ETV Bharat / state

ನೀರಾವರಿ ಯೋಜನೆಗಳ ಕಾಮಗಾರಿಗಳು ಬಹಿರಂಗ ಹರಾಜಾಗ್ತಿವೆ : ಹೆಚ್ ಡಿ ರೇವಣ್ಣ ಆರೋಪ - ಹೇಮಾವತಿ ಜಲಾಶಯದ ನೀರಾವರಿ ಕಾಮಗಾರಿ

ಈಗಾಗಲೇ ಹಿಂದೆ ಕ್ಷೇತ್ರದ ಅನುದಾನದಲ್ಲಿ ತಾರತಮ್ಯ ಮಾಡುತ್ತಿದ್ದಾರೆ ಎಂಬ ಕಾರಣಕ್ಕಾಗಿ ರಾಜ್ಯದ ಎಲ್ಲ ಜೆಡಿಎಸ್ ಸದಸ್ಯರು ಒಂದಾಗಿ ವಿಧಾನಸೌಧದಲ್ಲಿ ಪ್ರತಿಭಟನೆ ಮಾಡಿದ್ದು, ಮುಖ್ಯಮಂತ್ರಿಗಳು ಭರವಸೆ ನೀಡಿದ್ದ ಹಿನ್ನೆಲೆ ಪ್ರತಿಭಟನೆ ಕೈಬಿಟ್ಟಿದ್ದರು. ಇದಲ್ಲದೆ ಮುಖ್ಯಮಂತ್ರಿಗಳು ದೇವೇಗೌಡರಿಗೆ ನೀಡಿದ ಭರವಸೆ ಕೂಡ ಸುಳ್ಳಾಗಿದೆ..

Former Minister H.D. Revanna
ಎಚ್.ಡಿ. ರೇವಣ್ಣ ಆರೋಪ
author img

By

Published : Apr 3, 2021, 8:09 PM IST

ಹಾಸನ: ಬನ್ನಿ ... ಬನ್ನಿ.... ಬನ್ನಿ.... 15%, 20%, 25% ಅಂತ ಕೆಲವು ಸರ್ಕಾರಿ ಕಾಮಗಾರಿಗಳ ಪರವಾನಿಗೆ ಪತ್ರ ನೀಡಲು ಜಿಲ್ಲೆಯ ಗೊರೂರು ಮತ್ತು ಚನ್ನರಾಯಪಟ್ಟಣದಲ್ಲಿ ಬಹಿರಂಗವಾಗಿ ಹರಾಜು ಪ್ರಕ್ರಿಯೆ ನಡೆದಿದೆ ಎಂದು ಮಾಜಿ ಸಚಿವ ಹೆಚ್ ಡಿ ರೇವಣ್ಣ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಓದಿ: ರಾಜ್ಯದಲ್ಲಿ 10 ಲಕ್ಷ ದಾಟಿದ ಸೋಂಕಿತರ ಸಂಖ್ಯೆ: ಇಂದು 4,373 ಜನರಿಗೆ ಕೊರೊನಾ

ಕಾವೇರಿ ನೀರಾವರಿ ನಿಗಮದ ಹೇಮಾವತಿ ಜಲಾಶಯದ ನೀರಾವರಿ ಕಾಮಗಾರಿಯ ಯೋಜನೆಗೆ ಬಹಿರಂಗವಾಗಿಯೇ ಲಾಟರಿ ಟಿಕೆಟ್ ಮಾರಾಟದ ರೀತಿ ಕೂಗಿಕೊಂಡು ಮಾರಾಟ ಮಾಡುತ್ತಿದ್ದಾರೆ.

ಇಂತಹ ಮಾರಾಟ ಮಾಡಲು ಒಂದು ಏಜೆನ್ಸಿಯನ್ನು ಮಾಡಿಕೊಂಡಿದ್ದಾರೆ. ಇದು ಮುಖ್ಯಮಂತ್ರಿಗಳ ಅಧೀನದಲ್ಲಿರುವ ಇಲಾಖೆಯಾಗಿದೆ. ಇವರುಗಳ ವಿರುದ್ಧ ಕಾನೂನು ಪ್ರಕಾರ ಸೂಕ್ತ ಕ್ರಮ ಕೈಗೊಳ್ಳಬೇಕು.

