ಗದಗ : ಸಾರ್ವಜನಿಕ ಶೌಚಾಲಯದಲ್ಲಿ ಸ್ವಚ್ಛತಾ ಕೆಲಸ ಮಾಡುವ ಸಿಬ್ಬಂದಿ ಅಲ್ಲಿಯೇ ಕುಟುಂಬ ಸಮೇತ ವಾಸವಾಗಿರುವ ಸಂಗತಿ ಬಡವರಿಗೆ ಗೌರವಯುತ ಬದುಕು ಸಾಗಿಸುವ ಹಕ್ಕಿಲ್ಲವೇ ಎಂಬ ಪ್ರಶ್ನೆ ಮೂಡುವಂತೆ ಮಾಡಿದೆ.
ನರಗುಂದ ಪಟ್ಟಣ ಸಾರ್ವಜನಿಕರ ಶೌಚಾಲಯದಲ್ಲಿ ಸ್ವಚ್ಛತಾ ಕೆಲಸ ಮಾಡುವ ಬಿಹಾರ್ ಮೂಲದ ಪಪ್ಪು ಎಂಬಾತ ತನ್ನ ಪತ್ನಿ ಸೇರಿ ಎರಡು ಮಕ್ಕಳ ಜೊತೆ ಕಳೆದ ನಾಲ್ಕು ತಿಂಗಳಿಂದ ಅಲ್ಲಿಯೇ ವಾಸವಾಗಿದ್ದಾನೆ. ಖಾಸಗಿ ಎನ್ಜಿಒಗಳು ಶೌಚಾಲಯ ನಿರ್ವಹಣೆಗಾಗಿ ಅಂತಾರಾಜ್ಯದ ಇಂಹತ ಬಡ ಜನರನ್ನು ನೇಮಿಸಿಕೊಂಡು ಶೋಷಣೆ ಮಾಡುತ್ತಿದೆ ಎಂಬು ಮಾತುಗಳು ಸಾರ್ವಜನಿಕರ ವಲಯದಲ್ಲಿ ಕೇಳಿಬರುತ್ತಿವೆ.
ದುಡಿಯಲು ಬಂದ ಬಡ ಜನರಿಗೆ ಬಾಡಿಗೆ ಮನೆ ಪಡೆದು ಕಾರ್ಯನಿರ್ವಹಿಸುವ ಸಾಮರ್ಥ್ಯವಿಲ್ಲದ ರೀತಿಯಲ್ಲಿ ದಿನಗೂಲಿಯನ್ನು ಸಂಸ್ಥೆಗಳು ನೀಡುತ್ತಿವೆಯಾ ಎಂಬ ಅನುಮಾನ ಮೂಡುತ್ತಿದೆ. ಇದು ಗದಗ ಜಿಲ್ಲೆಯ ಕತೆ ಅಷ್ಟೇ ಅಲ್ಲದೆ ರಾಜ್ಯದ ಹಲವಾರು ಸಾರ್ವಜನಿಕ ಶೌಚಾಲಯಗಳ ಸ್ವಚ್ಚತಾ ಸಿಬ್ಬಂದಿಯ ಪರಿಸ್ಥಿತಿ ಇದಾಗಿದೆ. ಇನ್ನಾದರೂ ಅವರಿಗೂ ಎಲ್ಲರಂತೆ ಬಾಳು ಸಾಗಿಸುವ ನಿಟ್ಟಿನಲ್ಲಿ ಸಂಸ್ಥೆಗಳ ಮೇಲೆ ಸರ್ಕಾರ ಕ್ರಮ ಕೈಗೊಳ್ಳುತ್ತಾ ಎಂದು ಕಾದು ನೋಡಬೇಕಿದೆ.