ETV Bharat / state

ಹಾಸನದಲ್ಲಿ ಬೆಳಗ್ಗೆ 6 ರಿಂದ ಮಧ್ಯಾಹ್ನ 2 ಗಂಟೆವರೆಗೆ ವ್ಯಾಪಾರ,ವಹಿವಾಟಿಗೆ ಅವಕಾಶ - Hassan corona news

ಸೋಮವಾರದಿಂದ ಶುಕ್ರವಾರದವರೆಗೂ ಬೆಳಗ್ಗೆ 6 ಗಂಟೆಯಿಂದ ಮಧ್ಯಾಹ್ನ 2ಗಂಟೆಯವರೆಗೂ ಅಂಗಡಿಗಳನ್ನು ತೆಗೆದು ವ್ಯಾಪಾರ ಮಾಡಲು ಅವಕಾಶ ನೀಡಿ ನಂತರ ವ್ಯಾಪಾರ ಮಾಡದೇ ಅಂಗಡಿಗಳನ್ನು ಮುಚ್ಚಬೇಕು. ವಾರದ ಶನಿವಾರ ಮತ್ತು ಭಾನುವಾರ ಸಂಪೂರ್ಣ ಲಾಕ್‌ಡೌನ್ ಮಾಡಿ ಸಹಕರಿಸಬೇಕು..

ಶಾಸಕ ಪ್ರೀತಂ ಜೆ. ಗೌಡ
ಶಾಸಕ ಪ್ರೀತಂ ಜೆ. ಗೌಡ
author img

By

Published : Jul 6, 2020, 7:57 PM IST

ಹಾಸನ : ಕೊರೊನಾ ಹಿನ್ನೆಲೆ ಎಲ್ಲರ ಸಲಹೆಯಂತೆ ವಾರದ 5 ದಿನ ಬೆಳಗ್ಗೆ 6 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೂ ವ್ಯಾಪಾರ,ವಹಿವಾಟಿಗೆ ಅವಕಾಶ ನೀಡಲಾಗಿದೆ. ಪ್ರತಿ ಶನಿವಾರ ಮತ್ತು ಭಾನುವಾರ ಎರಡು ದಿನಗಳ ಕಾಲ ಸಂಪೂರ್ಣ ಲಾಕ್‌ಡೌನ್ ಮಾಡಲು ಶಾಸಕ ಪ್ರೀತಂ ಜೆ ಗೌಡ ಮನವಿ ಮಾಡಿದರು.​ ​ ​ ​

ಲಾಕ್‌ಡೌನ್‌ ಕುರಿತಂತೆ ಶಾಸಕ ಪ್ರೀತಂ ಜೆ. ಗೌಡ

ನಗರಸಭೆಯಲ್ಲಿ ಕಟ್ಟಿನಕೆರೆ ಮಾರುಕಟ್ಟೆ ಮತ್ತು ಇತರೆ ಎಲ್ಲಾ ವ್ಯಾಪಾರಸ್ಥರ ಪ್ರಮುಖರ ಸಭೆಯಲ್ಲಿ ತೀರ್ಮಾನಿಸಿ ನಂತರ ಮಾಧ್ಯಮಕ್ಕೆ ಮಾಹಿತಿ ನೀಡಿದರು. ಕೊರೊನಾ ಸೋಂಕಿನ ಬಗ್ಗೆ ಸಾರ್ವಜನಿಕರಲ್ಲಿ ಮತ್ತು ವರ್ತಕರಲ್ಲಿ ಆತಂಕವಿದೆ. ಇದರ ನಿವಾರಣೆಗೆ ಸಭೆ ಕರೆಯಲಾಗಿತ್ತು. ನಗರದ ಕಟ್ಟಿನಕೆರೆ ಮಾರುಕಟ್ಟೆ ವ್ಯಾಪಾರಸ್ಥರು ಮತ್ತು ನಗರದ ಎಲ್ಲ ವ್ಯಾಪಾರಿಗಳ ಪ್ರಮುಖರು ಸೇರಿ ಸಭೆ ಮಾಡಿ ಈ ತೀರ್ಮಾನಕ್ಕೆ ಬರಲಾಗಿದೆ ಎಂದರು.

ಸೋಮವಾರದಿಂದ ಶುಕ್ರವಾರದವರೆಗೂ ಬೆಳಗ್ಗೆ 6 ಗಂಟೆಯಿಂದ ಮಧ್ಯಾಹ್ನ 2ಗಂಟೆಯವರೆಗೂ ಅಂಗಡಿಗಳನ್ನು ತೆಗೆದು ವ್ಯಾಪಾರ ಮಾಡಲು ಅವಕಾಶ ನೀಡಿ ನಂತರ ವ್ಯಾಪಾರ ಮಾಡದೇ ಅಂಗಡಿಗಳನ್ನು ಮುಚ್ಚಬೇಕು. ವಾರದ ಶನಿವಾರ ಮತ್ತು ಭಾನುವಾರ ಸಂಪೂರ್ಣ ಲಾಕ್‌ಡೌನ್ ಮಾಡಿ ಸಹಕರಿಸಬೇಕು. ಮನೆಯಿಂದ ಯಾರು ಹೊರಗೆ ಬರಬಾರದು ಎಂದು ತೀರ್ಮಾನ ಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.