ETV Bharat / state

ಹೇಮಾವತಿ ಡ್ಯಾಂ ಭರ್ತಿಗೆ 10 ಅಡಿ ಮಾತ್ರ ಬಾಕಿ: ಸುರಕ್ಷಿತ ಸ್ಥಳಕ್ಕೆ ತೆರಳಲು ಸೂಚನೆ - ಹೇಮಾವತಿ ಜಲಾಶಯ ತುಂಬಲು 10.36 ಅಡಿ ಮಾತ್ರ ಬಾಕಿ

ಹೇಮಾವತಿ ಜಲಾನಯನ ಪ್ರದೇಶದಲ್ಲಿ ಅತಿ ಹೆಚ್ಚು ಮಳೆಯಾಗುತ್ತಿದ್ದು, ಯಾವುದೇ ಸಮಯದಲ್ಲಾದರೂ ನದಿಗೆ ನೀರನ್ನು ಹೊರಬಿಡುವ ಸಾಧ್ಯತೆ ಇರುತ್ತದೆ ಎಂದು ಹೇಮಾವತಿ ಯೋಜನಾ ವೃತ್ತದ ಸೂಪರಿಂಟೆಂಡಿಂಗ್ ಎಂಜಿನಿಯರ್ ತಿಳಿಸಿದ್ದಾರೆ.

Hemavathi Reservoir
ಹೇಮಾವತಿ ಜಲಾಶಯ
author img

By

Published : Aug 7, 2020, 8:21 PM IST

ಹಾಸನ: ಹೇಮಾವತಿ ಜಲಾಶಯದ ಪ್ರದೇಶದಲ್ಲಿ ಅತೀ ಹೆಚ್ಚು ಮಳೆಯಾಗುತ್ತಿದ್ದು, 47320 ಕ್ಯೂಸೆಕ್​​​ ನೀರು ಹರಿದು ಬರುತ್ತಿದೆ. ಜಲಾಶಯದ ಗರಿಷ್ಠ ನೀರಿನ ಮಟ್ಟವು 2922.00 ಅಡಿಗಳಾಗಿದ್ದು, ಇನ್ನೂ 10.36 ಅಡಿಗಳಷ್ಟು ನೀರನ್ನು ಜಲಾಶಯದಲ್ಲಿ ಸಂಗ್ರಹಿಸಬಹುದಾಗಿದೆ.

ಹೇಮಾವತಿ ಜಲಾಶಯ ತುಂಬಲು 10.36 ಅಡಿ ಮಾತ್ರ ಬಾಕಿ

ಜಲಾನಯನ ಪ್ರದೇಶದಲ್ಲಿ ಅತಿ ಹೆಚ್ಚು ಮಳೆಯಾಗುತ್ತಿದ್ದು, ಹೆಚ್ಚಿನ ಪ್ರಮಾಣದಲ್ಲಿ ಜಲಾಶಯಕ್ಕೆ ನೀರು ಹರಿದು ಬರುವ ಸಾಧ್ಯತೆಯಿರುವುದರಿಂದ, ಜಲಾಶಯದಿಂದ ಯಾವುದೇ ಸಮಯದಲ್ಲಾದರೂ ನದಿಗೆ ನೀರನ್ನು ಹೊರಬಿಡುವ ಸಾಧ್ಯತೆ ಇರುತ್ತದೆ ಎಂದು ಹೇಮಾವತಿ ಯೋಜನಾ ವೃತ್ತದ ಸೂಪರಿಂಟೆಂಡಿಂಗ್ ಎಂಜಿನಿಯರ್ ತಿಳಿಸಿದ್ದಾರೆ.

ಪ್ರಕಟಣೆ
ಪ್ರಕಟಣೆ

ಈ ಹಿನ್ನೆಲೆಯಲ್ಲಿ ಹೇಮಾವತಿ ನದಿ ಪಾತ್ರ, ನದಿ ದಂಡೆ ಮತ್ತು ನದಿಯ ಆಸುಪಾಸಿನಲ್ಲಿ ವಾಸಿಸುವ ಎಲ್ಲಾ ಗ್ರಾಮಸ್ಥರು, ಸ್ಥಳೀಯ ವಾಸಿಗಳು ಮುನ್ನೆಚ್ಚರಿಕೆ ಕ್ರಮವಾಗಿ ಸುರಕ್ಷಿತ ಸ್ಥಳಗಳಿಗೆ ತಕ್ಷಣವೇ ತೆರಳಲು ವಿನಂತಿಸಲಾಗಿದೆ.

