ಗದಗ: ಇಲ್ಲಿನ ರೈಲು ನಿಲ್ದಾಣಕ್ಕೆ ಮುಂಬೈನಿಂದ ರೈಲಿನಲ್ಲಿ ಆಗಮಿಸಿದ್ದ ಪ್ರಯಾಣಿಕನೋರ್ವ ಹೈಡ್ರಾಮ ಮಾಡಿದ್ದಾನೆ.
ಕ್ವಾರಂಟೈನ್ ಆಗೋದಿಲ್ಲ ಎಂದು ಹಠ ಹಿಡಿದಿರುವ ಪ್ರಯಾಣಿಕ ಮಾನಸಿಕ ಅಸ್ವಸ್ಥನಂತೆ ವರ್ತಿಸಿದ್ದಾನೆ. ಇವನು ಹೇಳೋ ಪ್ರಕಾರ, ಈತನ ಹೆಸರು ಮೈಕಲ್. ಜರ್ನಲಿಷ್ಟ್, ಎಕನಾಮಿಷ್ಟ್, ಬ್ಲಾಗರ್ ಅಂತ ಹೇಳುತ್ತಿದ್ದಾನೆ. ಈ ವ್ಯಕ್ತಿಗೆ ಕೊನೆಗೆ ಲಾಠಿ ಏಟು ನೀಡಿ ಆಂಬ್ಯುಲೆನ್ಸ್ ಮೂಲಕ ಕ್ವಾರಂಟೈನ್ ಕೇಂದ್ರಕ್ಕೆ ರವಾನೆ ಮಾಡಲಾಗಿದೆ.