ETV Bharat / state

ಬೇಸಿಗೆಗೆ ಮುನ್ನವೇ ವಾಣಿಜ್ಯ ನಗರಿಯಲ್ಲಿ ಜಲಕಂಟಕ: ಎಪಿಎಂಸಿ ಹಮಾಲಿ ಕಾಲೋನಿಯಲ್ಲಿ ನೀರಿಗಾಗಿ ಹಾಹಾಕಾರ.. - water problem in Hubballi

ಹುಬ್ಬಳ್ಳಿಯ ಅಮರಗೋಳದಲ್ಲಿರುವ ಎಪಿಎಂಸಿಯಲ್ಲಿ ಈಗಲೂ ಕುಡಿಯುವ ನೀರಿನ ಸೌಲಭ್ಯವಿಲ್ಲ. ವಾರಕ್ಕೆ ಎರಡು ಸಲ ಮಾತ್ರ ಬರುವ ಎರಡು ಟ್ಯಾಂಕರ್​ ನೀರೇ ಅಲ್ಲಿನ ಜನರಿಗೆ ಆಧಾರ. ಎಪಿಎಂಸಿಯಲ್ಲಿ ಒಂದು ನಲ್ಲಿಯೂ ಇಲ್ಲಿತನಕ ಪಾಲಿಕೆ ಹಾಕಿಲ್ಲ. ಹೀಗಾಗಿ, ವಾರಕ್ಕೆರಡು ಸಲ ಬರುವ ಟ್ಯಾಂಕರ್ ನೀರಿಗೆ ಇಲ್ಲಿನ‌ ನಿವಾಸಿಗಳು ಪರದಾಡುವ ಸ್ಥಿತಿ ಬಂದಿದೆ.

water-problem-in-hubballi
ವಾಣಿಜ್ಯ ನಗರಿಯಲ್ಲಿ ನೀರಿಗಾಗಿ ಪರದಾಟ
author img

By

Published : Feb 7, 2022, 5:26 PM IST

ಹುಬ್ಬಳ್ಳಿ: ಮಹಾನಗರವಾಗಿ ಬೆಳೆದ ಹುಬ್ಬಳ್ಳಿ ಹಲವು ಅಭಿವೃದ್ಧಿ ಯೋಜನೆಗಳ ಮೂಲಕ ಗಮನ ಸೆಳೆಯುತ್ತಿದೆ. ಶರವೇಗದಲ್ಲಿ ಅವಳಿನಗರದ ಬಡಾವಣೆಗಳು ಸ್ಮಾರ್ಟ್ ಆಗುತ್ತಿವೆ. ಅದರಲ್ಲೂ ಇಲ್ಲಿನ ಅಮರಗೋಳದಲ್ಲಿರುವ ಎಪಿಎಂಸಿಯ ಬಸವ ಕಾಲೋನಿಗೆ ಹೋದರೆ ಕುಡಿಯುವ ನೀರಿಗಾಗಿ ಜನ ಪರದಾಡುವ ದೃಶ್ಯ ಸಾಮಾನ್ಯವಾಗಿದೆ.

ವಾಣಿಜ್ಯ ನಗರಿಯಲ್ಲಿ ನೀರಿಗಾಗಿ ಪರದಾಟ

ಹುಬ್ಬಳ್ಳಿಯ ಅಮರಗೋಳದಲ್ಲಿರುವ ಎಪಿಎಂಸಿಯಲ್ಲಿ ಈಗಲೂ ಕುಡಿಯುವ ನೀರಿನ ಸೌಲಭ್ಯವಿಲ್ಲ. ವಾರಕ್ಕೆ ಎರಡು ಸಲ ಮಾತ್ರ ಬರುವ ಎರಡು ಟ್ಯಾಂಕರ್​ ನೀರೇ ಅಲ್ಲಿನ ಜನರಿಗೆ ಆಧಾರ. ಎಪಿಎಂಸಿಯಲ್ಲಿ ಒಂದು ನಲ್ಲಿಯೂ ಇಲ್ಲಿ ತನಕ ಪಾಲಿಕೆ ಹಾಕಿಲ್ಲ. ಹೀಗಾಗಿ, ವಾರಕ್ಕೆರಡು ಸಲ ಬರುವ ಟ್ಯಾಂಕರ್ ನೀರಿಗೆ ಇಲ್ಲಿನ‌ ನಿವಾಸಿಗಳು ಪರದಾಡುವ ಸ್ಥಿತಿ ಬಂದಿದೆ.

ಎಪಿಎಂಸಿಯಲ್ಲಿ ಕೆಲಸ ಮಾಡುವ ಹಮಾಲರು ಈ ಬಸವ ಕಾಲೋನಿಯಲ್ಲಿ ವಾಸವಾಗಿದ್ದಾರೆ. ಅಲ್ಲಿ 132 ವಸತಿ ಗೃಹಗಳಿದ್ದು, ಒಂದು ಸಾವಿರಕ್ಕೂ ಹೆಚ್ಚು ಜನ ಇದ್ದಾರೆ. ಅವರೆಲ್ಲರೂ ನಿತ್ಯದ ಕೂಲಿಯನ್ನೇ ನೆಚ್ಚಿಕೊಂಡು ಬದುಕು ಸಾಗಿಸುತ್ತಿದ್ದಾರೆ. ಪ್ರತಿ ಮಂಗಳವಾರ ಹಾಗೂ ಶುಕ್ರವಾರ ಬರುವ ಟ್ಯಾಂಕರ್ ನೀರಿಗಾಗಿ ಹೊಡೆದಾಡುತ್ತಿದ್ದಾರೆ. ಕೇವಲ ಆಶ್ವಾಸನೆ ನೀಡುತ್ತಿರುವ ಜನಪ್ರತಿನಿಧಿಗಳು ಇಲ್ಲಿನ‌ ನಿವಾಸಿಗಳ ಕುಡಿಯುವ ನೀರಿನ ಸಮಸ್ಯೆಯನ್ನು ಇತ್ಯರ್ಥಪಡಿಸಬೇಕು ಎಂದು ಒತ್ತಾಯಿಸುತ್ತಿದ್ದಾರೆ.

ಓದಿ: ಸರ್.. ಇವರನ್ನು ಕಾಂಗ್ರೆಸ್​​ಗೆ ಸೇರಿಸಿಕೊಳ್ಳಿ : ಸಿದ್ದರಾಮಯ್ಯಗೆ ವೈಎಸ್‌ವಿ ದತ್ತ ಬೆಂಬಲಿಗರ ಮನವಿ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.