ಹುಬ್ಬಳ್ಳಿ: ಸಹೋದರ ವಿನಯ್ ಕುಲಕರ್ಣಿಗೆ ಜಾಮೀನು ಸಿಕ್ಕಿರುವುದು ಬಹಳ ಖುಷಿ ತಂದಿದೆ. ಅವರು ನಾಳೆ ಬೆಳಗ್ಗೆ 10 ಗಂಟೆಗೆ ಹಿಂಡಲಗಾ ಜೈಲಿನಿಂದ ಹೊರ ಬರುತ್ತಾರೆ. ಬೆಳಗಾವಿಯಿಂದ ಸವದತ್ತಿಗೆ ತೆರಳಲಿದ್ದಾರೆ ಎಂದು ವಿನಯ್ ಸಹೋದರ ವಿಜಯ್ ಕುಲಕರ್ಣಿ ಹೇಳಿದ್ದಾರೆ.
ವಿನಯ್ ಕುಲಕರ್ಣಿಗೆ ಜಾಮೀನು ಸಿಕ್ಕ ಬಗ್ಗೆ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ ಅವರು, ಬಹಳ ದಿನಗಳಿಂದ ಈ ಕ್ಷಣಕ್ಕಾಗಿ ಕಾಯುತ್ತಿದ್ದೆವು. ವಿನಯ್ಗೆ ಕೆಲ ಷರತ್ತು ವಿಧಿಸಿ ಜಾಮೀನು ನೀಡಲಾಗಿದೆ. ಧಾರವಾಡ ಜಿಲ್ಲೆ ಪ್ರವೇಶಕ್ಕೆ ಅನುಮತಿ ನೀಡಿಲ್ಲ. ಹೀಗಾಗಿ ಬೆಂಗಳೂರಿನಲ್ಲೇ ಇರಲಿದ್ದಾರೆ. ಪ್ರಕರಣದಿಂದ ಅವರ ರಾಜಕೀಯ ಜೀವನಕ್ಕೆ ಹಿನ್ನಡೆ ಆಯಿತು ಎಂದು ಹೇಳುವವರು ಸ್ವಲ್ಪ ಸಮಯ ಕಾಯಬೇಕು.
ವಿನಯ್ ಸಕ್ರಿಯ ರಾಜಕೀಯಲ್ಲಿ ಇರುತ್ತಾರೆ. ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ತೊಡಗಿಸಿಕೊಳ್ಳಲಿದ್ದಾರೆ ಎಂದು ವಿಜಯ್ ಹೇಳಿದರು. ಸಿಬಿಐ ತನಿಖೆಗೆ ನಾವು ಸಹಕಾರ ನೀಡಿದ್ದೆವು. ಎಲ್ಲ ವಿಚಾರಣೆ ನಡೆಸಿದ ಬಳಿಕವೇ ನ್ಯಾಯಲಯವು ಜಾಮೀನು ನೀಡಿದೆ. ನಮಗೆಲ್ಲಾ ಬಹಳ ಖುಷಿಯಾಗಿದೆ ಎಂದು ತಿಳಿಸಿದರು.
ಇದನ್ನೂ ಓದಿ: ಈಗಲೂ ತಾಲಿಬಾನ್ ಮುಕ್ತ ಆಫ್ಘನ್ ಪ್ರಾಂತ್ಯವೊಂದಿದೆ.. ಯಾವುದು ಗೊತ್ತಾ?