ETV Bharat / state

ಗದಗ: ದಂಡಪ್ಪ ಮಾನ್ವಿ ಸರಕಾರಿ ಹೆರಿಗೆ ಆಸ್ಪತ್ರೆ ಸ್ಥಳಾಂತರ ಯತ್ನ; ಸ್ಥಳೀಯರ ಆಕ್ರೋಶ - ಗದಗ ಸರಕಾರಿ ಆಸ್ಪತ್ರೆ

ನಾವು ಆಸ್ಪತ್ರೆಯನ್ನು ಸ್ಥಳಾಂತರ ಮಾಡಿಲ್ಲ. ವೈದ್ಯಕೀಯ ಸಿಬ್ಬಂದಿ ಮತ್ತು ವೈದ್ಯಕೀಯ ಸಾಮಗ್ರಿಗಳು ಇಲ್ಲೇ ಇವೆ. ಆದ್ರೆ ಮೆಡಿಕಲ್ ವಿದ್ಯಾರ್ಥಿಗಳ ತರಗತಿಗಳಿಗೆ ಬೇಕಿರುವ ಸಾಮಗ್ರಿಗಳನ್ನು ಮಾತ್ರ ಸ್ಥಳಾಂತರ ಮಾಡಲಾಗಿದೆ- ಆಸ್ಪತ್ರೆಯ ಹಿರಿಯ ವೈದ್ಯಾಧಿಕಾರಿ

Government ambulance misuse in Gadag, Gadag Government hospital, Ambulance issue in Gadag, ಗದಗನಲ್ಲಿ ಸರಕಾರಿ ಆಂಬ್ಯುಲೆನ್ಸ್ ದುರ್ಬಳಕೆ, ಗದಗ ಸರಕಾರಿ ಆಸ್ಪತ್ರೆ, ಗದಗನಲ್ಲಿ ಆಂಬ್ಯುಲೆನ್ಸ್ ಸಮಸ್ಯೆ,
ಆ್ಯಂಬುಲೆನ್ಸ್​ನಲ್ಲಿ ಸದ್ದಿಲ್ಲದೇ ಸಾಮಗ್ರಿಗಳ ಸಾಗಾಟ
author img

By

Published : May 20, 2022, 8:51 AM IST

ಗದಗ: ನಗರದ ಹೃದಯ ಭಾಗದಲ್ಲಿರುವ ದಂಡಪ್ಪ ಮಾನ್ವಿ ಸರಕಾರಿ ಹೆರಿಗೆ ಆಸ್ಪತ್ರೆಯನ್ನು ನಗರದ ಹೊರವಲಯದಲ್ಲಿರುವ ಜಿಲ್ಲಾಸ್ಪತ್ರೆಗೆ ಸ್ಥಳಾಂತರಿಸಲು ಅಧಿಕಾರಿಗಳು ಪ್ರಯತ್ನಿಸುತ್ತಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

'ಜಿಲ್ಲಾಸ್ಪತ್ರೆಯು ನಗರದ ಸುಮಾರು 10 ಕಿ.ಮೀ ದೂರ ಇರುವುದರಿಂದ ತ್ವರಿತವಾಗಿ ಆಸ್ಪತ್ರೆಗೆ ಹೋಗಲು ತೊಂದರೆ ಆಗುತ್ತಿದೆ. ಈ ಹೆರಿಗೆ ಆಸ್ಪತ್ರೆ ಬಡ ಹೆಣ್ಣುಮಕ್ಕಳಿಗೆ ಬಹಳಷ್ಟು ಅನುಕೂಲವಾಗಿದೆ. ‌ಆದ್ರೆ ಸ್ಥಳೀಯ ಖಾಸಗಿ ಆಸ್ಪತ್ರೆಗಳಿಗೆ ಪ್ರಯೋಜನ ಮಾಡಿಕೊಡುವ ದುರುದ್ದೇಶದಿಂದ ಈ ರೀತಿ ದಿಢೀರ್​ ಆಸ್ಪತ್ರೆಯನ್ನು ಸ್ಥಳಾಂತರ ಮಾಡುತ್ತಿದ್ದಾರೆ' ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು.

ಇದನ್ನೂ ಓದಿ: ಡೋಂಗಿ ಬಾಬಾ ಹೇಳಿದ್ದಕ್ಕೆ ಬೆಂಕಿ ಮೇಲೆ ಕೈ - ಕಾಲು ಇಟ್ಟ ಯುವತಿ.. ಸುಟ್ಟ ಗಾಯಗಳಿಂದ ಆಸ್ಪತ್ರೆ ಪಾಲು

ಚಿಕ್ಕಮಕ್ಕಳ ವಾರ್ಡ್, ಎನ್ಐಸಿಯು, ಬ್ಲಡ್ ಟೆಸ್ಟ್, ಸ್ಕ್ಯಾನಿಂಗ್ ಮಷಿನ್ ಮತ್ತು ಬಹುತೇಕ ಆಪರೇಷನ್ ಸಾಮಗ್ರಿಗಳನ್ನು ಈಗಾಗಲೇ ಜಿಲ್ಲಾಸ್ಪತ್ರೆಗೆ ಸದ್ದಿಲ್ಲದೇ ಆಂಬ್ಯುಲೆನ್ಸ್​ ಮೂಲಕ ರವಾನಿಸಿದ್ದಾರೆ ಎಂದು ಅವರು ತಿಳಿಸಿದರು.

ಗಳು ಪ್ರತಿಕ್ರಿಯಿಸಿ, 'ನಾವು ಆಸ್ಪತ್ರೆಯನ್ನು ಸ್ಥಳಾಂತರ ಮಾಡಿಲ್ಲ. ವೈದ್ಯಕೀಯ ಸಿಬ್ಬಂದಿ ಮತ್ತು ವೈದ್ಯಕೀಯ ಸಾಮಗ್ರಿಗಳು ಇಲ್ಲೇ ಇವೆ. ಆದ್ರೆ ಮೆಡಿಕಲ್ ವಿದ್ಯಾರ್ಥಿಗಳ ತರಗತಿಗಳಿಗೆ ಬೇಕಿರುವ ಸಾಮಗ್ರಿಗಳನ್ನು ಮಾತ್ರ ಸ್ಥಳಾಂತರ ಮಾಡಲಾಗಿದೆ. ಆಂಬ್ಯುಲೆನ್ಸ್​ನಲ್ಲಿ ಸಾಮಗ್ರಿಗಳನ್ನು ರವಾನಿಸಿದ ಸಿಬ್ಬಂದಿ ಮೇಲೆ ಕ್ರಮ ಕೈಗೊಳ್ಳುತ್ತೇವೆ' ಎಂದು ಹೇಳಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.