ಹಾಸನ: ಜಿಲ್ಲೆಯಲ್ಲಿ ಇಂದು 233 ಕೋವಿಡ್ ಪ್ರಕರಣಗಳು ವರದಿಯಾಗಿವೆ. ಈ ಮೂಲಕ ಸೋಂಕಿತರ ಸಂಖ್ಯೆ 18,984ಕ್ಕೆ ಏರಿಕೆಯಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಸತೀಶ್ ತಿಳಿಸಿದರು..
ಜಿಲ್ಲೆಯಲ್ಲಿ 14,744 ಮಂದಿ ಸೋಂಕಿನಿಂದ ಗುಣಮುಖರಾಗಿದ್ದು, 3,883 ಸಕ್ರಿಯ ಪ್ರಕರಣಗಳಿವೆ. ಇಂದು ಇಬ್ಬರು ಸೋಂಕಿತರು ಮೃತಪಟ್ಟಿದ್ದಾರೆ. ಈ ಮೂಲಕ ಸಾವಿನ ಸಂಖ್ಯೆ 357ಕ್ಕೇರಿದೆ. ತೀವ್ರ ನಿಗಾ ಘಟಕದಲ್ಲಿ 51 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇಂದಿನ ತಾಲೂಕುವಾರು ಪ್ರಕರಣಗಳು:
ಅರಸೀಕೆರೆಯಲ್ಲಿ 16, ಚನ್ನರಾಯಪಟ್ಟಣ 37, ಆಲೂರು 6, ಹಾಸನ 119, ಹೊಳೆನರಸೀಪುರ 24, ಅರಕಲಗೂಡು 12, ಬೇಲೂರು 15 ಹಾಗೂ ಸಕಲೇಶಪುರದಲ್ಲಿ 5 ಮಂದಿಗೆ ಸೋಂಕು ದೃಢಪಟ್ಟಿದೆ.