ಹಾಸನ: ನೋಡಪ್ಪ ನನ್ನ ಮಗಳಿಗೆ ತೊಂದರೆ ಕೊಡಬೇಡ ಆಕೆ ಕೂಡ ನಿಮ್ಮ ಮನೆಯ ಅಕ್ಕನೋ ತಂಗಿನೋ ಎಂದು ಭಾವಿಸಪ್ಪಾ ಎಂದು ಬುದ್ದಿವಾದ ಹೇಳಿದ ಯುವತಿಯ ತಂದೆಯ ಮೇಲೆ ಕಿಡಿಗೇಡಿಗಳು ಹಲ್ಲೆ ಮಾಡಿದಂತಹ ಘಟನೆ ಹಾಸನ ಜಿಲ್ಲೆಯಲ್ಲಿ ನಡೆದಿದೆ.
ಹಾಸನ ಜಿಲ್ಲೆಯ ಆಲೂರು ತಾಲೂಕಿನ ಜಯಂತಿಹಳ್ಳಿ ನಗರದಲ್ಲಿ ಈ ಘಟನೆ ನಡೆದಿದ್ದು, ಯುವತಿಯ ತಂದೆ ಗಂಭೀರವಾಗಿ ಹಲ್ಲೆಗೊಳಗಾಗಿದ್ದಾರೆ.
ಒಂದು ತಿಂಗಳ ಹಿಂದೆ ಯುವಕನೊಬ್ಬ ಪ್ರದೀಪ್ ಎಂಬುವವರ ಪುತ್ರಿಯನ್ನು ಚುಡಾಯಿಸಿದ್ದ. ಹೀಗಾಗಿ ಆ ಯುವಕನಿಗೆ ಯುವತಿ ತಂದೆ ಬುದ್ಧಿವಾದ ಹೇಳಿದ್ದರು. ಇದರಿಂದ ಬೇಸರಗೊಂಡಿದ್ದ ಹೋಸಮಠ ಗ್ರಾಮದ ಯುವಕರುಗಳು, ಆಲೂರು ತಾಲ್ಲೂಕಿನ ಹಲಸೂರು ಗ್ರಾಮದ ಪ್ರದೀಪ್ ಮೇಲೆ ಕಾರ್ತಿಕ್ ಹಾಗು ಅರ್ಜುನ್ ಎಂಬುವವರು ಹಲ್ಲೆ ನಡೆಸಿದ್ದಾರೆ.
ಕಾರ್ತಿಕ್ ಕಾರಗೋಡು ಗ್ರಾಮ ಪಂಚಾಯತ್ ಸದಸ್ಯ. ಕಾರಿನಲ್ಲಿ ಹೋಗುತ್ತಿದ್ದ ಪ್ರದೀಪ್ ಅವರನ್ನು ತಡೆದು ಹಲ್ಲೆ ನಡೆಸಲಾಗಿದೆ ಎಂದು ಆಲೂರು ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ಈ ಹಿಂದೆ ತಮ್ಮ ಮಗಳನ್ನು ರೇಗಿಸಲು ಬಂದಿದ್ದ ಆರೋಪಿಗಳನ್ನು ಪ್ರದೀಪ್ ಪ್ರಶ್ನಿಸಿ ಎಚ್ಚರಿಕೆ ನೀಡಿದ್ದರು. ಆಗ ಅವರು ಹಲ್ಲೆ ನಡೆಸಿದ್ದರು.
ಅದೇ ವೇಳೆ ಪ್ರದೀಪ್ ಅವರು ಸಹ ತಿರುಗೇಟು ನೀಡಿದ್ದರು. ಈ ಬಗ್ಗೆ ಎರಡು ಕಡೆಯವರಿಂದ ಆಲೂರು ಠಾಣೆಯಲ್ಲಿ ದೂರು ದಾಖಲಾಗಿತ್ತು. ಪೊಲೀಸರು ಪರಸ್ಪರ ಮುಚ್ಚಳಿಕೆ ಬರೆಸಿ ಎಚ್ಚರಿಕೆ ನೀಡಿ ಕಳಿಸಿದ್ದರು.
ಆದರೆ ನಿನ್ನೆ ಪ್ರದೀಪ್ ಅವರು ಕಾರಿನಲ್ಲಿ ಹೋಗುತ್ತಿರುವಾಗ ಗ್ರಾ.ಪಂ.ಸದಸ್ಯ ಕಾರ್ತಿಕ್ ಹಾಗು ಅರ್ಜುನ ಎಂಬಾತನಿಂದ ಹಲ್ಲೆ ಮಾಡಿದ್ದಾರೆ. ತಲೆ, ಕುತ್ತಿಗೆ, ಕೈ, ಎದೆಗೆ ಮನಸೋ ಇಚ್ಚೆ ಹಲ್ಲೆ ನಡೆಸಲಾಗಿದ್ದು, ತೀವ್ರವಾಗಿ ಗಾಯಗೊಂಡಿರುವ ಪ್ರದೀಪ್, ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ.
ಇದನ್ನು ಓದಿ: ಡ್ರಗ್ಸ್ ಪರೀಕ್ಷೆಗೊಳಪಡಲು ನಾನು ಸಿದ್ಧ ; ರಾಹುಲ್ ಗಾಂಧಿಗೆ ಆ ಧೈರ್ಯ ಇದೆಯಾ? ಕೆಟಿಆರ್ ಪ್ರಶ್ನೆ