ETV Bharat / state

ಬಿಜೆಪಿ ಸರ್ಕಾರ ದ್ವೇಷದ ರಾಜಕಾರಣ ಮಾಡುತ್ತಿದೆ: ಮಾಜಿ ಸಚಿವ ಹೆಚ್.ಡಿ. ರೇವಣ್ಣ ಕಿಡಿ

ಬಿಜೆಪಿ ಸರ್ಕಾರವು ದ್ವೇಷದ ರಾಜಕಾರಣ ಮಾಡುತ್ತಿದೆ. ಇದು ಕಾಮಗಾರಿ ತಡೆ ಹಿಡಿಯುವ ಸರ್ಕಾರವಾಗಿದೆ ಎಂದು ಮಾಜಿ ಸಚಿವ ಹೆಚ್.ಡಿ. ರೇವಣ್ಣ ವ್ಯಂಗ್ಯವಾಡಿದರು.

-hd-revanna
ಮಾಜಿ ಸಚಿವ ಹೆಚ್.ಡಿ. ರೇವಣ್ಣ
author img

By

Published : Jan 8, 2020, 8:34 PM IST

ಹಾಸನ: ಬಿಜೆಪಿ ಸರ್ಕಾರ ದ್ವೇಷದ ರಾಜಕಾರಣ ಮಾಡುತ್ತಿದೆ. ಇದು ಕಾಮಗಾರಿ ತಡೆ ಹಿಡಿಯುವ ಸರ್ಕಾರವಾಗಿದೆ ಎಂದು ಮಾಜಿ ಸಚಿವ ಹೆಚ್.ಡಿ. ರೇವಣ್ಣ ವ್ಯಂಗ್ಯವಾಡಿದರು.

ನಗರದ ಪ್ರವಾಸಿ ಮಂದಿರದಲ್ಲಿ ಮಾತನಾಡಿದ ಅವರು, ಕಾವೇರಿ ನಿಗಮ ವ್ಯಾಪ್ತಿಯ 5 ಸಾವಿರ ಕೋಟಿ ರೂ ವೆಚ್ಚದ ಕಾಮಗಾರಿಯನ್ನು ತಡೆ ಹಿಡಿದಿದ್ದಾರೆ. ಈ ಭಾಗದಲ್ಲಿ ಮತ ಹಾಕಿಲ್ಲ ಎಂಬ ಕಾರಣಕ್ಕೆ ಕಾಮಗಾರಿಗೆ ಸರ್ಕಾರ ತಡೆ ನೀಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೆ.ಆರ್. ಪೇಟೆಯಲ್ಲಿ ಅವರದೇ ಪಕ್ಷದ ಶಾಸಕರು ಗೆದ್ದಿದ್ದಾರೆ. ಆದ್ರೂ ಕಾವೇರಿ ಜಲಾನಯನ ಪ್ರದೇಶದ ಕಾಮಗಾರಿಯನ್ನು ತಡೆ ಹಿಡಿಯಲಾಗಿದೆ. ಈ ಹಿಂದೆ ಸಿದ್ದರಾಮಯ್ಯ ಮತ್ತು ಹೆಚ್.ಡಿ. ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿನ ಕಾಮಗಾರಿಯನ್ನು ತಡೆ ಹಿಡಿದಿದ್ದಾರೆ. ದ್ವೇಷದ ರಾಜಕಾರಣ ಮಾಡಿದರೆ ಮುಂದೆ ಅನುಭವಿಸುವ ಕಾಲವೂ ಬರುತ್ತದೆ ಎಂದು​ ಸಿಎಂ ಬಿಎಸ್​ವೈ ವಿರುದ್ಧ ವಾಗ್ದಾಳಿ ನಡೆಸಿದರು.

ಮಾಜಿ ಸಚಿವ ಹೆಚ್.ಡಿ. ರೇವಣ್ಣ

ನೀರಾವರಿ ಯೋಜನೆಗಳಿಗೆ ಸಂಬಂಧಪಟ್ಟ ಫೈನಲ್ ಹಂತದ ಕಾಮಗಾರಿ ಹಾಗೂ ಹಾಸನಕ್ಕೆ ಮಂಜೂರಾದ ತೋಟಗಾರಿಕಾ ಇಲಾಖೆ ಕಾಲೇಜನ್ನು ತಡೆ ಹಿಡಿದಿದ್ದಾರೆ ಎಂದು ದೂರಿದರು. ಅದೇ ರೀತಿ ಬೇರೆ ಇಲಾಖೆಗಳಲ್ಲಿನ ಕಾಮಗಾರಿಯನ್ನು ತಡೆ ಹಿಡಿದಿದ್ದು, ಕೂಡಲೇ ಹಣ ಬಿಡುಗಡೆ ಮಾಡಬೇಕು ಎಂದು ರೇವಣ್ಣ ಆಗ್ರಹಿಸಿದರು.