ಜಿಲ್ಲಾವಾರು ಮಳೆ ವಿವರ:

ಜಿಲ್ಲೆಯಲ್ಲಿ ಆ.6 ರ ಬೆಳಗಿನವರೆಗೆ ದಾಖಲಾದ ಹಿಂದಿನ 24 ಗಂಟೆಗಳ ಹೋಬಳಿವಾರು ಮಳೆ ವರದಿ ಅನ್ವಯ ಹಾಸನ ತಾಲೂಕಿನ ಸಾಲಗಾಮೆ 32ಮಿ.ಮೀ., ಹಾಸನ 26.4 ಮಿ.ಮೀ., ದುದ್ದ 33.7 ಮಿ.ಮೀ., ಶಾಂತಿಗ್ರಾಮ 26.8 ಮಿ.ಮೀ., ಕಟ್ಟಾಯ 25.2 ಮಿ.ಮೀ. ಮಳೆಯಾಗಿದೆ.

ಸಕಲೇಶಪುರ ತಾಲೂಕಿನ ಹೊಸೂರು 75ಮಿ.ಮೀ., ಶುಕ್ರವಾರ ಸಂತೆ 141ಮಿ.ಮೀ., ಹೆತ್ತೂರು 217.೪ ಮಿ.ಮೀ., ಯಸಳೂರು 132 ಮಿ.ಮೀ., ಸಕಲೇಶಪುರ 132.4 ಮಿ.ಮೀ., ಬಾಳ್ಳುಪೇಟೆ 85.2 ಮಿ.ಮೀ., ಬೆಳಗೋಡು 72.5 ಮಿ.ಮೀ., ಮಾರನಹಳ್ಳಿ 232.1 ಮಿ.ಮೀ., ಹಾನುಬಾಳು 143.6 ಮಿ.ಮೀ., ಮಳೆಯಾಗಿದೆ.

ಅರಸೀಕೆರೆ ತಾಲೂಕಿನ ಜಾವಗಲ್ 3 ಮಿ.ಮೀ., ಗಂಡಸಿ 10.6 ಮಿ.ಮೀ., ಕಸಬಾ 10.5 ಮಿ.ಮೀ., ಬಾಣವಾರ 24 ಮಿ.ಮೀ., ಕಣಕಟ್ಟೆ 3.2 ಮಿ.ಮೀ., ಯಳವಾರೆ 12.1 ಮಿ.ಮೀ. ಮಳೆಯಾಗಿದೆ. ಹೊಳೆನರಸೀಪುರ ತಾಲೂಕಿನ ಹಳ್ಳಿಮೈಸೂರು 14.4 ಮಿ.ಮೀ., ಹೊಳೆನರಸೀಪುರ 12.4 ಮಿ.ಮೀ., ಹಳೆಕೋಟೆ 20 ಮಿ.ಮೀ. ಮಳೆಯಾಗಿದೆ.

ಅರಕಲಗೂಡು ತಾಲೂಕಿನ ಮಲ್ಲಿಪಟ್ಟಣ 58 ಮಿ.ಮೀ., ಕಸಬಾ 30.2 ಮಿ.ಮೀ., ದೊಡ್ಡಮಗ್ಗೆ 27.4 ಮಿಮೀ., ರಾಮನಾಥಪುರ 32.6 ಮಿ.ಮೀ., ಬಸವಪಟ್ಟಣ 23.4 ಮಿ.ಮೀ., ಕೊಣನೂರು 18.8 ಮಿ.ಮೀ., ದೊಡ್ಡಬೆಮ್ಮತ್ತಿ 30.2 ಮಿ.ಮೀ. ಮಳೆಯಾಗಿದೆ.

ಆಲೂರು ತಾಲೂಕಿನ ಕುಂದೂರು 42 ಮಿ.ಮೀ., ಆಲೂರು 50 ಮಿ.ಮೀ., ಕೆ. ಹೊಸಕೋಟೆ 85.4 ಮಿ.ಮೀ, ಪಾಳ್ಯ62.2 ಮಿ.ಮೀ. ಮಳೆಯಾಗಿದೆ. ಬೇಲೂರು ತಾಲೂಕಿನ ಹಳೆಬೀಡು 49.8 ಮಿ.ಮೀ., ಬೇಲೂರು 68.4 ಮಿ.ಮೀ., ಹಗರೆ 59 ಮಿ.ಮೀ., ಬಿಕ್ಕೋಡು 71 ಮಿ.ಮೀ., ಗೆಂಡೆಹಳ್ಳಿ 130 ಮಿ.ಮೀ., ಅರೆಹಳ್ಳಿ 110 ಮಿ.ಮೀ., ಮಳೆಯಾಗಿದೆ.

ಚನ್ನರಾಯಪಟ್ಟಣ ತಾಲೂಕಿನ ಕಸಬಾ 6.2 ಮಿ.ಮೀ., ಉದಯಪುರ 14 ಮಿ.ಮೀ., ಬಾಗೂರು 7 ಮಿ.ಮೀ., ನುಗ್ಗೆಹಳ್ಳಿ 2.2 ಮಿ.ಮೀ., ಹಿರಿಸಾವೆ 3.2 ಮಿ.ಮೀ., ಶ್ರವಣಬೆಳಗೊಳ 4.2 ಮಿ.ಮೀ. ಮಳೆಯಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.