ETV Bharat / state

ಹಾಸನ ಜಿಲ್ಲಾಡಳಿತದಿಂದ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ - ವಿವಿಧ ಹುದ್ದೆಗಳ ಭರ್ತಿಗೆ ಅಧಿಸೂಚನೆ

Hassan ZP Recruitment: ಎನ್​ಎಚ್​ಎಂ ಮತ್ತು ನರೇಗಾ ಯೋಜನೆಯಡಿ ವಿವಿಧ ಹುದ್ದೆಗಳ ಭರ್ತಿಗೆ ಹಾಸನ ಜಿಲ್ಲಾಡಳಿತ ಅರ್ಜಿ ಆಹ್ವಾನಿಸಿದೆ.

Hassa ZP Recruitment various post in nrega and NHM

author img

By ETV Bharat Karnataka Team

Published : Sep 12, 2023, 12:46 PM IST

ಹಾಸನ ಜಿಲ್ಲಾ ಪಂಚಾಯತ್​ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅಧಿಸೂಚನೆ ಪ್ರಕಟಿಸಲಾಗಿದೆ. ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ನೇಮಕಾತಿ ನಡೆಯಲಿದೆ. ತಾಂತ್ರಿಕ ಸಹಾಯಕರ ಹುದ್ದೆಗಳಿಗೆ ಆಸಕ್ತ ಅಭ್ಯರ್ಥಿಗಳು ಆನ್​ಲೈನ್​ ಮೂಲಕ ಅರ್ಜಿ ಸಲ್ಲಿಸಬಹುದು. ಯಾವುದೇ ಲಿಖಿತ ಪರೀಕ್ಷೆ ಇರುವುದಿಲ್ಲ. ಶೈಕ್ಷಣಿಕ ಅಂಕಗಳ ಶ್ರೇಷ್ಠತೆಯ ಆಧಾರದಡಿ ಭರ್ತಿಗೆ ಜಿಲ್ಲಾ ಪಂಚಾಯತ್ ಮುಂದಾಗಿದೆ.

ಅಧಿಸೂಚನೆ
ಅಧಿಸೂಚನೆ

ಹುದ್ದೆಗಳು ಯಾವುವು, ಎಷ್ಟು?:

  • ತಾಂತ್ರಿಕ ಸಹಾಯಕರು, ತೋಟಗಾರಿಕೆ - 6
  • ತಾಂತ್ರಿಕ ಸಹಾಯಕರು, ರೇಷ್ಮೆ - 2
  • ತಾಂತ್ರಿಕ ಸಹಾಯಕರು, ಅರಣ್ಯ - 4

ವಿದ್ಯಾರ್ಹತೆ: ತೋಟಗಾರಿಕೆ, ರೇಷ್ಮೆ ಕೃಷಿ ಮತ್ತು ಅರಣ್ಯ ಶಾಸ್ತ್ರದಲ್ಲಿ ಬಿಎಸ್ಸಿ ಅಥವಾ ಎಂಎಸ್ಸಿ ಪದವಿ. ಸಾಮಾನ್ಯ ಕಂಪ್ಯೂಟರ್​​ ಜ್ಞಾನ.

ವಯೋಮಿತಿ: ಗರಿಷ್ಠ ವಯೋಮಿತಿ 45 ವರ್ಷ.

ವೇತನ: ಮಾಸಿಕ 28 ಸಾವಿರ ರೂಪಾಯಿ.

ವಿಶೇಷ ಸೂಚನೆ: ಈ ಹುದ್ದೆಗಳು ತಾತ್ಕಾಲಿಕ. ಸಂಪೂರ್ಣ ಹೊರಗುತ್ತಿಗೆ ಆಧಾರದ ಮೇಲೆ ನೇಮಕಾತಿ ನಡೆಸಲಾಗುತ್ತದೆ. ಹುದ್ದೆಗಳ ಅವಧಿ ಕುರಿತು ಸ್ಪಷ್ಟಪಡಿಸಿಲ್ಲ.

ಆಯ್ಕೆ ಪ್ರಕ್ರಿಯೆ: ಪದವಿ ಅಥವಾ ಸ್ನಾತಕೋತ್ತರ ಪದವಿಯಲ್ಲಿ ಪಡೆದ ಅಂಕಗಳ ಮೆರಿಟ್​ ಆಧಾರದ ಮೇಲೆ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ.

ಅರ್ಜಿ ಸಲ್ಲಿಕೆ: ಆನ್​ಲೈನ್​ ಮೂಲಕ ಅಭ್ಯರ್ಥಿಗಳು ಅರ್ಜಿ ಸಲ್ಲಿಕೆ ಮಾಡಬೇಕಿದೆ. ಯಾವುದೇ ಅರ್ಜಿ ಶುಲ್ಕವಿಲ್ಲ. ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದ್ದು, ಸೆಪ್ಟೆಂಬರ್​ 13 ಕಡೇಯ ದಿನವಾಗಿದೆ.

ಅಧಿಕೃತ ಅಧಿಸೂಚನೆ ಹಾಗೂ ಅರ್ಜಿ ಸಲ್ಲಿಕೆಗೆ hassanzp.kar.nic.in ಜಾಲತಾಣಕ್ಕೆ ಭೇಟಿ ನೀಡಬಹುದು.

ವಿವಿಧ ವೈದ್ಯಕೀಯ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ: ಹಾಸನ ಜಿಲ್ಲೆಯಲ್ಲಿ ರಾಷ್ಟ್ರೀಯ ಆರೋಗ್ಯ ಅಭಿಯಾನದಡಿಯಲ್ಲಿ ವಿವಿಧ ವೈದ್ಯಕೀಯ ಹುದ್ದೆಗಳ ಭರ್ತಿಗೂ ಅರ್ಜಿ ಆಹ್ವಾನಿಸಲಾಗಿದೆ. ವಿವಿಧ ವೈದ್ಯರು, ಶುಶ್ರೂಷಕಿ ಮತ್ತು ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರ ಹುದ್ದೆ ಸೇರಿದಂತೆ ಒಟ್ಟು 46 ಹುದ್ದೆ ಭರ್ತಿಗೆ ಅಧಿಸೂಚನೆಯಾಗಿದೆ. ಈ ಹುದ್ದೆಗಳನ್ನು ಹೊರಗುತ್ತಿಗೆ ಆಧಾರದ ಮೇಲೆ ಭರ್ತಿ ಮಾಡಲಾಗುತ್ತದೆ. ಮೆರಿಟ್​ ಮೇಲೆ ನೇಮಕಾತಿ ನಡೆಯಲಿದೆ. ಆಸಕ್ತರು hassanzp.kar.nic.in ಜಾಲತಾಣದ ಮೂಲಕ ಅರ್ಜಿ ಸಲ್ಲಿಸಬಹುದು.

ಇದನ್ನೂ ಓದಿ: Job Alert: ತುಮಕೂರು ಎಚ್​ಎಎಲ್​ನಲ್ಲಿದೆ ಉದ್ಯೋಗಾವಕಾಶ; 41 ಹುದ್ದೆ ನೇಮಕಾತಿಗೆ ಅರ್ಜಿ ಆಹ್ವಾನ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.