ಗದಗ: ಗದಗನ ಅಬಕಾರಿ ಇಲಾಖೆಯ ಉಪ ಆಯುಕ್ತರು ರಾಜ್ಯದ ಮುಖ್ಯಮಂತ್ರಿ ಪರಿಹಾರ ನಿಧಿಗೆ ದೇಣಿಗೆ ರೂಪದಲ್ಲಿ ನೀಡಿದ್ದಾರೆ.
ಕೊರೊನಾ ಹಾವಳಿ ತಡೆಗಟ್ಟಲು ನಟರು,ಉದ್ಯಮಿಗಳು ಸೇರಿದಂತೆ ಹಲವರು ತಮ್ಮದೇ ರೀತಿಯಲ್ಲಿ ಸಹಾಯಹಸ್ತ ಚಾಚಿದ್ದಾರೆ. ಈ ನಡುವೆ ಗದಗನ ಅಬಕಾರಿ ಇಲಾಖೆಯ ಉಪ ಆಯುಕ್ತ ಮೋತಿಲಾಲ್ ಅವರು ತಮ್ಮ ಸಂಬಳದಲ್ಲಿನ ಸುಮಾರು 44, 919 ರೂ. ಚೆಕ್ ಡಿಸಿಯವರ ಮೂಲಕ ಮುಖ್ಯಮಂತ್ರಿ ಪರಿಹಾರ ನಿಧಿಗೆ ತಲುಪಿಸಿದ್ದಾರೆ.