ETV Bharat / state

ಅನೈತಿಕ ಸಂಬಂಧ ಶಂಕೆ.. ಮಾರಕಾಸ್ತ್ರಗಳಿಂದ ವ್ಯಕ್ತಿಯ ಬರ್ಬರ ಕೊಲೆ.. - ಕೊಲೆ ಆರೋಪಿ ಪ್ರತಾಪ್

ಹಾಸನದ ವಿಜಯನಗರ ಬಡಾವಣೆಯ ಗುಡ್ಡೇನಹಳ್ಳಿಯಲ್ಲಿ ಕೃಷ್ಣೇಗೌಡ ಎಂಬ ವ್ಯಕ್ತಿ ಅನೈತಿಕ ಸಂಬಂಧ ಹೊಂದಿದ್ದ ಎಂದು ಆತನನ್ನು ಕೊಲೆ ಮಾಡಲಾಗಿದೆ. ಪ್ರತಾಪ್​ ಎಂಬ ವ್ಯಕ್ತಿಯ ಪತ್ನಿಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ ಎಂಬ ಶಂಕೆಯಿಂದ ಆತ ಕೊಲೆ ಮಾಡಿ ಈಗ ಪೊಲೀಸರ ಅತಿಥಿಯಾಗಿದ್ದಾನೆ.

ವ್ಯಕ್ತಿಯ ಬರ್ಬರ ಕೊಲೆ
author img

By

Published : Oct 14, 2019, 11:32 PM IST

ಹಾಸನ: ಅನೈತಿಕ ಸಂಬಂಧ ಹಿನ್ನೆಲೆಯಲ್ಲಿ ವ್ಯಕ್ತಿಯನ್ನು ಕೊಲೆ ಮಾಡಿದ ಘಟನೆ ಹಾಸನದ ವಿಜಯನಗರ ಬಡಾವಣೆಯಲ್ಲಿ ನಡೆದಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

ಗುಡ್ಡೇನಹಳ್ಳಿ ಕೃಷ್ಣೇಗೌಡ (40) ಕೊಲೆಯಾದವರು. ಹುಣಸಿನಕೆರೆ ಮೂಲದ ಆರೋಪಿ ಪ್ರತಾಪ್ (35) ತನ್ನ ಪತ್ನಿಯೊಂದಿಗೆ ವಿಜಯನಗರ ಬಡಾವಣೆಯಲ್ಲಿ ವಾಸವಾಗಿದ್ದ. ಈ ವೇಳೆ ಪತ್ನಿಯ ಜೊತೆ ಕೃಷ್ಣೇಗೌಡ ಅನೈತಿಕ ಸಂಬಂಧ ಇಟ್ಟುಕೊಂಡಿದ್ದು, 2 ದಿನಗಳ ಹಿಂದೆ ಪ್ರತಾಪ್ ಮನೆಯಲ್ಲಿಯೇ ಹೆಂಡತಿಯೊಂದಿಗೆ ಸಿಕ್ಕಿಬಿದ್ದ ಹಿನ್ನೆಲೆ ಕುಪಿತಗೊಂಡ ಆರೋಪಿ ಪ್ರತಾಪ್ ಮನೆಯಲ್ಲಿದ್ದ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದಿದ್ದಾನೆ.

ಇನ್ನು, ಎರಡು ದಿನಗಳಾದರೂ ಕೂಡ ಮನೆಗೆ ಬಾರದ ಕೃಷ್ಣೇಗೌಡನಿಗಾಗಿ ಪತ್ನಿ ಶಾಂತಮ್ಮ ಎಲ್ಲಾ ಕಡೆ ಹುಡುಕಾಟ ನಡೆಸಿದ್ದಾರೆ. ಕೊನೆಗೆ ಪೊಲೀಸ್ ಠಾಣೆಗೆ ಬಂದು ದೂರು ದಾಖಲಿಸಿದ್ದಾರೆ. ದೂರು ದಾಖಲಿಸಿಕೊಂಡ ಪೊಲೀಸರು 24 ಗಂಟೆಯಲ್ಲಿ ಕೃಷ್ಣೇಗೌಡನ ಕೊಲೆ ಪ್ರಕರಣವನ್ನು ಭೇದಿಸಿದ್ದಾರೆ.