ರಾಜ್ಯ ಸರ್ಕಾರದ ವಿರುದ್ಧ ಮಾಜಿ ಸಚಿವ ಹೆಚ್ ಡಿ ರೇವಣ್ಣ ಆರೋಪ

ನಾನು ಬಹಿರಂಗವಾಗಿ ಸವಾಲು ಹಾಕುತ್ತೇನೆ, ಮುಖ್ಯಮಂತ್ರಿಗಳಿಗೆ ತಾಕತ್ತಿದ್ದರೆ ಈ ಪ್ರಕರಣವನ್ನು ಸಿಒಡಿಗೆ ವಹಿಸಿ. ಮುಖ್ಯಮಂತ್ರಿಗಳ ಪಾತ್ರ ಈ ಪ್ರಕರಣದಲ್ಲಿ ಇಲ್ಲ ಅಂದರೆ ತನಿಖೆ ಮಾಡಿಸಬೇಕು. ಅದನ್ನು ಮಾಡಿಸುತ್ತಿದ್ದರೆ ಮುಖ್ಯಮಂತ್ರಿಗಳು ಕೂಡ ಈ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂದು ಹೇಳಬೇಕಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇನ್ನು, ಜಿಲ್ಲೆಯಲ್ಲಿ ವಿದ್ಯುತ್ ಸಮಸ್ಯೆ ಉಲ್ಬಣಗೊಂಡಿದೆ. ಕುಡಿಯುವ ನೀರಿಗೂ ಹಾಹಾಕಾರವಿದೆ. ಇದಕ್ಕೆ ಕಾರಣ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಹಾಗೂ ಮುಖ್ಯಮಂತ್ರಿಗಳ ನಡುವೆ ನಡೆಯುತ್ತಿರುವ ಸಮರವೇ ಕಾರಣ. ಇದರಿಂದ ಹೊಳೆನರಸೀಪುರದಲ್ಲಿಯೂ ವಿದ್ಯುತ್ ಸಮಸ್ಯೆ ಉಂಟಾಗಿ ನಿನ್ನೆ ಓರ್ವ ಹಾಸ್ಟೆಲ್ ವಿದ್ಯಾರ್ಥಿ ಸಾವಿಗೀಡಾಗಿದ್ದಾನೆ ಎಂದು ಗಂಭೀರ ಆರೋಪ ಮಾಡಿದರು.

ಈಗಾಗಲೇ ಹಿಂದೆ ಕ್ಷೇತ್ರದ ಅನುದಾನದಲ್ಲಿ ತಾರತಮ್ಯ ಮಾಡುತ್ತಿದ್ದಾರೆ ಎಂಬ ಕಾರಣಕ್ಕಾಗಿ ರಾಜ್ಯದ ಎಲ್ಲ ಜೆಡಿಎಸ್ ಸದಸ್ಯರು ಒಂದಾಗಿ ವಿಧಾನಸೌಧದಲ್ಲಿ ಪ್ರತಿಭಟನೆ ಮಾಡಿದ್ದು, ಮುಖ್ಯಮಂತ್ರಿಗಳು ಭರವಸೆ ನೀಡಿದ್ದ ಹಿನ್ನೆಲೆ ಪ್ರತಿಭಟನೆ ಕೈಬಿಟ್ಟಿದ್ದರು. ಇದಲ್ಲದೆ ಮುಖ್ಯಮಂತ್ರಿಗಳು ದೇವೇಗೌಡರಿಗೆ ನೀಡಿದ ಭರವಸೆ ಕೂಡ ಸುಳ್ಳಾಗಿದೆ.

ಹೀಗಾಗಿ, ರಾಜ್ಯದ ಜೆಡಿಎಸ್ ಅವರ ಸಮ್ಮುಖದಲ್ಲಿ ಒಂದು ತೀರ್ಮಾನ ಕೈಗೊಂಡು ಮುಖ್ಯಮಂತ್ರಿಗಳ ಮನೆ ಮುಂದೆ ಧರಣಿ ಕೂರಬೇಕಾಗುತ್ತದೆ ಎಂದು ಎಚ್ಚರಿಸಿದರು. ಇದಲ್ಲದೆ ರಾಜ್ಯದಲ್ಲಿ ಉಲ್ಬಣಗೊಂಡಿರುವ ವಿದ್ಯುತ್ ಸಮಸ್ಯೆಯಿಂದ ಕುಡಿಯುವ ನೀರಿಗೆ ಹಾಹಾಕಾರ ಎದ್ದಿದೆ. ಮದ್ಯಪಾನ ಪ್ರಿಯರಂತೂ ಕುಡಿಯುವ ನೀರಿಗೆ ಬದಲಾಗಿ, ಬಿಯರ್ ಕುಡಿಯೋದಕ್ಕೆ ಶುರು ಮಾಡಿದ್ದಾರೆ ಎಂದು ಹೇಳುತ್ತಿದ್ದಂತೆ ಪತ್ರಿಕಾಗೋಷ್ಠಿಯಲ್ಲಿ ನಗೆಯ ಬುಗ್ಗೆ ಹರಿದಾಡಿತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.