ETV Bharat / state

ತಮಿಳುನಾಡಿಗೆ ಹೇಮಾವತಿ ನೀರು, ಶಾಸಕರಿಂದ ಕಚೇರಿ ಮುತ್ತಿಗೆ: ಈಟಿವಿ ವರದಿ ಫಲಶ್ರುತಿ

author img

By

Published : Aug 2, 2019, 7:56 PM IST

ಕರ್ನಾಟಕ ರಾಜ್ಯದಲ್ಲೇ ಬರ ತಾಂಡವವಾಡುತ್ತಿದ್ದು, ಹೇಮಾವತಿಯ ನೀರನ್ನು ತಮಿಳುನಾಡಿಗೆ ಬಿಟ್ಟಿದ್ದಕ್ಕೆ ಆಕ್ರೋಶಗೊಂಡ ರೈತರು ಹಾಗೂ ಅರಕಲಗೂಡು ಶಾಸಕರು ಪ್ರತಿಭಟನೆ ನಡೆಸಿದರು.

ಕಛೇರಿಗೆ ಮುತ್ತಿಗೆ ಹಾಕಿದ ಪ್ರತಿಬಟನಾಕಾರರು

ಹಾಸನ: ನಾಲೆಗೆ ನೀರು ಹರಿಸದೇ ತಮಿಳುನಾಡಿಗೆ ನೀರು ಬಿಟ್ಟಿರುವುದನ್ನು ವಿರೋಧಿಸಿ ಅರಕಲಗೂಡು ಶಾಸಕ ಎ ಟಿ ರಾಮಸ್ವಾಮಿ ಕಾವೇರಿ ನೀರಾವರಿ ನಿಗಮದ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.

ಬರಗಾಲದಲ್ಲಿಯೂ ಹೇಮೆಯ ಒಡಲಿನಿಂದ ತಮಿಳುನಾಡಿಗೆ ನೀರು ಹರಿಬಿಟ್ಟ ಹಿನ್ನೆಲೆಯಲ್ಲಿ ಈಟಿವಿ ಭಾರತ ಸಮಗ್ರ ಸುದ್ದಿ ಪ್ರಕಟಿಸಿತ್ತು. ವರದಿಯಿಂದ ಎಚ್ಚೆತ್ತ ಅರಕಲಗೂಡು ಶಾಸಕ ಎಟಿ ರಾಮಸ್ವಾಮಿ, ಹೇಮಾವತಿ ಎಡದಂಡೆ ನಾಲೆ ಕಚೇರಿ ಮುಂದೆ ಸುಮಾರು ಎರಡು ಗಂಟೆಗಳ ಕಾಲ ಪ್ರತಿಭಟನೆ ಮಾಡಿ ನಂತರ ಕಚೇರಿಗೆ ಮುತ್ತಿಗೆ ಹಾಕಿದರು.

ಈಗಾಗಲೇ ಜಿಲ್ಲೆಯಲ್ಲಿ ಬರಗಾಲ ತಾಂಡವವಾಡುತ್ತಿದೆ. ಜಲಾಶಯ ಕೂಡ ನೀರಿಲ್ಲದೆ ಭಣಗುಡುತ್ತಿವೆ. ಕಳೆದ 15 ದಿನಗಳ ಹಿಂದಷ್ಟೇ ಮಲೆನಾಡು ಭಾಗದಲ್ಲಿ ಮಳೆಯಾಗಿದ್ದರಿಂದ 10 ಟಿಎಂಸಿ ನೀರು ಶೇಖರಣೆಯಾಗಿದೆ. ಜಿಲ್ಲೆಯ ಜನ-ಜಾನುವಾರುಗಳು ಕೂಡ ನೀರಿಗೆ ಹಾಹಾಕಾರ ಪಡುವ ಸಂದರ್ಭದಲ್ಲಿ ತಮಿಳುನಾಡಿಗೆ ನೀರು ಹರಿಸುತ್ತಿರುವುದು ಮಲತಾಯಿ ಧೋರಣೆ. ತಮಿಳುನಾಡಿಗೆ ನೀರು ಹರಿಸುವ ಬದಲು ದಯಮಾಡಿ ಹೇಮಾವತಿ ಎಡದಂಡೆ ನಾಲೆಗೆ ಹರಿಸುವ ಮೂಲಕ ಜಿಲ್ಲೆಯ ರೈತಾಪಿ ವರ್ಗದ ಹಿತ ಕಾಯಬೇಕು. ಇಲ್ಲವಾದಲ್ಲಿ ಮುಂದಿನ ದಿನದಲ್ಲಿ ಮತ್ತಷ್ಟು ಉಗ್ರ ಸ್ವರೂಪದ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ಹೇಮಾವತಿ ಎಡದಂಡೆ ನಾಲೆ ಕಚೇರಿಗೆ ಮುತ್ತಿಗೆ ಹಾಕಿದ ಪ್ರತಿಭಟನಾಕಾರರು