ಇನ್ನು, ಕೊಲೆ ಆರೋಪಿ ಪ್ರತಾಪ್ ಎರಡು ಪ್ರಕರಣದಲ್ಲಿ ಭಾಗಿಯಾಗಿದ್ದು, ಶಿವಮೊಗ್ಗ ಜಿಲ್ಲೆಯ ಸಾಗರ ಪಟ್ಟಣದಲ್ಲಿ ಕಂಠಪೂರ್ತಿ ಕುಡಿದು ಕುಮಾರ್ ಎಂಬಾತನಿಗೆ ಮಾರಣಾಂತಿಕ ಹಲ್ಲೆ ಮಾಡಿದ್ದು, ಅಲ್ಲಿಂದ ಪರಾರಿಯಾಗಿದ್ದ. ಈ ಸಂಬಂಧ ಸಾಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕೃಷ್ಣೇಗೌಡನ ಕೊಲೆ ಪ್ರಕರಣದ ತನಿಖೆ ವೇಳೆ 307 ಪ್ರಕರಣದ ಬಗ್ಗೆ ಕೂಡ ಒಪ್ಪಿಕೊಂಡಿದ್ದಾನೆ.

ಕೊಲೆಯಾದ ಕೃಷ್ಣೇಗೌಡನ ದೇಹ ಕೊಳೆತ ಸ್ಥಿತಿಯಲ್ಲಿದ್ದು ಮರಣೋತ್ತರ ಪರೀಕ್ಷೆಗಾಗಿ ಹಾಸನದ ಸರ್ಕಾರಿ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ. ಇನ್ನು, ಆರೋಪಿ ಕೊಲೆ ಮಾಡುವ ಸಂದರ್ಭದಲ್ಲಿ ಕೃಷ್ಣೇಗೌಡ ಪ್ರತಿರೋಧ ಒಡ್ಡಿದ ಕಾರಣ ಆತನಿಗೂ ಗಂಭೀರ ಗಾಯವಾಗಿದ್ದು, ಆರೋಪಿ ಪ್ರತಾಪನಿಗೆ ಹಾಸನದ ಜಯಚಾಮರಾಜೇಂದ್ರ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

Intro:ಹಾಸನ: ಅನೈತಿಕ ಸಂಬಂಧ ಹಿನ್ನೆಲೆಯಲ್ಲಿ ವ್ಯಕ್ತಿಯನ್ನು ಕೊಲೆ ಘಟನೆ ಹಾಸನ ನಗರದ ವಿಜಯನಗರ ಬಡಾವಣೆಯಲ್ಲಿ ನಡೆದಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

ಗುಡ್ಡೇನಹಳ್ಳಿ ಕೃಷ್ಣೇಗೌಡ (40)ವರ್ಷ ಕೊಲೆಯಾದನು. ಹುಣಸಿನಕೆರೆ ಮೂಲದ ಆರೋಪಿ ಪ್ರತಾಪ್ (35) ತನ್ನ ಪತ್ನಿಯೊಂದಿಗೆ ವಿಜಯನಗರ ಬಡಾವಣೆಯಲ್ಲಿ ವಾಸವಾಗಿದ್ದ. ಈ ವೇಳೆ ಪತ್ನಿಯ ಜೊತೆ ಕೃಷ್ಣೇಗೌಡ ಅನೈತಿಕ ಸಂಬಂಧ ಇಟ್ಟುಕೊಂಡಿದ್ದು, 2 ದಿನಗಳ ಹಿಂದೆ ಪ್ರತಾಪ್ ಮನೆಯಲ್ಲಿಯೇ ಹೆಂಡತಿಯೊಂದಿಗೆ ಸಿಕ್ಕಿಬಿದ್ದ ಹಿನ್ನಲೆ ಕುಪಿತಗೊಂಡ ಆರೋಪಿ ಪ್ರತಾಪ್ ಮನೆಯಲ್ಲಿದ್ದ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದಿದ್ದಾನೆ.

