ETV Bharat / state

ಹಾಸನ ಎಪಿಎಂಸಿಯಲ್ಲಿ ಬಿತ್ತನೆ ಆಲೂಗಡ್ಡೆ ಮಾರಾಟಕ್ಕೆ ಚಾಲನೆ

author img

By

Published : May 12, 2020, 10:30 AM IST

ಲಾಕ್‌ಡೌನ್​ನಿಂದಾಗಿ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೀಗಾಗಿ ಬೆಲೆ ಕಡಿಮೆ ಮಾಡುವ ಉದ್ದೇಶದಿಂದ ಕ್ವಿಂಟಾಲ್ ಬಿತ್ತನೆ ಆಲೂಗಡ್ಡೆ ಬೆಲೆ ₹2,150 ರಿಂದ 2,250 ರೂ.ಗಳವರೆಗೆ ನಿಗದಿ ಮಾಡಲಾಗಿದೆ.

Sowing potato sales started at Hassan APMC
ಹಾಸನ ಎಪಿಎಂಸಿಯಲ್ಲಿ ಬಿತ್ತನೆ ಆಲೂಗೆಡ್ಡೆ ಮಾರಾಟಕ್ಕೆ ಚಾಲನೆ

ಹಾಸನ : ನಗರದ ಎಪಿಎಂಸಿ ಆವರಣದಲ್ಲಿ ಬಿತ್ತನೆ ಮಾಡುವ ಆಲೂಗೆಡ್ಡೆ ಮಾರಾಟಕ್ಕೆ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಲಾಯಿತು.

ಎಪಿಎಂಸಿ ಆವರಣದಲ್ಲಿರುವ ಗಣಪತಿ ದೇವಾಲಯದಲ್ಲಿ ಆಲೂಗಡ್ಡೆ ಚೀಲವನ್ನಿಟ್ಟು ಪೂಜೆ ಸಲ್ಲಿಸಿದ ಜಿಲ್ಲಾಧಿಕಾರಿ ಆರ್‌ ಗಿರೀಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಿವಾಸ್‌ಗೌಡ, ಎಪಿಎಂಸಿ ಅಧ್ಯಕ್ಷ ಮಂಜೇಗೌಡ ಹಾಗೂ ಆಲೂಗಡ್ಡೆ ವರ್ತಕರ ಸಂಘದ ಅಧ್ಯಕ್ಷ ಗೋಪಾಲ್ ಅವರು ಆಲೂಗೆಡ್ಡೆ ಮಾರಾಟಕ್ಕೆ ಚಾಲನೆ ನೀಡಿದರು.

ಈ ವೇಳೆ ಜಿಲ್ಲಾಧಿಕಾರಿ ಆರ್‌ ಗಿರೀಶ್ ಮಾತನಾಡಿ, ಬಿತ್ತನೆ ಆಲೂಗಡ್ಡೆ ಮಾರಾಟ ಮಾಡುವ ಮೊದಲು ಎಪಿಎಂಸಿ ಸಮಿತಿಯವರು ಶಾಸಕರು ಮತ್ತು ಅಧಿಕಾರಿಗಳ ಸಭೆ ನಡೆಸಲಾಗಿದೆ. ಸಭೆಯಲ್ಲಿ ನಿರ್ಧರಿಸಿದಂತೆ ಇಂದು ಬಿತ್ತನೆ ಆಲೂಗಡ್ಡೆ ವ್ಯಾಪಾರ ಆರಂಭಿಸಲಾಗಿದೆ. ಜಿಲ್ಲೆಯಲ್ಲಿ ಸುಮಾರು 15 ಸಾವಿರ ಹೆಕ್ಟೇರ್​ ಪ್ರದೇಶದಲ್ಲಿ ಆಲೂಗಡ್ಡೆ ಬೆಳೆಯಲಾಗುತ್ತಿದೆ. ಆಲೂಗಡ್ಡೆ ವ್ಯಾಪಾರ ಆಧರಿಸಿ ಅಗತ್ಯವಿದ್ದರೆ ಹೆಚ್ಚಿನ ಬಿತ್ತನೆ ಬೀಜ ಪೂರೈಸಲಾಗುವುದು ಎಂದರು.

ಹಾಸನ ಎಪಿಎಂಸಿಯಲ್ಲಿ ಬಿತ್ತನೆ ಆಲೂಗಡ್ಡೆ ಮಾರಾಟಕ್ಕೆ ಚಾಲನೆ..

ಲಾಕ್‌ಡೌನ್​ನಿಂದಾಗಿ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೀಗಾಗಿ ಬೆಲೆ ಕಡಿಮೆ ಮಾಡುವ ಉದ್ದೇಶದಿಂದ ಕ್ವಿಂಟಾಲ್ ಬಿತ್ತನೆ ಆಲೂಗಡ್ಡೆ ಬೆಲೆ ₹2,150 ರಿಂದ 2,250 ರೂ.ಗಳವರೆಗೆ ನಿಗದಿ ಮಾಡಲಾಗಿದೆ. ಪ್ರಾಥಮಿಕ ಕೃಷಿ ಸಹಕಾರ ಸಂಘದಿಂದ ಗೊಬ್ಬರ ಮತ್ತು ಔಷಧಿ ಸಹ ಲಭ್ಯವಿದೆ.

ಸದ್ಯ ಕೋಲ್ಡ್​ ಸ್ಟೋರೇಜ್​ನಲ್ಲಿದ್ದ 12,900 ಕ್ವಿಂಟ್ವಾಲ್ ಬಿತ್ತನೆ ಆಲೂಗಡ್ಡೆಯನ್ನು ಎಪಿಎಂಸಿಗೆ ತರಲಾಗಿದೆ. ಇನ್ನೂ 6 ಸಾವಿರ ಟನ್​ನಷ್ಟು ಲೋಡ್ ಬರಬೇಕಾಗಿದೆ ಎಂದರು.

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.