ETV Bharat / state

ಕಿವಿ ಚಿಕಿತ್ಸೆಗೆ ಬಂದ ಮಹಿಳೆ ಸಾವು: ಗದಗ ಜಿಮ್ಸ್‌ ವೈದ್ಯರ ವಿರುದ್ಧ ಕುಟುಂಬಸ್ಥರ ಆಕ್ರೋಶ

ಗದಗ ಜಿಮ್ಸ್ ಆಸ್ಪತ್ರೆಗೆ ಕಿವಿ ಚಿಕಿತ್ಸೆಗೆಂದು ಬಂದ ಮಹಿಳೆ ಸಾವನ್ನಪ್ಪಿದ್ದಾರೆ. ಪತ್ನಿಯ ಸಾವಿನಿಂದ ಕಂಗಾಲಾದ ಪತಿ ಆ್ಯಂಬುಲೆನ್ಸ್ ಚಕ್ರದಡಿ ಸಿಲುಕಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಇದೇ ವೇಳೆ ಕುಟುಂಬಸ್ಥರು ವೈದ್ಯರ ವಿರುದ್ಧ ತೀವ್ರ ಆಕ್ರೋಶ ಹೊರ ಹಾಕಿದ್ದಾರೆ.

woman dies who had undergone ear treatment in Gadag Gims
ಸುಮಿತ್ರಾ ಬಡಿಗೇರ-ಮೃತ ಮಹಿಳೆ
author img

By

Published : Mar 22, 2022, 4:46 PM IST

ಗದಗ: ಕಿವಿ ಚಿಕಿತ್ಸೆಗೆಂದು ಬಂದ ಮಹಿಳೆ ಸಾವನ್ನಪ್ಪಿರುವ ಘಟನೆ ನಗರದ ಜಿಮ್ಸ್ ಆಸ್ಪತ್ರೆಯಲ್ಲಿ ನಡೆದಿದೆ. ಗದಗ ತಾಲೂಕಿನ ಕಣವಿ-ಹೊಸೂರು ಗ್ರಾಮದ ಸುಮಿತ್ರಾ ಬಡಿಗೇರ (35) ಮೃತ ಮಹಿಳೆ ಎಂದು ಗುರುತಿಸಲಾಗಿದೆ.

ಘಟನೆಯ ವಿವರ: ಸುಮಿತ್ರಾ ಬಡಿಗೇರ ಎಂಬುವವರು ಹೊಸ ಚಿನ್ನದ ಕಿವಿಯೋಲೆ ತಂದಿದ್ದರಂತೆ. ಆದ್ರೆ ಕಿವಿ ರಂಧ್ರಗಳು ಹಿರಿದಾಗಿದ್ದು ಕಿವಿಯೋಲೆಗಳು ಕಳಚಿ ಬೀಳುವಂತಿದ್ದವಂತೆ. ಹೀಗಾಗಿ, ಶಸ್ತ್ರಚಿಕಿತ್ಸೆಯ ಮೂಲಕ ಕಿವಿ ರಂಧ್ರ ಮುಚ್ಚಿಸಿಕೊಳ್ಳಲು ಜಿಮ್ಸ್ ಆಸ್ಪತ್ರೆಗೆ ಬಂದಿದ್ದಾರೆ. ಇದೇ ವೇಳೆ ವೈದ್ಯರು ಇಂಜೆಕ್ಷನ್ ಕೊಟ್ಟಿದ್ದಾರೆ ಎನ್ನಲಾಗಿದೆ. ಇದಾದ ಬಳಿಕ ಮಹಿಳೆ ದಿಢೀರ್ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ. ಈ ಘಟನೆ ಮಹಿಳೆಯ ಪತಿ ಮತ್ತು ಕುಟುಂಬಸ್ಥರನ್ನು ಕೆರಳಿಸಿದ್ದು, ಚಿನ್ನದ ಓಲೆಯನ್ನ ತೊಡಬೇಕೆನ್ನುವ ಧಾವಂತದಲ್ಲಿ ಚಿಕಿತ್ಸೆಗೆ ಬಂದು ವೈದ್ಯರ ನಿರ್ಲಕ್ಷ್ಯಕ್ಕೆ ನನ್ನ ಪತ್ನಿ ಬಲಿಯಾಗಿದ್ದಾಳೆ ಎಂದು ಪತಿ ಮಂಜುನಾಥ್ ಆರೋಪಿಸಿದ್ದಾರೆ.

ಪತ್ನಿಯ ಸಾವಿನಿಂದ ತೀವ್ರ ಆಘಾತಕ್ಕೊಳಗಾಗಿರುವ ಪತಿ ಮಂಜುನಾಥ್ ಆ್ಯಂಬುಲೆನ್ಸ್​​ ಚಕ್ರದಡಿ ಸಿಲುಕಿ ಆತ್ಮಹತ್ಯೆಗೂ ಯತ್ನಿಸಿದ್ದಾರೆ.

ವೈದ್ಯ ಶರತ್ ಬಾಬು ಪ್ರತಿಕ್ರಿಯೆ: ಮಹಿಳೆಗೆ ಚಿಕಿತ್ಸೆ ನೀಡುವಾಗ ಫಿಟ್ಸ್ ಬಂದು ವಾಂತಿಯಾಗಿತ್ತು. ಬಳಿಕ ತೀವ್ರ ಹೃದಯಾಘಾತವಾಗಿ ಆಕೆ ಸಾವನ್ನಪ್ಪಿದ್ದಾರೆ ಎಂದು ತಿಳಿಸಿದರು.

ಕುಟುಂಬಸ್ಥರ ಆಕ್ರೋಶ: ವೈದ್ಯರು ಹೇಳುತ್ತಿರುವುದು ಶುದ್ಧ ಸುಳ್ಳು ಎಂದು ಕುಟುಂಬಸ್ಥರು ಆರೋಪಿಸುತ್ತಿದ್ದಾರೆ. ಮಹಿಳೆಗೆ ಸುಮಾರು 35 ವರ್ಷಗಳಾಗಿದ್ದು ಯಾವುದೇ ರೋಗ-ರುಜಿನಗಳಿರಲಿಲ್ಲ. ಆಕೆಗೆ ಫಿಟ್ಸ್ ಸಹ ಇರಲಿಲ್ಲ. ಮಹಿಳೆಯ ಸಾವಿಗೆ ಕಾರಣರಾಗಿರುವ ವೈದ್ಯರ ಮೇಲೆ ಕ್ರಮ ಆಗಬೇಕು ಮತ್ತು ನಮಗೆ ನ್ಯಾಯ ಕೊಡಿಸಬೇಕು ಎಂದು ಆಗ್ರಹಿಸಿದ್ದಾರೆ.

ಇದನ್ನೂ ಓದಿ: ಮತಾಂತರಕ್ಕೆ ವಿರೋಧಿಸಿದ ಹಿಂದೂ ಯುವತಿಯ ದಾರುಣ ಹತ್ಯೆ: ಪಾಕ್‌ನ ಸಿಂಧ್‌ನಲ್ಲಿ ಮುಂದುವರೆದ ದೌರ್ಜನ್ಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.