ಹಾಸನ: ಜಿಲ್ಲೆಯಲ್ಲಿ ಕೊರೊನಾ ದಿಢೀರ್ ಏರಿಕೆಯಾಗಿದ್ದು, ಮಂಗಳವಾರ ಒಂದೇ ದಿನ 461 ಮಂದಿಗೆ ಸೋಂಕು ದೃಢಪಟ್ಟಿದೆ.
ಸೋಂಕಿತರ ಪ್ರಮಾಣ ಇದೀಗ ಒಟ್ಟು 8,486ಕ್ಕೆ ಏರಿದೆ.ಇಂದು 11 ಮಂದಿ ಸಾವನ್ನಪ್ಪಿದ್ದು, ಒಟ್ಟು ಮೃತರ ಸಂಖ್ಯೆ ದ್ವಿಶತಕ ಬಾರಿಸಿದೆ. ಇಂದು ಗುಣಮುಖರಾಗಿ ಆಸ್ಪತ್ರೆಯಿಂದ 206 ಮಂದಿ ಬಿಡುಗಡೆಯಾಗಿದ್ದಾರೆ. ಸಕ್ರಿಯ ಸೋಂಕಿತರ ಸಂಖ್ಯೆಗಿಂತ ಗುಣಮುಖರಾಗಿ ಬಿಡುಗಡೆಯಾದವರ ಸಂಖ್ಯೆ ಜಿಲ್ಲೆಯಲ್ಲಿ ಹೆಚ್ಚಾಗಿದೆ.
ಪ್ರಭಾರ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಕಾಂತರಾಜು ಈ ಮಾಹಿತಿ ನೀಡಿದ್ದು, ಇಂದು ಹಾಸನ ತಾಲೂಕಿನಲ್ಲಿ 82 ಹಾಗೂ 80 ವರ್ಷದ ಇಬ್ಬರು ವೃದ್ಧರು ಹಾಗೂ 35 ವರ್ಷದ ಓರ್ವ ಮಹಿಳೆ ಸೇರಿದಂತೆ 6 ಮಂದಿ, ಆಲೂರು ತಾಲೂಕಿನ 40 ವರ್ಷದ ಮಹಿಳೆ, ಬೇಲೂರು ತಾಲೂಕಿನ 50 ವರ್ಷದ ವ್ಯಕ್ತಿ, ಚನ್ನರಾಯಪಟ್ಟಣ ತಾಲೂಕಿನ 40 ವರ್ಷದ ವ್ಯಕ್ತಿ, ಹೊಳೆನರಸೀಪುರದ. 53 ವರ್ಷದ ವ್ಯಕ್ತಿ ಮತ್ತು ತುಮಕೂರು ಜಿಲ್ಲೆಗೆ ಸೇರಿದ 48 ವರ್ಷದ ಓರ್ವ ಮಹಿಳೆ ಸೇರಿ ಒಟ್ಟಾರೆ 11 ರೋಗಿಗಳು ನಗರದ ‘ಹಿಮ್ಸ್’ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.
ಹಾಸನ ತಾಲೂಕಿನಲ್ಲಿ ಸಾವುಗಳ ಸಂಖ್ಯೆ 78ಕ್ಕೆ ಏರಿದ್ದು, ಇಂದು ಹೊಸ 275 ಸೋಂಕಿತರೂ ಸೇರಿ ಒಟ್ಟು 3,522ಕ್ಕೆ ಏರಿದಂತಾಗಿದೆ. ಅದೇ ರೀತಿ ಇಂದು ತಾಲೂಕಿನಲ್ಲಿ 107 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಈವರೆಗೆ ಆಸ್ಪತ್ರೆಯಿಂದ 2,223 ರೋಗಿಗಳು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ತುರ್ತು ನಿಗಾ ಘಟಕ (ಐಸಿಯು)ದಲ್ಲಿ ಇರುವ 51 ಮಂದಿ ಸೇರಿದಂತೆ ಇನ್ನೂ ಚಿಕಿತ್ಸೆ ಪಡೆಯುತ್ತಿರುವ ಒಟ್ಟು ಸಕ್ರಿಯ ಸೋಂಕಿತರ ಸಂಖ್ಯೆ ಇದೀಗ 2,784 ಕ್ಕೆ ಏರಿದೆ.
ಹೊಸದಾಗಿ ಇಂದು ಪತ್ತೆಯಾದ 461 ಪ್ರಕರಣಗಳಲ್ಲಿ ಹಾಸನ ಬಿಟ್ಟು ಉಳಿದ ತಾಲೂಕುವಾರು ವಿವರ ಇಂತಿದೆ:
ಆಲೂರು-21
ಅರಕಲಗೂಡು-8
ಅರಸೀಕೆರೆ-41
ಬೇಲೂರು-47
ಚನ್ನರಾಯಪಟ್ಟಣ-42
ಹೊಳೆನರಸೀಪುರ-18
ಹಾಗೂ ಸಕಲೇಶಪುರ ತಾಲೂಕು-6
ಮತ್ತು ಇತರ ಜಿಲ್ಲೆಗೆ ಸೇರಿದವರು-3
ಇದುವರೆಗಿನ ತಾಲೂಕುವಾರು ವಿವರ:
ಆಲೂರು-264
ಅರಕಲಗೂಡು-774
ಅರಸೀಕೆರೆ-1149
ಬೇಲೂರು-687
ಚನ್ನರಾಯಪಟ್ಟಣ-1095
ಹಾಸನ-3522
ಹೊಳೆನರಸೀಪುರ-711
ಸಕಲೇಶಪುರ ತಾಲ್ಲೂಕು-233 ಮತ್ತು ಇತರ ಜಿಲ್ಲೆಗೆ 56 ಜನ ಸೇರಿ ಒಟ್ಟು 8,486 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ ಎಂದು ಪ್ರಭಾರಿ ಆರೋಗ್ಯಾಧಿಕಾರಿ ಡಾ. ಕಾಂತರಾಜ್ ತಿಳಿಸಿದ್ದಾರೆ.