ಇನ್ನು ಎರಡು ದಿನಗಳಾದರೂ ಕೂಡ ಮನೆಗೆ ಬಾರದ ಕೃಷ್ಣೇಗೌಡನಿಗಾಗಿ ಪತ್ನಿ ಶಾಂತಮ್ಮ ಎಲ್ಲಾ ಕಡೆ ಹುಡುಕಾಟ ನಡೆಸಿದ್ದಾರೆ ಕೊನೆಗೆ ಪೊಲೀಸ್ ಠಾಣೆಗೆ ಬಂದು ದೂರು ದಾಖಲಿಸಿದ್ದಾರೆ ದೂರು ದಾಖಲಿಸಿಕೊಂಡ ಪೊಲೀಸರು 24ಗಂಟೆಯಲ್ಲಿ ಕೃಷ್ಣೇಗೌಡನ ಕೊಲೆ ಪ್ರಕರಣವನ್ನು ಭೇದಿಸಿದ್ದಾರೆ.

ಇನ್ನು ಕೊಲೆ ಆರೋಪಿ ಪ್ರತಾಪ್ ಎರಡು ಪ್ರಕರಣದಲ್ಲಿ ಭಾಗಿಯಾಗಿದ್ದು, ಶಿವಮೊಗ್ಗ ಜಿಲ್ಲೆಯ ಸಾಗರ ಪಟ್ಟಣದಲ್ಲಿ ಕಂಠಪೂರ್ತಿ ಕುಡಿದು ಕುಮಾರ್ ಎಂಬಾತನಿಗೆ ಮಾರಣಾಂತಿಕ ಹಲ್ಲೆ ಮಾಡಿದ್ದು, ಅಲ್ಲಿಂದ ಪರಾರಿಯಾಗಿದ್ದ. ಈ ಸಂಬಂಧ ಸಾಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕೃಷ್ಣೇಗೌಡನ ಕೊಲೆ ಪ್ರಕರಣದ ತನಿಖೆ ವೇಳೆ 307 ಪ್ರಕರಣದ ಬಗ್ಗೆ ಕೂಡಾ ಒಪ್ಪಿಕೊಂಡಿದ್ದಾನೆ.

ಕೊಳೆಯಾದ ಕೃಷ್ಣೇಗೌಡನ ದೊಡ್ಡ ದೇಹ ಕೊಳೆತ ಸ್ಥಿತಿಯಲ್ಲಿದ್ದು ಮರಣೋತ್ತರ ಪರೀಕ್ಷೆಗಾಗಿ ಹಾಸನದ ಸರ್ಕಾರಿ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ. ಇನ್ನು ಆರೋಪಿಗೂ ಕೂಡ ಕೊಲೆ ಮಾಡುವ ಸಂದರ್ಭದಲ್ಲಿ ಕೃಷ್ಣೇಗೌಡ ಪ್ರತಿರೋಧ ಒಡ್ಡಿವ ವೇಳೆ ಆತನಿಗೂ ಕೂಡ ಗಂಭೀರ ಗಾಯವಾಗಿದ್ದು,ಆರೋಪಿ ಪ್ರತಾಪನಿಗೆ ಹಾಸನದ ಜಯಚಾಮರಾಜೇಂದ್ರ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

*ಸುನೀಲ್ ಕುಂಭೇನಹಳ್ಳಿ, ಈಟಿವಿ ನ್ಯೂಸ್, ಹಾಸನ.*

Body:0

Conclusion:ಸುನೀಲ್ ಕುಂಭೇನಹಳ್ಳಿ, ಈಟಿವಿ ನ್ಯೂಸ್, ಹಾಸನ.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.