ಗದಗ: ಜಿಲ್ಲೆಯಲ್ಲಿ ಕೊರೊನಾ ವಾರಿಯರ್ಸ್ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸೇವೆ ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸಿದರು.
ಆಯುಷ್, ಹೋಮಿಯೋಪತಿಯ ಸುಮಾರು 60 ವೈದ್ಯರು ಸೇವೆ ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸಿದರು. ಮಹಾತ್ಮ ಗಾಂಧಿ ವೃತದ ಬಳಿ ಇರುವ ಹಳೇ ಸರ್ಕಾರಿ ಆಸ್ಪತ್ರೆ ಎದುರು ಪ್ರತಿಭಟನೆ ನಡೆಸಿದ ಇವರು, ಸೇವೆ ಖಾಯಂ ಮಾಡುವುದು, ವೇತನ ತಾರತಮ್ಯ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿದರು.
ಜುಲೈ 15 ರಿಂದ ಕೋವಿಡ್-19 ಸೇವೆಗೆ ಗೈರಾಗಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಈ ಸಿಬ್ಬಂದಿ ಸೋಂಕಿತರ ಸ್ವ್ಯಾಬ್ ತಪಾಸಣೆ, ಕಂಟೇನಮೆಂಟ್ ಪ್ರದೇಶ ಸೇರಿದಂತೆ ಕೊರೊನಾ ಸೇವೆಯಲ್ಲಿ ತೊಡಗಿದ್ದರು. ವೈದ್ಯರ ಮುಷ್ಕರದಿಂದ ಗ್ರಾಮೀಣ ಭಾಗದ ರೋಗಿಗಳಿಗೆ ತೊಂದರೆಯಾಗುವ ಸಾಧ್ಯತೆ ಇದೆ.