ಹಾವೇರಿ: ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿಗಳನ್ನು ನಗರದ ಸಿಇಎನ್ ಠಾಣಾ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಶಿಗ್ಗಾಂವಿ ನಗರದ ಮಲ್ಲಿಕಜಾನ್ ಅಲಿಯಾಸ್ ಗನ್ ಮಲ್ಲಿಕ್, ಮಹಮ್ಮದ್ ಅಬರಾರ ಪಠಾಣ, ಸಮೀರ್ ಅಲಿಯಾಸ್ ಗೇಲ್ ಕಣವಿ, ಸೈಮನ್ ಬಿಸ್ತಿ ಹಾಗೂ ವಿಜಯಪುರದ ಮಹಮ್ಮದ್ ಇಸಾಕ್ ಅಲಮೇಲ್ ಎಂದು ಗುರುತಿಸಲಾಗಿದೆ. ನಾಲ್ಕು ಕೆ.ಜಿ ಗಾಂಜಾ, ಎರಡು ಬೈಕ್, ಐದು ಮೊಬೈಲ್ ಫೋನ್ ಮತ್ತು 2,500 ರೂ ಹಣವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಬಂಕಾಪುರ ಟೋಲ್ ಗೇಟ್ ಬಳಿ ಇವರು ಗಾಂಜಾ ಮಾರಾಟ ಮಾಡುತ್ತಿದ್ದಾಗ ಸಿಇಎನ್ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಸಂತೋಷ ಪಾಟೀಲ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ.
ಇದನ್ನೂ ಓದಿ: ನಟ ದೂದ್ ಪೇಡಾ ದಿಗಂತ್ಗೆ ಗಂಭೀರ ಗಾಯ: ಗೋವಾದಿಂದ ಬೆಂಗಳೂರಿಗೆ ಏರ್ಲಿಫ್ಟ್ ಸಾಧ್ಯತೆ