ಶಾಸಕರು ಕಚೇರಿಗೆ ಮುತ್ತಿಗೆ ಹಾಕುವ ಸೂಚನೆ ಅರಿತ ಪೊಲೀಸರು, ಕಚೇರಿ ಒಳ ಪ್ರವೇಶಿಸದಂತೆ ಗೇಟ್ ಬಂದ್ ಮಾಡುವ ಮೂಲಕ ಪ್ರತಿಭಟನಾಕಾರರನ್ನು ನಿಯಂತ್ರಿಸಿದ್ರು. ಈ ವೇಳೆ ಶಾಸಕ ಎ ಟಿ ರಾಮಸ್ವಾಮಿ ಸೇರಿದಂತೆ ಪ್ರತಿಭಟನಾಕಾರರು ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ ನಡೆಯಿತು.

Intro:ಈಟಿವಿ ಫಲಶ್ರುತಿ

ಹಾಸನ: ನಾಲೆಗೆ ನೀರು ಹರಿಸದೇ ತಮಿಳುನಾಡಿಗೆ ನೀರು ಬಿಟ್ಟಿರುವುದನ್ನ ವಿರೋಧಿಸಿ ಇಂದು ಅರಕಲಗೂಡು ಶಾಸಕ ಎ ಟಿ ರಾಮಸ್ವಾಮಿ ಕಾವೇರಿ ನೀರಾವರಿ ನಿಗಮದ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು. ಇದು ನಿಮ್ಮ ಈಟಿವಿ ಭಾರತದ ಫಲಶ್ರುತಿ.

ಬರಗಾಲದಲ್ಲಿಯೂ ಹೇಮೆ ಒಡಲಿನಿಂದ ತಮಿಳುನಾಡಿಗೆ ನೀರನ್ನು ಹರಿಬಿಟ್ಟ ಹಿನ್ನೆಲೆಯಲ್ಲಿ ಈಟಿವಿ ಭಾರತ ಸಮಗ್ರ ಸುದ್ದಿಯನ್ನು ಪ್ರಕಟಿಸಿತ್ತು. ವರದಿದಿಂದ ಎಚ್ಚೆತ್ತ ಅರಕಲಗೂಡು ಶಾಸಕ ಎಟಿ ರಾಮಸ್ವಾಮಿ ಹೇಮಾವತಿ ಎಡದಂಡೆ ನಾಲೆ ಕಚೇರಿ ಮುಂದೆ ಸುಮಾರು ಎರಡು ಗಂಟೆಗಳ ಕಾಲ ಪ್ರತಿಭಟನೆ ಮಾಡಿ ಕಚೇರಿಗೆ ಮುತ್ತಿಗೆ ಹಾಕಿದರು.

