ETV Bharat / state

ಅರಸೀಕೆರೆಯಲ್ಲಿ ಬಾಣಂತಿ ಅನುಮಾನಾಸ್ಪದ ಸಾವು: ಪೋಷಕರಿಂದ ತನಿಖೆಗೆ ಆಗ್ರಹ

author img

By

Published : Jun 16, 2021, 12:47 PM IST

ನೀರಿನ ತೊಟ್ಟಿಗೆ ಬಿದ್ದು ಎರಡು ತಿಂಗಳ ಬಾಣಂತಿ ಅನುಮಾನಸ್ಪದ ರೀತಿಯಲ್ಲಿ ಸಾವಿಗೀಡಾಗಿದ್ದು, ಪೋಷಕರು ತನಿಖೆಗೆ ಆಗ್ರಹಿಸಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.

death
ಬಾಣಂತಿ ಸಾವು

ಹಾಸನ: ನೀರಿನ ತೊಟ್ಟಿಗೆ ಬಿದ್ದು ಎರಡು ತಿಂಗಳ ಬಾಣಂತಿ ಶಂಕಾಸ್ಪದ ರೀತಿಯಲ್ಲಿ ಮರಣ ಹೊಂದಿರುವ ಘಟನೆ ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನಲ್ಲಿ ನಡೆದಿದೆ.

ಭವ್ಯ (19) ಸಾವಿಗೀಡಾದ ಎರಡು ತಿಂಗಳ ಬಾಣಂತಿ. ಒಂದೂವರೆ ವರ್ಷದ ಹಿಂದೆ ಮೇಳೇನಹಳ್ಳಿ ಗ್ರಾಮದ ಈ ಯುವತಿಯನ್ನು ಅರಸೀಕೆರೆ ತಾಲೂಕಿನ ಮಾಲೇಕಲ್ ತಿರುಪತಿ ಗ್ರಾಮದ ಜಗದೀಶ್ ಎಂಬವರ ಜೊತೆ ಮದುವೆ ಮಾಡಲಾಗಿತ್ತು. ಎರಡು ತಿಂಗಳ ಹಿಂದಷ್ಟೇ ಭವ್ಯ ಗಂಡು ಮಗುವಿಗೆ ಜನ್ಮ ನೀಡಿದ್ದರು. ಕೊರೊನಾ ಹಿನ್ನೆಲೆಯಲ್ಲಿ ತವರಿಗೆ ಹೋಗಲು ಸಾಧ್ಯವಾಗದೆ ಈಕೆ ಗಂಡನ ಮನೆಯಲ್ಲಿಯೇ ಉಳಿದಿದ್ದರಂತೆ.

ಮದುವೆಯಾದ ದಿನದಿಂದ ಒಂದೂವರೆ ವರ್ಷಗಳ ಕಾಲ ಭವ್ಯಗೆ ಸತತವಾಗಿ ಆಕೆಯ ಗಂಡ ಮತ್ತು ಮನೆಯವರು ವರದಕ್ಷಿಣೆ ಕಿರುಕುಳ ನೀಡುತ್ತಿದ್ದರು. ಕೊರೊನಾ ಲಾಕ್​ಡೌನ್​ಗೆ ಸಿಲುಕಿದ್ದರಿಂದ ಸಂಕಷ್ಟ ಎದುರಿಸುತ್ತಿದ್ದು, ಇಂತಹ ಸಂದರ್ಭದಲ್ಲಿ ನಮ್ಮ ಮಗಳನ್ನು ಇವರೇ ನೀರಿನ ತೊಟ್ಟಿಯೊಳಗೆ ಹಾಕಿ ನಂತರ ಆಕೆಯನ್ನು ತೊಟ್ಟಿಯಿಂದ ಮೇಲಕ್ಕೆತ್ತಿ ಮನೆಯಲ್ಲಿ ಮಲಗಿಸಿದ್ದಾರೆ. ಇದೆಲ್ಲದರ ಬಗ್ಗೆ ಸಂಪೂರ್ಣ ತನಿಖೆಯಾಗಬೇಕು ಎಂಬ ಆರೋಪ ಪೋಷಕರದ್ದು.

ಅರಸೀಕೆರೆ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ. ನಮಗೆ ನ್ಯಾಯ ದೊರಕಿಸಿಕೊಡುವ ತನಕ ಮತ್ತು ದೇಹವನ್ನು ಸಂಸ್ಕಾರಕ್ಕೆ ಬಿಡುವುದಿಲ್ಲ ಅಂತ ಪೋಷಕರು ಹೇಳಿದ್ದು, ಜಗದೀಶ್ ಮನೆಮುಂದೆ ಜನರ ದಂಡೇ ಆಗಮಿಸಿದೆ. ಅರಸೀಕೆರೆ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.