ETV Bharat / state

ಸರ್ಕಾರ ಸಹಾಯ ಧನ ಘೋಷಿಸಿದರೂ‌ ಮುಗಿಯದ ಹೂ ಬೆಳೆಗಾರರ ಗೋಳು - Flower growers lose

ಲಾಕ್​ಡೌನ್​ ಸಡಿಲಿಸಿದರೂ ಮಾರುಕಟ್ಟೆಯಲ್ಲಿ ಹೂ ಖರೀದಿಗೆ ಗ್ರಾಹಕರು ಬರದ ಕಾರಣ ಹೂ ಬೆಳೆಗಾರರು ಕಂಗಾಲಾಗಿದ್ದಾರೆ.

flower
ಹೂ ಬೆಳೆಗಾರರ ಗೋಳು
author img

By

Published : May 27, 2020, 5:32 PM IST

ಗದಗ: ಸರ್ಕಾರ ವಿಶೇಷ ಪ್ಯಾಕೇಜ್​​ ಘೋಷಿಸಿದರೂ ರೈತರ ಗೋಳು ಇನ್ನೂ ಮುಗಿದಿಲ್ಲ. ಸರಿಯಾದ ಮಾರುಕಟ್ಟೆ ವ್ಯವಸ್ಥೆ ಇಲ್ಲದೇ ಕಷ್ಟ ಅನುಭವಿಸುತ್ತಿದ್ದಾರೆ.

ಸಾಲು ಸಾಲು ಜಾತ್ರೆಗಳು, ಹಬ್ಬ- ಹರಿದಿನಗಳ ಆಚರಣೆ ನಿಷೇಧ ಹೇರಿರುವ ಪರಿಣಾಮ ಹೂ ಬೆಳೆಗಾರರು ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದಾರೆ.

ಹೂ ಮಾರುಕಟ್ಟೆಗೆ ಬಾರದ ಗ್ರಾಹಕರು

ಲಾಕ್​​​ಡೌನ್ ಅನ್ನು ಕೊಂಚ ಸಡಿಲಿಸಿದರೂ ಗದಗ ಎಪಿಎಂಸಿಯ ಹೂ ಮಾರುಕಟ್ಟೆ ಗ್ರಾಹಕರ ಇಲ್ಲದೇ ಬಿಕೋ ಎನ್ನುತ್ತಿದೆ. ಹೀಗಾಗಿ, ಹೂ ತಂದ ಬೆಳೆಗಾರರು ಕಂಗಾಲಾಗಿದ್ದಾರೆ.

ಇಷ್ಟು ದಿನ ಲಾಕ್​ಡೌನ್​​ನಿಂದಾಗಿ ಮಾರುಕಟ್ಟೆ ವ್ಯವಸ್ಥೆ ಇರಲಿಲ್ಲ. ಈಗ ಅದನ್ನು ಸಡಿಲಿಸಿದರೂ ಯಾರೊಬ್ಬರೂ ಹೂ ಖರೀದಿಗೆ ಬರುತ್ತಿಲ್ಲ. ಜಮೀನುಗಳಿಂದ ನೇರವಾಗಿ ಮಾರುಕಟ್ಟೆಗೆ ಹೂವು ತರಲಾಗಿದೆ. ಹೀಗೆ ನಷ್ಟವಾದರೆ ನಮ್ಮ ಬದುಕು ಹೇಗೆ ಎಂದು ಅಳಲು ತೋಡಿಕೊಳ್ಳುತ್ತಾರೆ ಹೂ ಬೆಳೆಗಾರರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.