ETV Bharat / state

'ಹಣವಿಲ್ಲದಿದ್ರೆ ಹೇಳಲಿ, ನಾವೇ ಭಿಕ್ಷೆ ಬೇಡಿ ಸೋಂಕಿತರಿಗೆ ಚಿಕಿತ್ಸೆ ಕೊಡಿಸುತ್ತೇವೆ' - ರೆಮ್ಡೆಸಿವಿರ್ ಇಂಜೆಕ್ಷನ್

ರೆಮ್ಡೆಸಿವಿರ್ ಇಂಜೆಕ್ಷನ್​ ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿದ್ದರೂ ಸರ್ಕಾರ ಕಣ್ಮುಚ್ಚಿ ಕುಳಿತಿದೆ. ಹಾಸನ ಜಿಲ್ಲೆಯಲ್ಲಿ ಹೇಳೋರು, ಕೇಳೋರು ಯಾರೂ ಇಲ್ಲ. ಸರ್ಕಾರ ಏನಾದ್ರು ಪಾಪರ್ ಬಿದ್ದಿದ್ದೀಯಾ?. ಸರ್ಕಾರ ಹಣವಿಲ್ಲ ಎಂದರೆ ಹೇಳಲಿ. ಆಗ ನಾವೇ ತಟ್ಟೆ ಹಿಡಿದು ಭಿಕ್ಷೆ ಬೇಡಿ ಸೋಂಕಿತರಿಗೆ ಚಿಕಿತ್ಸೆ ಕೊಡಿಸುತ್ತೇವೆ ಎಂದು ಮಾಜಿ ಸಚಿವ ಹೆಚ್.ಡಿ.ರೇವಣ್ಣ ಕಿಡಿಕಾರಿದ್ದಾರೆ.

Hassan
ಮಾಜಿ ಸಚಿವ ಹೆಚ್.ಡಿ.ರೇವಣ್ಣ
author img

By

Published : Apr 27, 2021, 7:50 AM IST

ಹಾಸನ: ರೆಮ್ಡೆಸಿವಿರ್ ಇಂಜೆಕ್ಷನ್​ ಕಾಳಸಂತೆಯಲ್ಲಿ ಮಾರಾಟವಾಗುತ್ತಿದೆ. ಸರ್ಕಾರ ಕೂಡಲೇ ಖಾಸಗಿ ಮತ್ತು ಸರ್ಕಾರಿ ಆಸ್ಪತ್ರೆಗಳಿಗೆ ಹೆಚ್ಚುವರಿಯಾಗಿ 2 ಸಾವಿರ ರೆಮ್ಡೆಸಿವಿರ್ ಇಂಜೆಕ್ಷನ್​ ಉಚಿತವಾಗಿ ನೀಡುವ ವ್ಯವಸ್ಥೆ ಮಾಡಬೇಕು ಎಂದು ಮಾಜಿ ಸಚಿವ ಹೆಚ್.ಡಿ.ರೇವಣ್ಣ ಒತ್ತಾಯಿಸಿದರು.

ಹೆಚ್.ಡಿ.ರೇವಣ್ಣ ಟೀಕಾಪ್ರಹಾರ

ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲೆಯಲ್ಲಿ ರೆಮ್ಡೆಸಿವಿರ್ ಇಂಜೆಕ್ಷನ್ ಕೊರತೆಯಿತ್ತು. ನಾನೇ ಹೇಳಿ ಖಾಸಗಿಯವರಿಗೆ 480 ಇಂಜೆಕ್ಷನ್ ಕೊಡಿಸಿದ್ದೇನೆ. ಡ್ರಗ್ ಕಂಟ್ರೋಲರ್ ಫೋನ್ ರಿಸೀವ್ ಮಾಡ್ತಿಲ್ಲ. ಹಾಸನ ಜಿಲ್ಲೆಗೆ ತಕ್ಷಣ 2 ಸಾವಿರ ರೆಮ್ಡೆಸಿವಿರ್ ಇಂಜೆಕ್ಷನ್ ಕಳುಹಿಸಿ, ಉಚಿತವಾಗಿ ಕೊಡಬೇಕು. ಇಂಜೆಕ್ಷನ್​ ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿದ್ದರೂ ಸರ್ಕಾರ ಕಣ್ಮುಚ್ಚಿ ಕುಳಿತಿದೆ.

