೇ ಕೆಲ ಪತ್ರಗಳನ್ನು ಕಂಡು ನಗೆಗಡಲಿಗೆ ಜಾರಿದರು... ಹಾಸನಾಂಬೆ ದೇವಿ ದರ್ಶನ ನೆನ್ನೆಗೆ ಅಂತ್ಯವಾಗಿದ್ದು ಇಂದು ಸಿದ್ದೇಶ್ವರ ದೇವಾಲಯದ ಆವರಣದಲ್ಲಿ ಹುಂಡಿಹಣ ಎಣಿಕೆಯನ್ನು ಏರ್ಪಡಿಲಾಗಿತ್ತು. ಬೆಳಿಗ್ಗೆ 9 ರಿಂದಲೇ ಪ್ರಾರಂಭಗೊಂಡ ಎಣಿಕೆ ಕಾರ್ಯದಲ್ಲಿ ದೇವಾಲಯದ ಆಡಳಿತಾಧಿಕಾರಿ, ತಾಲ್ಲೂಕು ತಹಶೀಲ್ದಾರ್, ಕಂದಾಯ ಇಲಾಖೆ ಸಿಬ್ಬಂದಿಗಳು, ಬ್ಯಾಂಕ್ ಗಳ ಸಿಬ್ಬಂದಿಗಳು, ಸ್ಕೌಟ್ಸ್ ಗೈಡ್ಸ್ ನ ಸೇವಾದಾರರು ಹುಂಡಿ ಹಣ ಎಣಿಕೆಯಲ್ಲಿ ಪಾಲ್ಗೊಂಡಿದ್ದರು. ಹುಂಡಿಯಲ್ಲಿ ಲಕ್ಷ ಲಕ್ಷ ಹಣದ ಜೊತೆಗೆ ಪ್ರತಿ ವರ್ಷದಂತೆ ಸ್ವಾರಸ್ಯಕರ ಪತ್ರಗಳು ಪತ್ತೆಯಾಗಿದ್ದು ಅಚ್ಚರಿ ಮೂಡಿಸಿದವು. ಸರ್ಕಾರಿ ಕೆಲಸ ಕೊಡಿಸು, ನನ್ನನ್ನು ಸೆಲೆಬ್ರಿಟಿನ್ನಾಗಿ ಮಾಡು, ಎಸ್.ಎಸ್‌ಎಲ್ ಸಿ, ಪಿಯುಸಿಯಲ್ಲಿ ಒಳ್ಳೆ ಅಂಕ ಬರಲಿ, ಸಾಲ ಪಡೆದ ಎಂಟು ಲಕ್ಷ ಹಣ ವಾಪಸ್ ಕೊಡಿಸು, ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ರಮೇಶ್ ಮತ್ತು ಹಿಂದೆ ಅಧಿಕಾರದಲ್ಲಿದ್ದ ಅಧ್ಯಕ್ಷ ಕೃಷ್ಣಕುಮಾರ್ ಇಲಾಖೆಯಲ್ಲಿ ಭ್ರಷ್ಟಾಚಾರ ನಡೆಸಿದ್ದಾರೆ ಇವರನ್ನು ಶಿಕ್ಷಿಸುವ ಶಕ್ತಿಯನ್ನು ಜಿಲ್ಲಾಡಳಿತ, ಮಾಧ್ಯಮದವರಿಗೆ ನೀಡು ಎಂದು ಬರೆದು ಹುಂಡಿಯಲ್ಲಿ ಹಾಕಿದ್ದಲ್ಲದೇ ನಾನಾ ಬೇಡಿ ಕೆಗಳ ಪತ್ರಗಳನ್ನ ಹುಂಡಿಗೆ ಹಾಕಿದ್ದಾರೆ. ಅದ್ರಲ್ಲಿ ಸ್ವಾದಿಷ್ಟಕರ ಪತ್ರಗಳು, ಕೋಟಾ ನೋಟು, ವಿದೇಶಿ ಹಣ ಎಲ್ಲವನ್ನೂ ಕಂಡು ಎಲ್ಲರು ಅಚ್ಚರಿಗೊಂಡಿದ್ದಲ್ಲದೇ ಕೆಲ ಪತ್ರಗಳನ್ನು ಕಂಡು ನಗೆಗಡಲಲ್ಲಿ ತೇಲಿದ್ರು. ರಾಜ್ಯ ಹೊರ ರಾಜ್ಯಗಳಿಂದ ಹಾಸನಾಂಬೆ ಭಕ್ತರು ದರ್ಶನ ಪಡೆದಿದ್ದು ಇತ್ತೀಚಿನ ವರ್ಷಗಳಲ್ಲಿ ದೇವಾಲಯದ ಆದಾಯ ಕೂಡ ಕೋಟಿಗಳ ಗಡಿ ದಾಟುತ್ತಿದೆ. ಕಳೆದ ವರ್ಷ 2.65 ಕೋಟಿ ಆದಾಯ ದೇವಾಲಯದಿಂದ ಬಂದಿದ್ದು ಟಿಕೆಟ್, ಪ್ರಸಾದ ಲಾಡು ಮಾರಾಟ, ಹುಂಡಿಯಿಂದಲೇ ಹಣದ ರೂಪದಲ್ಲಿ ಕೋಟ್ಯಾಂತರ ರೂ. ಬರುತ್ತದೆ. ಇನ್ನು ಒಡವೆ ವಸ್ತ್ರಗಳಿಂದು ದೇವಾಲಯಕ್ಕೆ ಆದಾಯವಿದ್ದು ಕೇವಲ‌ ಕೆಲವೇ ದಿನಗಳಲ್ಲಿ ಲಕ್ಷಾಂತರ ಭಕ್ತರಿಗೆ ದರ್ಶನ ನೀಡಿ ಕೋಟ್ಯಾಂತರ ರೂ ಆದಯ ಹಾಸನಾಂಬೆ ದೇವಾಲಯದಿಂದ ಸರ್ಕಾರಕ್ಕೆ ಬರುತ್ತದೆ.

Body:7203289

Conclusion:ಸುನೀಲ್ ಕುಂಭೇನಹಳ್ಳಿ, ಈಟಿವಿ ನ್ಯೂಸ್, ಹಾಸನ.

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.