ETV Bharat / state

ಸಾರ್ವಜನಿಕ ಸ್ಥಳದಲ್ಲಿ ಕಬ್ಬಿನ ಹಾಲಿನ ಅಂಗಡಿ ಇಟ್ಟಿದ್ದಕ್ಕೆ ದಲಿತರ ಮೇಲೆ ಹಲ್ಲೆ: ದೂರು ದಾಖಲು - ದಲಿತರ ಮೇಲೆ ಹಲ್ಲೆ

ಅರಕಲಗೂಡು ತಾಲೂಕಿನ ರುದ್ರಪಟ್ಟಣ ಸಮೀಪ ದಲಿತರು ಸಾರ್ವಜನಿಕ ಸ್ಥಳದಲ್ಲಿ ಕಬ್ಬಿನ ಹಾಲಿನ ಅಂಗಡಿ ಇಟ್ಟಿದ್ದಕ್ಕೆ ಜಾತಿ ನಿಂದನೆ ಮಾಡಿ, ಕಬ್ಬಿನ ಗಾಡಿಯನ್ನು ಧ್ವಂಸ ಗೊಳಿಸಿ ಅಪ್ಪ, ಮಗನ ಮೇಲೆ ಹಲ್ಲೆ ‌ನಡೆಸಿರುವ ಅಮಾನವೀಯ ಘಟನೆ ನಡೆದಿದೆ.

dalits assaulted
dalits assaulted
author img

By

Published : Mar 2, 2022, 6:44 AM IST

ಹಾಸನ: ಸಾರ್ವಜನಿಕ ಸ್ಥಳದಲ್ಲಿ ಕಬ್ಬಿನ ಹಾಲಿನ ಅಂಗಡಿ ಇಟ್ಟಿದ್ದನ್ನು ಪ್ರಶ್ನಿಸಿ ದಲಿತರ ಮೇಲೆ ಹಲ್ಲೆ ನಡೆಸಿರುವ ಘಟನೆ ಅರಕಲಗೂಡು ತಾಲೂಕಿನ ರುದ್ರಪಟ್ಟಣ ಸಮೀಪ ನಡೆದಿದೆ.

ರಾಮನಾಥಪುರ ಹೋಬಳಿಯ ರುದ್ರಪಟ್ಟಣ ಗ್ರಾಮದ ಪರಿಶಿಷ್ಟ ಸಮುದಾಯದ ಚಂದ್ರ ಹಾಗೂ ಅವರ ಮಗ ನಿತಿನ್‌ ಹಲ್ಲೆಗೊಳಗಾದ ವ್ಯಕ್ತಿಗಳು. ಗಂಗೂರಿನ ಹ್ಯಾಂಡ್‌‌ ಪೋಸ್ಟ್‌ನಲ್ಲಿ ಅಂದರೆ ರಾಮನಾಥಪುರ- ಬೆಟ್ಟದಪುರ ರಸ್ತೆಯ ಪಕ್ಕದಲ್ಲಿ ಕಬ್ಬಿನ ಹಾಲಿನ ಗಾಡಿಯನ್ನು ಇಟ್ಟುಕೊಂಡು ಸುಮಾರು ಆರು ತಿಂಗಳಿಂದ ಜೀವನ ಸಾಗಿಸುತ್ತಿದ್ದರು.

ದಲಿತರ ಮೇಲೆ ಹಲ್ಲೆ ನಡೆಸುತ್ತಿರುವ ವಿಡಿಯೋ

ಫೆ. 27ರಂದು ಗಂಗೂರಿನ ನಿವಾಸಿ ಸುನಿಲ್‌ ಎಂಬಾತ ನನ್ನ ಬಳಿ ಬಂದು ಕೂಡಲೇ ಗಾಡಿ ತೆಗೆಯಬೇಕೆಂದು ಹೇಳಿ, ಜಾತಿ ನಿಂದನೆ ಮಾಡಿ ಎಂದು ಅವ್ಯಾಚ್ಯ ಶಬ್ಧಗಳಿಂದ ನಿಂದಿಸಿದ್ದಾನೆ ಎಂದು ಇದೀಗ ಚಂದ್ರು ಗಂಭೀರ ಆರೋಪ ಮಾಡಿದ್ದಾರೆ.

ರಸ್ತೆ ಬದಿಯಲ್ಲಿ ಗಾಡಿ ಹಾಕಲು ಯಾರ ಅಪ್ಪಣೆಯೂ ಬೇಕಾಗಿಲ್ಲ, ಜಾಗ ನಿನ್ನದಾಗಿದ್ದರೆ ಹೇಳು, ಗಾಡಿ ತೆಗೆಯುತ್ತೇನೆ. ನೀನು ಈ ರೀತಿ ಮಾತನಾಡುವುದು ಸರಿಯೇ? ಎಂದು ನಾನು ಪ್ರಶ್ನಿಸಿದ್ದನ್ನ ಸಹಿಸದೇ ಅವರು, ಕೀಳು ಜಾತಿಯವನಾದ ನೀನು ನನ್ನನ್ನೇ ಪ್ರಶ್ನಿಸುತ್ತೀಯಾ? ಎಂದನು. ಬಳಿಕ ಹಿಂತಿರುಗಿ ಅವರ ತಂದೆ ರಾಜೇಗೌಡ ಹಾಗೂ ಸಂಬಂಧಿಕರು, ಸ್ನೇಹಿತರನ್ನು ಕರೆದುಕೊಂಡು ಬಂದು ಏಕಾಏಕಿ ನನ್ನ ಮಗನ ಮೇಲೆ ಹಲ್ಲೆ ಮಾಡಿದರು ಎಂದು ಚಂದ್ರು ಆರೋಪಿಸಿದ್ದಾರೆ.

ಇದನ್ನೂ ಓದಿ: ಮುಂದಿನ 3 ದಿನ, 26 ವಿಮಾನ: ಉಕ್ರೇನ್‌ನಿಂದ ಸಾವಿರಾರು ಭಾರತೀಯರ ಕರೆತರಲು ಕೇಂದ್ರದ ನಿರ್ಧಾರ

ಈ ಸಂಬಂಧ ಕೊಣನೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದ್ದು, ದೂರಿನನ್ವಯ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.