ಜಿಲ್ಲೆಯಲ್ಲಿ ಹೇಳೋರು, ಕೇಳೋರು ಯಾರು ಇಲ್ಲ. ಸರ್ಕಾರ ಏನಾದ್ರು ಪಾಪರ್ ಬಿದ್ದಿದ್ದೀಯಾ?. ಸರ್ಕಾರ ಹಣವಿಲ್ಲ ಎಂದರೆ ಹೇಳಲಿ. ಆಗ ನಾವೇ ತಟ್ಟೆ ಹಿಡಿದು ಭಿಕ್ಷೆ ಬೇಡಿ ಚಿಕಿತ್ಸೆ ಸೋಂಕಿತರಿಗೆ ಕೊಡಿಸುತ್ತೇವೆ. ನಮ್ಮ ಕಾರ್ಯಕರ್ತರಿಗೂ ಭಿಕ್ಷೆ ಬೇಡಿ ಹಣ ಸಂಗ್ರಹಿಸುವಂತೆ ಹೇಳುತ್ತೇನೆ. ಸರ್ಕಾರ ಇಷ್ಟೊಂದು ಕೀಳುಮಟ್ಟಕ್ಕೆ ಇಳಿಯಬಾರದು. ಬಡವರನ್ನು ನೋಯಿಸಬೇಡಿ, ನಿಮ್ಮ ಮಕ್ಕಳಿಗೆ ನಿಮ್ಮ ಕುಟುಂಬಕ್ಕೆ ಒಳ್ಳೆಯದಾಗುವುದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಹಳ್ಳಿಗಳಲ್ಲಿ ಬಡವರು ನರಳಾಡುತ್ತ ಸಾಯುತ್ತಿದ್ದಾರೆ. ಸರ್ಕಾರ ಖಾಸಗಿ ಆಸ್ಪತ್ರೆಗಳ ಗುಲಾಮಾರಾಗಿದ್ದೇವೆ ಎಂದು ಹೇಳಲಿ. ಉಸ್ತುವಾರಿ ಸಚಿವರು ಏನು ಮಾಡುತ್ತಾರೆ? ಈ ಜಿಲ್ಲೆ ಲೂಟಿಕೋರರ ಕೈಸೇರಿದೆ. ನನ್ನ 30 ವರ್ಷದ ರಾಜಕೀಯದಲ್ಲಿ ಇಂತಹ ಕೆಟ್ಟ ಸರ್ಕಾರವನ್ನು ನೋಡಿರಲಿಲ್ಲ. ಆಸ್ಪತ್ರೆ ಮುಂದೆ ಕೊರೊನಾ ಸೋಂಕಿತರು ಕಾಯುತ್ತಾ ನಿಂತಿರುತ್ತಾರೆ. ಕರೆ ಮಾಡಿದರೆ ಆರೋಗ್ಯ ಸಚಿವರು ಫೋನ್ ತೆಗೆಯುವುದಿಲ್ಲ. ಇದೇ ರೀತಿ ಮುಂದುವರೆದರೆ ಸರ್ಕಾರದ ವಿರುದ್ಧ ನಮ್ಮ ಪಕ್ಷದಿಂದ ಉಗ್ರಹೋರಾಟ ಮಾಡಬೇಕಾಗುತ್ತದೆ ಎಂದರು.

ಬಡವರಿಗೆ ಎರಡ್ಮೂರು ತಿಂಗಳಿಗಾಗುವಷ್ಟು ಅಕ್ಕಿ, ಗೋಧಿ ನೀಡಲಿ. ಅವರಪ್ಪನ ಮನೆಯ ದುಡ್ಡನ್ನ ಕೊಡಲ್ಲ. ತೆರಿಗೆ ಹಣವನ್ನು ಸರ್ಕಾರ ನೀಡುತ್ತದೆ ಅಷ್ಟೇ. ಇಲ್ಲವಾದರೆ, ಸರ್ಕಾರ ಸತ್ತುಹೋಗಿದೆ ಎಂದು ಕೈಎತ್ತಿ ಮಲಗಿಕೊಳ್ಳಲಿ ಎಂದು ಕಿಡಿಕಾರಿದರು.

ಇದನ್ನೂ ಓದಿ: ಇಂದಿನಿಂದ ರಾಜ್ಯಾದ್ಯಂತ 14 ದಿನ ಕೋವಿಡ್​ ಕರ್ಫ್ಯೂ.. ಕಠಿಣ ನಿಯಮ ಜಾರಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.