ಹಾಸನ: ವ್ಯಕ್ತಿಗೆ ರೈಲು ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ಹಾಸನ ನಗರದ ಶ್ರೀನಗರ ಬಡಾವಣೆಯಲ್ಲಿ ನಡೆದಿದೆ.
ನಗರದ ಶ್ರೀನಗರ ಬಳಿಯ ಉಪ ಕಾರಾಗೃಹದ ಹಿಂಭಾಗದಲ್ಲಿ ರೈಲು ಹಳಿಯನ್ನು ದಾಟುವ ವೇಳೆ ಗೂಡ್ಸ್ ರೈಲು ಡಿಕ್ಕಿ ಹೊಡೆದು ವ್ಯಕ್ತಿ ಸಾವಿಗೀಡಾಗಿದ್ದಾನೆ. ಮೃತ ವ್ಯಕ್ತಿ 35-40ರ ವಯೋಮಾನವರಾಗಿದ್ದು ಇಂದು ಮಧ್ಯಾಹ್ನ ಸುಮಾರು 1 ಗಂಟೆಯ ಸುಮಾರಿಗೆ ಇಂತಹದೊಂದು ಘಟನೆ ಸಂಭವಿಸಿದೆ.
ಇನ್ನು ಮೃತದೇಹವನ್ನ ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದು, ರೈಲ್ವೆ ಪೊಲೀಸರು ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.