ETV Bharat / state

ಸೋಂಕಿತ ಗರ್ಭಿಣಿಗೆ ಜಿಮ್ಸ್‌ನಲ್ಲಿ ಯಶಸ್ವಿ ಹೆರಿಗೆ; ತಾಯಿ-ಮಗುವಿನ ಬದುಕಲ್ಲಿ ಕೊರೊನಾ ಚೆಲ್ಲಾಟ - Gadag corona news

ಮೊದಲ ಬಾರಿಗೆ ಕೊರೊನಾ ಸೋಂಕಿತ ಗರ್ಭಿಣಿಗೆ ಹೆರಿಗೆ ಮಾಡಿಸುವ ಸವಾಲು ಜಿಮ್ಸ್ ವೈದ್ಯರಿಗೆ ಎದುರಾಗಿತ್ತು. ಹಾಗಾಗಿ, ತಾಯಿ ಮಗುವಿನ ಆರೋಗ್ಯದ ಜೊತೆಗೆ ವೈದ್ಯರಿಗೆ ತಮ್ಮ ಆರೋಗ್ಯದ ಬಗ್ಗೆಯೂ ಕಾಳಜಿವಹಿಸಬೇಕಿತ್ತು.

Gadag
ಮಗು
author img

By

Published : Jul 5, 2020, 3:03 PM IST

ಗದಗ: ತಾಯಿ ಜೊತೆಯಲ್ಲಿಯೇ ಇದ್ದರೂ ಎದೆ ಹಾಲು ಕುಡಿಸುವ ಹಾಗಿಲ್ಲ. ಅಪ್ಪ ಕೂಸಿನ ಮುಖವೇ ನೋಡಿಲ್ಲ. ತಾಯಿ ಒಂದೆಡೆಯಾದರೆ ಮಗು ಮತ್ತೊಂದೆಡೆ. ಇಲ್ಲಿನ ಜಿಮ್ಸ್‌ನಲ್ಲಿ ಕೊರೊನಾ ಸೋಂಕಿತೆಗೆ ಯಶಸ್ವಿಯಾಗಿ ಹೆರಿಗೆ ನಡೆಸಿದ ಬಳಿಕ ಕಂಡು ಬಂದ ಚಿತ್ರಣ.

ಗೋಜನೂರು ಗ್ರಾಮದ 23 ವರ್ಷದ ಗರ್ಭಿಣಿಗೆ ಕೊರೊನಾ ಪಾಸಿಟಿವ್​ ದೃಢಪಟ್ಟಿತ್ತು. ಆ ತುಂಬು ಗರ್ಭಿಣಿ ಎರಡು ದಿನದ ಹಿಂದೆ ಚಿಕಿತ್ಸೆಗೆಂದು ಒಬ್ಬಂಟಿಯಾಗಿ ಜಿಮ್ಸ್ ಆಸ್ಪತ್ರೆಗೆ ಬಂದಿದ್ದಳು. ಆಕೆಗೆ ಯಾವುದೇ ಕೊರೊನಾ ಲಕ್ಷಣಗಳಿರಲಿಲ್ಲ. ಆದರೆ ರ್ಯಾಂಡಮ್​ ಟೆಸ್ಟ್ ಮಾಡಿದ ಬಳಿಕ ಸೋಂಕು ತಗುಲಿರುವುದು ಗೊತ್ತಾಗಿತ್ತು. ತಕ್ಷಣವೇ ಜಿಮ್ಸ್ ವೈದ್ಯರು ಆಕೆಗೆ ಹೆರಿಗೆ ಮಾಡಿಸುವ ನಿರ್ಧಾರಕ್ಕೆ ಬಂದರು. ಈ ವೇಳೆ ತಾಯಿ, ಮಗುವನ್ನು ಉಳಿಸಿಕೊಳ್ಳುವುದು ವೈದ್ಯರಿಗೆ ಸವಾಲಾಗಿತ್ತು.

Gadag
ಹೆತ್ತ ತಾಯಿಯಿಂದ ದೂರವಾದ ಮಗು

ಈ ಸವಾಲು ಸ್ವೀಕರಿಸಿದ ವೈದ್ಯರು ತಕ್ಷಣ ನುರಿತ ವೈದ್ಯರ ತಂಡ ಸಿದ್ಧಪಡಿಸಿದ್ದಾರೆ. ಸ್ತ್ರೀರೋಗ ತಜ್ಞೆ ಡಾ.ಶೃತಿ ಬಾವಿ, ಅರಿವಳಿಕೆ ತಜ್ಞ ಡಾ. ಅಜಯ್ ಬಸರಿಗಿಡದ, ಮಕ್ಕಳ‌ ತಜ್ಞ ಡಾ. ಶಿವನಗೌಡ ಜೋಳದರಾಶಿ ಈ ಟೀಂನಲ್ಲಿದ್ದರು.