ಈಗಾಗಲೇ ಜಿಲ್ಲೆಯಲ್ಲಿ ಬರಗಾಲ ತಾಂಡವಾಡುತ್ತಿದೆ ಜಲಾಶಯ ಕೂಡ ನೀರಿಲ್ಲದೆ ಬಣಗುಡುತ್ತಿವೆ ಇಂಥ ವೇಳೆಯಲ್ಲಿ ಕಳೆದ 15 ದಿನಗಳ ಹಿಂದಷ್ಟೇ ಮಲೆನಾಡು ಭಾಗದಲ್ಲಿ ಮಳೆಯಾಗಿದ್ದರಿಂದ 10 ಟಿಎಂಸಿ ನೀರು ಶೇಖರಣೆಯಾಗಿದೆ. ಜಿಲ್ಲೆಯ ಜನ-ಜಾನುವಾರುಗಳು ಕೂಡ ನೀರಿಗೆ ಹಾಹಾಕಾರ ಪಡುವ ಸಂದರ್ಭದಲ್ಲಿ ತಮಿಳುನಾಡಿಗೆ ನೀರು ಹರಿಸುತ್ತಿರುವ ಮಲತಾಯಿ ಧೋರಣೆ. ತಮಿಳುನಾಡಿಗೆ ಹರಿಸುವ ಬದಲು ದಯಮಾಡಿ ಹೇಮಾವತಿ ಎಡದಂಡೆ ನಾಲೆಗೆ ಹರಿಸುವ ಮೂಲಕ ಜಿಲ್ಲೆಯ ರೈತಾಪಿ ವರ್ಗದ ಹಿತ ಕಾಯಬೇಕು ಇಲ್ಲವಾದಲ್ಲಿ ಮುಂದಿನ ದಿನದಲ್ಲಿ ಮತ್ತಷ್ಟು ಉಗ್ರಸ್ವರೂಪದ ಪ್ರತಿಭಟನೆ ಮಾಡಬೇಕಾಗುತ್ತದೆ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ಇನ್ನು ಶಾಸಕರು ಕಚೇರಿಗೆ ಮುತ್ತಿಗೆ ಹಾಕುವ ಸೂಚನೆಯನ್ನ ಆಗಮಿಸಿದ ಪೊಲೀಸರು ಕಚೇರಿ ಒಳಗೆ ಪ್ರವೇಶಿಸದಂತೆ ಗೇಟ್ ಬಂದ್ ಮಾಡುವ ಮೂಲಕ ಪ್ರತಿಭಟನಾಕಾರರನ್ನು ನಿಯಂತ್ರಣ ಮಾಡಿದ್ರು ಈ ವೇಳೆ ಶಾಸಕ ಎ ಟಿ ರಾಮಸ್ವಾಮಿ ಸೇರಿದಂತೆ ಪ್ರತಿಭಟನಾಕಾರರ ನಡುವೆ ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ ಕೂಡ ನಡೆಯಿತು.

ಇನ್ನು ಇರುವ ನೀರನ್ನು ದಯಮಾಡಿ ರೈತಾಪಿ ವರ್ಗ ಉಳಿಸುವ ಸಲುವಾಗಿ ಕೆರೆ-ಕಟ್ಟೆಗಳಿಗೆ ನೀರು ತುಂಬಿಸುವಂತೆ ಇದೇ ಸಂದರ್ಭದಲ್ಲಿ ಒತ್ತಾಯಿಸಿದರು.
ತಮಿಳುನಾಡಿಗೆ ಕಳೆದ ನಾಲ್ಕು ದಿನಗಳಿಂದ ನೀರು ಹರಿಸಲಾಗುತ್ತಿದೆ ಎಂಬ ಸುದ್ದಿಯನ್ನು ಸಮಗ್ರವಾಗಿ ಈಟಿವಿ ಭಾರತ ಬಿತ್ತರಿಸಿತ್ತು. ವರದಿಯ ಬೆನ್ನಲ್ಲಿಯೇ ಶಾಸಕ ಪ್ರತಿಭಟನೆ ಮೂಲಕ ನೀರು ಬಿಟ್ಟಿರುವುದನ್ನು ವಿರೋಧಿಸಿ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು ಈಟಿವಿ ಭಾರತದ ಅಂದರೆ ತಪ್ಪಾಗಲ್ಲ.

ಸುನಿಲ್ ಕುಂಭೇನಹಳ್ಳಿ, ಈಟಿವಿ ನ್ಯೂಸ್, ಹಾಸನBody:0Conclusion:0
ETV Bharat Logo

Copyright © 2024 Ushodaya Enterprises Pvt. Ltd., All Rights Reserved.