ಕಳೆದ ಬಾರಿ ವಿಧಾನಸಭೆಯಲ್ಲಿ ಸ್ಪೀಕರ್ ಪ್ರಶ್ನೋತ್ತರವನ್ನು ತಡೆ ಹಿಡಿದಿದ್ದಾರೆ. ಸದಸ್ಯರು ಪ್ರಶ್ನೆ ಮಾಡುವುದಿದ್ದರೇ ಅವಕಾಶ ಕೊಡಬೇಕು. ಬಿಜೆಪಿ ಸರ್ಕಾರ ಬಂದ ಮೇಲೆ ಪ್ರಶ್ನೆ ಮಾಡುವ ಹಕ್ಕನ್ನು ಕಡಿತಗೊಳಿಸಲು ಮುಂದಾಗಿದ್ದಾರೆ ಎಂದರು. ಶಾಸಕರ ಹಕ್ಕು ಕಿತ್ತುಕೊಂಡರೆ ಸದನದ ಒಳಗೆ ಹೊರಗೆ ಹೋರಾಟ ಮಾಡುವ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದು ಎಚ್ಚರಿಸಿದರು.

Intro:ಹಾಸನ: ದ್ವೇಷದ ರಾಜಕಾರಣ ಮಾಡುತ್ತಿರುವ ಬಿಜೆಪಿ ಆಡಳಿತದ ಹೆಸರು ಕಾಮಗಾರಿ ತಡೆ ಹಿಡಿಯುವ ಸರಕಾರವಾಗಿದೆ. ವಿಧಾನ ಸಭೆಯಲ್ಲಿ ಪ್ರಶ್ನೋತ್ತರ ಕಲಾಪ ತಡೆ ಹಿಡಿಯುವುದು ಸೂಕ್ತವಲ್ಲ ಎಂದು ಮಾಜಿ ಸಚಿವ ಹೆಚ್.ಡಿ. ರೇವಣ್ಣ ಸ್ಪೀಕರಿಗೆ ಮನವಿ ಮಾಡಿದರು.
​ ​ ​ ​ ​ ​

ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದು ಆರುವರೆ ತಿಂಗಳಾಗಿದ್ದು, ಕಾವೇರಿ ನಿಗಮ ವ್ಯಾಪ್ತಿಯ ೫ ಸಾವಿರ ಕೋಟಿ ವೆಚ್ಚದ ಕಾಮಗಾರಿಯನ್ನು ಯಾವುದಕ್ಕೊಸ್ಕರ ತಡೆಹಿಡಿದಿದ್ದಾರೆ ಗೊತ್ತಿಲ್ಲ. ಈ ಭಾಗದಲ್ಲಿ ಮತ ಹಾಕಿಲ್ಲ ಎಂಬ ಕಾರಣಕ್ಕೆ ಕಾಮಗಾರಿಗೆ ಸರಕಾರ ತಡೆ ಹಿಡಿದಿದ್ದಾರೆ ಎಂದು ಆಕ್ರೋಶವ್ಯಕ್ತಪಡಿಸಿದರು.

ಕೆ.ಆರ್. ಪೇಟೆಯಲ್ಲಿ ಅವರದೇ ಶಾಸಕರು ಗೆದ್ದಿದ್ದಾರೆ ಆದ್ರೂ ಕಾವೇರಿ ಜಲಾನಯನ ಪ್ರದೇಶದ ಕಾಮಗಾರಿ ತಡೆ ಹಿಡಿದಿದ್ದಾರೆ. ಹಿಂದಿನ ಸಿದ್ದರಾಮಯ್ಯ ಮತ್ತು ಹೆಚ್.ಡಿ. ಕುಮಾರಸ್ವಾಮಿ ಸರಕಾರದ ಅವಧಿಯಲ್ಲಿನ ಕಾಮಗಾರಿ ತಡೆ ಹಿಡಿದಿದ್ದಾರೆ. ನಮ್ಮಿಂದ ಈ ಜನಕ್ಕೆ ಅನ್ಯಾಯ ಮಾಡಲು ಹೋಗಬೇಡಿ. ದ್ವೇಷದ ರಾಜಕಾರಣ ಮಾಡಿದರೇ ಮುಂದೆ ಅನುಭವಿಸುವ ಕಾಲ ಬರುತ್ತದೆ ಎಂದು​ ಸಿಎಂ ವಿರುದ್ದ ಮಾತಿನ ವಾಗ್ದಾಳಿ ನಡೆಸಿದರು.

