ETV Bharat / state

ಕೋಟೆಪುರ ಗ್ರಾಮದಲ್ಲಿ ಕಾಡಾನೆ ಪ್ರತ್ಯಕ್ಷ : ಜನರಲ್ಲಿ ಮನೆ ಮಾಡಿದ ಆತಂಕ - ಹಾಸನ ಲೇಟೆಸ್ಟ್ ನ್ಯೂಸ್

ಮಲೆನಾಡು ಭಾಗದಲ್ಲಿ ಸುಮಾರು 1.5 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಕಾಫಿ ತೋಟವಿದೆ. ಈಗಲೂ ಸುಮಾರು 60ಕ್ಕೂ ಅಧಿಕ ಆನೆಗಳಿವೆ. ಕಳೆದೊಂದು ವರ್ಷದಲ್ಲಿ ಇಬ್ಬರು ರೈತರನ್ನು ಆನೆ ಬಲಿ ತೆಗೆದುಕೊಂಡಿದೆ..

Elephant found in kotepura at Hassan
ಕೋಟೆಪುರ ಗ್ರಾಮದಲ್ಲಿ ಕಾಡಾನೆ ಪ್ರತ್ಯಕ್ಷ
author img

By

Published : Jul 14, 2021, 7:35 PM IST

ಹಾಸನ : ಆಲೂರು ತಾಲೂಕಿನ ಕೋಟೆಪುರ ಗ್ರಾಮದ ಪ್ರಮುಖ ರಸ್ತೆಯಲ್ಲಿ ಕಾಡಾನೆಯೊಂದು ನಡೆದುಕೊಂಡು ಹೋಗಿದ್ದು, ರೈತರು ಹಾಗೂ ಕಾಫಿ ಬೆಳೆಗಾರರಿಗೆ ಆತಂಕ ಶುರುವಾಗಿದೆ. ಕಳೆದ ಎರಡ್ಮೂರು ವರ್ಷಗಳಿಂದಲೂ ಜಿಲ್ಲೆಯ ಸಕಲೇಶಪುರ, ಆಲೂರು ಮತ್ತು ಹಾಸನ ಈ ಮೂರು ತಾಲೂಕಿನಲ್ಲಿ ಆನೆಗಳು ಬೀದಿನಾಯಿಗಳ ರೀತಿ ಓಡಾಡುತ್ತಿರುವುದು ಈ ಭಾಗದ ಜನರಲ್ಲಿ ನಡುಕ ಹುಟ್ಟಿಸುತ್ತಿದೆ.

ಕೋಟೆಪುರ ಗ್ರಾಮದಲ್ಲಿ ಕಾಡಾನೆ ಪ್ರತ್ಯಕ್ಷ

ಇಂದು ಕೂಡ ಆಲೂರು ತಾಲೂಕಿನ ಕೋಟೆಪುರ ಗ್ರಾಮದ ಪ್ರಮುಖ ರಸ್ತೆಯಲ್ಲಿ ಕಾಡಾನೆಯೊಂದು ಒಂಟಿಯಾಗಿ ರಸ್ತೆಯಲ್ಲಿ ನಡೆದುಕೊಂಡು ಹೋಗಿದೆ. ಮಲೆನಾಡು ಭಾಗದಲ್ಲಿ ಸುಮಾರು 1.5 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಕಾಫಿ ತೋಟವಿದೆ. ಈಗಲೂ ಸುಮಾರು 60ಕ್ಕೂ ಅಧಿಕ ಆನೆಗಳಿವೆ. ಕಳೆದೊಂದು ವರ್ಷದಲ್ಲಿ ಇಬ್ಬರು ರೈತರನ್ನು ಆನೆ ಬಲಿ ತೆಗೆದುಕೊಂಡಿದೆ.

ಹೀಗಾಗಿ, ಆನೆಯನ್ನು ಸ್ಥಳಾಂತರಿಸಬೇಕು. ಇದರ ಜೊತೆಗೆ ಬಾಕಿ ಉಳಿದಿರುವ ಪರಿಹಾರವನ್ನು ಕೂಡ ನೀಡಬೇಕು ಎಂದು ಒತ್ತಾಯ ಮಾಡುತ್ತೇನೆ ಎಂದು ಶಾಸಕ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್ ಕೆ ಕುಮಾರಸ್ವಾಮಿ ಆಗ್ರಹಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.