ಹಾಸನ : ಮಾನಸಿಕ ಖಿನ್ನತೆಗೊಳಗಾಗಿ ಆತ್ಮಹತ್ಯೆ ಮಾಡಿಕೊಂಡಿದ್ದ ಚನ್ನರಾಯಪಟ್ಟಣದ ನಗರ ಪಿಎಸ್ಐ ಅಂತ್ಯಕ್ರಿಯೆ ನಡೆಯಿತು. ಅವರ ಹುಟ್ಟೂರು ಲಾಳನಕೆರೆಯಲ್ಲಿ ಒಕ್ಕಲಿಗ ಸಂಪ್ರದಾಯದಂತೆ ನಡೆದ ಅಂತ್ಯಸಂಸ್ಕಾರದಲ್ಲಿ ಸಾಕಷ್ಟು ಜನ ಪಾಲ್ಗೊಂಡಿದ್ದರು.
ಮರಣೋತ್ತರ ಪರೀಕ್ಷೆಯ ಬಳಿಕ ಚನ್ನರಾಯಪಟ್ಟಣದ ನಗರ ಠಾಣೆಯ ಮುಂಭಾಗ ಕೆಲಹೊತ್ತು ಪಾರ್ಥಿವ ಶರೀರವನ್ನು ಇಡುವ ಮೂಲಕ ಸಾರ್ವಜನಿಕರ ದರ್ಶನಕ್ಕೆ ಅನುವು ಮಾಡಿಕೊಡಲಾಗಿತ್ತು.
![ಒಕ್ಕಲಿಗ ಸಂಪ್ರದಾಯದಂತೆ ಅಂತ್ಯಕ್ರಿಯೆ](https://etvbharatimages.akamaized.net/etvbharat/prod-images/kn-hsn-04-psi-cremetion-avb-7203289_31072020211801_3107f_03257_857.jpg)
ಇದಾದ ಬಳಿಕ ಚನ್ನರಾಯಪಟ್ಟಣದಿಂದ ಆ್ಯಂಬುಲೆನ್ಸ್ ಮೂಲಕ ಅರಸೀಕೆರೆ ತಾಲೂಕಿನ ಗಂಡಸಿ ಹ್ಯಾಂಡ್ ಪೋಸ್ಟ್ ಸಮೀಪ ಇರುವ ಸ್ವಗ್ರಾಮ ಲಾಳನಕೆರೆ ಗ್ರಾಮಕ್ಕೆ ಪಾರ್ಥಿವ ಶರೀರವನ್ನು ತರಲಾಯಿತು. ಮೃತದೇಹವನ್ನು ತರುತ್ತಿದ್ದಂತೆ ಸುತ್ತಮುತ್ತಲಿನ ಗ್ರಾಮಸ್ಥರು ಅಂತಿಮ ದರ್ಶನ ಮಾಡಲು ಸಾಗರೋಪಾದಿಯಲ್ಲಿ ಬಂದಿದ್ದರಿಂದ ಪೊಲೀಸರು ಅವರನ್ನು ನಿಯಂತ್ರಿಸುವಲ್ಲಿ ಹೈರಾಣಾದ್ರು.
![ಒಕ್ಕಲಿಗ ಸಂಪ್ರದಾಯದಂತೆ ಅಂತ್ಯಕ್ರಿಯೆ](https://etvbharatimages.akamaized.net/etvbharat/prod-images/kn-hsn-04-psi-cremetion-avb-7203289_31072020211801_3107f_03257_686.jpg)
ಪಾರ್ಥಿವ ಶರೀರದ ಅಂತಿಮ ದರ್ಶನದ ಬಳಿಕ ಸಕಲ ಸರ್ಕಾರಿ ಗೌರವಗಳೊಂದಿಗೆ ಪೊಲೀಸ್ ಅಧಿಕಾರಿಗಳ ವರ್ಗ ಮೂರು ಸುತ್ತು ಗಾಳಿಯಲ್ಲಿ ಗುಂಡು ಹಾರಿಸುವ ಮೂಲಕ ಗೌರವ ವಂದನೆ ಸಲ್ಲಿಸಿದರು. ಸರ್ಕಾರಿ ಗೌರವಗಳನ್ನು ಸಲ್ಲಿಸಿದ ಬಳಿಕ ಪಾರ್ಥಿವ ಶರೀರವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಯಿತು. ಎರಡು ದಿನಗಳ ಹಿಂದೆ ನಡೆದ ಎರಡು ಕೊಲೆಗಳು ಅಮಾಯಕ ಮತ್ತು ಪ್ರಾಮಾಣಿಕ ಅಧಿಕಾರಿಯನ್ನು ಬಲಿತೆಗೆದುಕೊಂಡಿದ್ದು ಮಾತ್ರ ದುರಂತವೇ ಸರಿ.