ಆರು ಜನ ಶಾಸಕರು ಏನಿದ್ದಾರೆ ಮುಖ್ಯಮಂತ್ರಿಗಳಿಗೆ, ಪ್ರಧಾನ ಕಾರ್ಯದರ್ಶಿಗೆ ಕಾರ್ಯದರ್ಶಿಗೂ ಮನವಿ ಪತ್ರ ಬರೆಯಲಾಗುವುದು ಎಂದರಲ್ಲದೇ ನೀರಾವರಿ ಯೋಜನೆಗಳಿಗೆ ಸಂಬಂಧಪಟ್ಟ ಟೆಂಡರ್ ಆಗಿ ಫೈನಲ್ ಹಂತದ ಕಾಮಗಾರಿಗಳನ್ನೂ ತಡೆ ಹಿಡಿದಿದ್ದಾರೆ. ಹಾಸನಕ್ಕೆ ಮಂಜೂರಾದ ತೋಟಗಾರಿಕಾ ಇಲಾಖೆ ಕಾಲೇಜನ್ನು ತಡೆ ಹಿಡಿದಿದ್ದಾರೆ ಎಂದು ದೂರಿದರು.

ಅದೆ ರೀತಿ ಬೇರೆ ಇಲಾಖೆಗಳಲ್ಲಿನ ಕಾಮಗಾರಿಯನ್ನು ತಡೆ ಹಿಡಿದಿದ್ದು, ಕೂಡಲೇ ಹಣ ಬಿಡುಗಡೆ ಮಾಡಬೇಕು. ಈ ಸರ್ಕಾರದ ಹೆಸರು ಕಾಮಗಾರಿ ತಡೆ ಹಿಡಿಯುವ ಸರಕಾರ. ಇನ್ನೊಂದು ಲೆಟರ್ ಬರೆಯಲಿದ್ದು, ಕಳೆದ ಬಾರಿ ವಿಧಾನ ಸಭೆಯಲ್ಲಿ ಪ್ರಶ್ನೋತ್ತರವನ್ನು ತಡೆ ಮಾಡಿದ್ದೀರಿ, ಸದಸ್ಯರು ಪ್ರಶ್ನೆ ಮಾಡುವುದಿದ್ದರೇ ಅವಕಾಶ ಕೊಡಬೇಕು. ಬಿಜೆಪಿ ಸರಕಾರ ಬಂದ ಮೇಲೆ ಪ್ರಶ್ನೆ ಮಾಡುವ ಸದಸ್ಯರ ಹಕ್ಕನ್ನು ಕಡಿತಗೊಳಿಸಲು ಮುಂದಾಗಿದ್ದಾರೆ ಎಂದ ಅವರು,​ ಸ್ಪೀಕರ್ರವರು ಈ ಬಾರಿ ತಡೆ ಮಾಡಬಾರದು ಎಂದು ಮನವಿ ಮಾಡುವುದಾಗಿ ಹೇಳಿದರು.

ಯಾವ ಉದ್ದೇಶಕ್ಕಾಗಿ ಪ್ರಶ್ನೆಗೆ ಸರಕಾರ ಉತ್ತರ ಕೊಡಲು ಮುಂದಾಗುತ್ತಿಲ್ಲ ಎಂದು ಪ್ರಶ್ನೆ ಮಾಡಿದರು. ಶಾಸಕರ ಹಕ್ಕು ಕಿತ್ತುಕೊಂಡರೆ ಸದನದ ಒಳಗೆ ಹೊರಗೆ ಹೋರಾಟ ಮಾಡುವ ನಿರ್ಧಾರ ತೆಗೆದುಕೊಳ್ಳುತ್ತೇವೆ.

ಬೈಟ್ : ಹೆಚ್.ಡಿ. ರೇವಣ್ಣ, ಮಾಜಿ ಸಚಿವ.

- ಅರಕೆರೆ ಮೋಹನಕುಮಾರ, ಈಟಿವಿ ಭಾರತ, ಹಾಸನ.

Body:0

Conclusion:0
ETV Bharat Logo

Copyright © 2024 Ushodaya Enterprises Pvt. Ltd., All Rights Reserved.