ಧಾರವಾಡ: ದೇಶದ ಗಡಿಯಲ್ಲಿನ ಯುದ್ಧ ಭೂಮಿಯಲ್ಲಿ ಭಾರತಾಂಬೆಯ ಸೇವೆ ಸಲ್ಲಿಸಿದ ಯೋಧನೋರ್ವ ನಿವೃತ್ತನಾಗಿ ಸ್ವಗ್ರಾಮಕ್ಕೆ ಆಗಮಿಸಿದ್ದಾರೆ. ಭಾರತೀಯ ಸೇನೆಯಲ್ಲಿ 18 ವರ್ಷ ಸೇವೆ ಸಲ್ಲಿಸಿ ಸ್ವಗ್ರಾಮಕ್ಕೆ ಆಗಮಿಸಿದ ಯೋಧನಿಗೆ ಗ್ರಾಮಸ್ಥರು ಅದ್ಧೂರಿಯಾಗಿ ಸ್ವಾಗತ ಕೋರಿದರು.
ಧಾರವಾಡ ತಾಲೂಕಿನ ಬಾಡ ಗ್ರಾಮದ ಬಸವರಾಜ ಭೀಮಪ್ಪ ಸುಣಗಾರ ಎಂಬ ಯೋಧ 18 ವರ್ಷ ಸೇವೆ ಸಲ್ಲಿಸಿ ಸ್ವಗ್ರಾಮಕ್ಕೆ ಆಮಿಸಿದ್ದಾರೆ. ಈ ವೇಳೆ ಗ್ರಾಮಸ್ಥರು ಬಾಡದ ಕ್ರಾಸ್ನಿಂದ ಗ್ರಾಮದವರೆಗೆ ವಾದ್ಯ ಮೇಳಗಳೊಂದಿಗೆ ಮೆರವಣಿಗೆ ನಡೆಸಿ ಅದ್ಧೂರಿಯಾಗಿ ಯೋಧನನ್ನು ಬರಮಾಡಿಕೊಂಡಿದ್ದಾರೆ.

ಯೋಧ ಬಸವರಾಜ 2004 ಜುಲೈ 8 ರಂದು ಸೇನೆಗೆ ಆಯ್ಕೆಗೊಂಡಿದ್ದರು. ತಮಿಳುನಾಡಿನಲ್ಲಿ ತರಬೇತಿ ಪಡೆದುಕೊಂಡು ಉತ್ತರ ಪ್ರದೇಶ, ರಾಜಸ್ಥಾನ, ಪಂಜಾಬ್, ಸಿಕ್ಕೀಂ, ಉತ್ತರಾಖಂಡ ಸೇರಿದಂತೆ ದೇಶದ ವಿವಿಧ ರಾಜ್ಯಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಪ್ರಮುಖವಾಗಿ ಡೊಕ್ಲಾಂ ವಿವಾದದ ಸಂದರ್ಭದಲ್ಲಿ ಸಹ ಇವರು ಸೇವೆ ಸಲ್ಲಿಸಿದ ಹಿರಿಮೆ ಹೊಂದಿದ್ದಾರೆ.
ಓದಿ: ಜಮೀರ್ ನಿವಾಸದ ಮೇಲೆ ಇಡಿ ದಾಳಿ ರಾಜಕೀಯ ಪ್ರೇರಿತ: ಸಿದ್ದರಾಮಯ್ಯ
ಕರ್ತವ್ಯದಲ್ಲಿ ಒಂದು ಕಪ್ಪುಚುಕ್ಕೆ ಇಲ್ಲದಂತೆ ಕೆಲಸ ಮಾಡಿದ್ದೇನೆ. ಮುಂಬರುವ ದಿನಗಳಲ್ಲಿ ಗ್ರಾಮದ ಯುವಕರಿಗೆ ಮಾದರಿಯಾಗುತ್ತೇನೆ ಎಂದು ಯೋಧ ಬಸವರಾಜ ದೇಶಪ್ರೇಮದ ಮಾತುಗಳನ್ನಾಡಿದರು.