ಸುಮಾರು 1 ಗಂಟೆಗಳ ಕಾಲ ನಡೆದ ಶಸ್ತ್ರ ಚಿಕಿತ್ಸೆಯ ಮೂಲಕ ಹೆರಿಗೆ ಕಾರ್ಯ ಯಶಸ್ವಿಯಾಗಿತ್ತು. ಹೆಣ್ಣು ಮಗುವಿಗೆ ಜನ್ಮ ನೀಡ್ತಾಳೆ ಆ ತಾಯಿ. ಮಗು 2.7 ಕೆ.ಜಿ ತೂಕ ಇತ್ತು. ಹಸುಳೆಗೆ ಸ್ವಲ್ಪ ಉಸಿರಾಟದ ತೊಂದರೆ ಇದ್ದುದರಿಂದ ಪ್ರತ್ಯೇಕವಾಗಿ ಐಸಿಯು ಕೊಠಡಿಯಲ್ಲಿರಿಸಿ ಚಿಕಿತ್ಸೆ ನೀಡಲಾಗ್ತಿದೆ.

ಮಗುವಿಗೆ ಸೋಂಕು ತಗುಲುವ ಸಾಧ್ಯತೆ ಕಡಿಮೆ- ವೈದ್ಯರು

ತಾಯಿಗೆ ಕೊರೊನಾ ಸೋಂಕು ಇರುವ ಕಾರಣ ಮಗುವಿಗೆ ಸೋಂಕು ಪಸರಿಸುವ ಸಂಭವ ಕಡಿಮೆ ಎಂದು ವೈದ್ಯ ಡಾ. ಶಿವನಗೌಡ ಜೋಳದರಾಶಿ ಹೇಳುತ್ತಾರೆ. ಆದರೂ ಮಗುವಿನ ಗಂಟಲು ದ್ರವವನ್ನು ಪರೀಕ್ಷೆಗೆ ಕಳುಹಿಸಲಾಗಿದೆ.

ವಿಚಿತ್ರ ಅಂದ್ರೆ, ಗರ್ಭಿಣಿಯು ಆಸ್ಪತ್ರೆಗೆ ಬಂದಿದ್ದು ಒಬ್ಬಂಟಿಯಾಗಿ. ಈ ವೇಳೆ ಆಕೆಯೊಂದಿಗೆ ತವರು ಮನೆಯವರಾಗಲಿ ಗಂಡನ ಮನೆಯವರಾಗಲಿ ಇರಲಿಲ್ಲ. ಹಾಗಾಗಿ, ಆಗಷ್ಟೇ ಹುಟ್ಟಿದ ಹಸುಳೆಯನ್ನು ನೋಡಲು ಯಾರೊಬ್ಬರೂ ಇಲ್ಲದಂತಾಗಿದೆ.‌

ನಮ್ಮ ಸ್ಥಿತಿ ಯಾರಿಗೂ ಬರಬಾರದು ಅಂತ ಆ ತಾಯಿ ಕಣ್ಣೀರು ಹಾಕ್ತಿದ್ದಾಳೆ. ವೈದ್ಯಕೀಯ ಪರೀಕ್ಷೆಯ ವೇಳೆ ಮಗುವಿಗೆ ನೆಗೆಟಿವ್ ಬಂದರೆ ಸಂಬಂಧಿಕರಿಗೆ ಮಗುವನ್ನು ನೋಡೋಕೆ ಅವಕಾಶ ಮಾಡಿಕೊಡುತ್ತೇವೆ ಎಂದು ವೈದ್ಯರು ಹೇಳಿದ್ದಾರೆ. ಆದರೆ ಈವರೆಗೂ ಸಂಬಂಧಿಕರ ಸುಳಿವಿಲ್ಲ. ಸದ್ಯಕ್ಕೆ ವೈದ್ಯರು, ನರ್ಸ್​ಗಳೇ ಆ ಮಗುವಿನ ಆರೈಕೆಯಲ್ಲಿ ತೊಡಗಿದ್ದಾರೆ.

ತಾಯಿ-ಮಗುವಿನ ಬದುಕಿನಲ್ಲಿ ಕೊರೊನಾ ಚೆಲ್ಲಾಟ ವಿಧಿ ವಿಪರ್ಯಾಸ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.