ETV Bharat / state

ಹಾಸನದಲ್ಲಿಂದು 22 ಜನರಲ್ಲಿ ಕೊರೊನಾ ಪತ್ತೆ

author img

By

Published : Jun 29, 2020, 8:59 PM IST

ಚನ್ನರಾಯಪಟ್ಟಣ ತಾಲೂಕು ಮೂಲದ 60 ವರ್ಷದ ಮಹಿಳೆ ಕೊರೊನಾಗೆ ಮೃತಪಟ್ಟಿದ್ದು, ಇದರಿಂದ ಜಿಲ್ಲೆಯಲ್ಲಿ ಕೊರೊನಾಗೆ ಬಲಿಯಾದವರ ಸಂಖ್ಯೆ ಮೂರಕ್ಕೆ ಏರಿಕೆಯಾಗಿದೆ.

Corona Positive cases in Hassan
ಹಾಸನದಲ್ಲಿಂದು 22 ಜನರಲ್ಲಿ ಕೊರೊನಾ ಸೋಂಕು ಪತ್ತೆ

ಹಾಸನ: ಜಿಲ್ಲೆಯಲ್ಲಿ ಹೊಸದಾಗಿ 22 ಕೋವಿಡ್ ಪ್ರಕರಣಗಳು ಪತ್ತೆಯಾಗಿವೆ. ಇದರೊಂದಿಗೆ ಸೋಂಕಿತರ ಸಂಖ್ಯೆ 382ಕ್ಕೆ ಏರಿಕೆಯಾಗಿದೆ. ಈವರೆಗೆ 240 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, 129 ಸಕ್ರಿಯ ಸೋಂಕಿತರು ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೂವರು ಸೋಂಕಿನಿಂದ ಮೃತಪಟ್ಟಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸತೀಶ್ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಹೊರಗಿನಿಂದ ಬಂದವರಲ್ಲಿ ಕಾಣಿಸಿಕೊಳ್ಳುತ್ತಿದ್ದ ಕೋವಿಡ್, ಇದೀಗ ಸೋಂಕಿತರ ಸಂಪರ್ಕಿತರು ಹಾಗೂ ಸ್ಥಳೀಯವಾಗಿ ಹರಡುತ್ತಿದೆ. ಇದು ಸ್ಥಳೀಯರಲ್ಲಿ ಆತಂಕ ಹೆಚ್ಚಿಸಿದೆ. ಜೊತೆಗೆ ಕೋವಿಡ್ ಪ್ರಕರಣ ಹೆಚ್ಚುತ್ತಿರುವ ಕಾರಣ ಹೆಚ್ಚು ಪರೀಕ್ಷೆ ನಡೆಸಲು ಜಿಲ್ಲಾ ಆರೋಗ್ಯ ಇಲಾಖೆ ಕೂಡ ಮುಂದಾಗಿದೆ.

ಹೊಳೆನರಸೀಪುರ ತಾಲೂಕಿನಲ್ಲಿ ಮೂವರು ಆಸ್ಪತ್ರೆ ಸಿಬ್ಬಂದಿಗೆ ಪಾಸಿಟಿವ್, ಚಿಕಿತ್ಸೆಗೆ ಬಂದು ಸೋಂಕಿತನಾಗಿದ್ದ P-11259 ಮತ್ತು P-11255ರ ಸಂಪರ್ಕದಿಂದ 5 ಜನರಿಗೆ ಸೋಂಕು ತಗುಲಿದ್ದು, ಅರಸೀಕೆರೆಯಲ್ಲಿ ಸೋಂಕಿತ ಬಿಎಂಟಿಸಿ ಚಾಲಕ P-9745 ಸಂಪರ್ಕದಿಂದ ಮತ್ತೆ ನಾಲ್ಕು ಜನರಿಗೆ ಸೋಂಕು ದೃಢಪಟ್ಟಿದೆ. ಈಗಾಗಲೇ ಇದೇ ಚಾಲಕನ ಸಂಪರ್ಕದಿಂದ 9 ಜನರಿಗೆ ಪಾಸಿಟಿವ್​ ಬಂದಿತ್ತು.

ಇಂದು ಪತ್ತೆಯಾದ 22 ಪ್ರಕರಣಗಳಲ್ಲಿ ಹೊಳೆನರಸೀಪುರ-10, ಅರಸೀಕೆರೆ-7, ಹಾಸನ- 4 ಹಾಗೂ ಹೊರ ರಾಜ್ಯದಿಂದ ಚನ್ನರಾಯಪಟ್ಟಣ ತಾಲೂಕಿಗೆ ಸೇರಿದ ಒಬ್ಬರಿಗೆ ಪಾಸಿಟಿವ್ ಬಂದಿದೆ. ಈಗಾಗಲೇ ಮಹಿಳೆಯರು, ಪುರುಷರು, ಸೈನಿಕ, ವ್ಯಾಪಾರಿ, ಮಕ್ಕಳು, ಬಿಎಂಟಿಸಿ ಚಾಲಕ, ಪೊಲೀಸ್ ಕಾನ್ಸ್​ಟೇಬಲ್, ಸೆಸ್ಕ್ ಎಂಜಿನಿಯರ್, ವಿದ್ಯಾರ್ಥಿ ಸೇರಿದಂತೆ ಎಲ್ಲಾ ವರ್ಗದವರಿಗೂ ಸೋಂಕು ಹರಡಿರುವುದು ಹೆಚ್ಚಿನ ಭೀತಿಗೆ ಕಾರಣವಾಗಿದೆ.

ತಾಲೂಕುವಾರು ವಿವರ

1.ಅರಸೀಕೆರೆ - 29

2.ಅರಕಲಗೂಡು - 19

3.ಆಲೂರು - 18

4.ಬೇಲೂರು -85

5.ಚನ್ನರಾಯಪಟ್ಟಣ -206

6.ಹೊಳೆನರಸೀಪುರ - 54

7.ಹಾಸನ - 44

8.ಸಕಲೇಶಪು - 0

9.ಇತರೆ ಜಿಲ್ಲೆ - 4

ಒಟ್ಟು ಇದುವರೆಗೂ 382 ಪ್ರಕರಣಗಳು ಜಿಲ್ಲೆಯಲ್ಲಿ ಪತ್ತೆಯಾಗಿವೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸತೀಶ್ ತಿಳಿಸಿದ್ದಾರೆ.

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.