ETV Bharat / state

3.27 ಲಕ್ಷ ಮನೆ ಹಂಚಿಕೆಗೆ ಕ್ರಾಂತಿಕಾರಿ ತೀರ್ಮಾನ: ಸಚಿವ ವಿ. ಸೋಮಣ್ಣ - ಧಾರವಾಡದ ಕೊಳಚೆ ಅಭಿವೃದ್ಧಿ ಮಂಡಳಿ

ಅಹಿಂದ ಹೋರಾಟವನ್ನು ಸಿದ್ದರಾಮಯ್ಯ ಆದ್ರೂ ಸ್ಟಾರ್ಟ್ ಮಾಡ್ಲಿ, ಬೇರೆಯವರಾದ್ರೂ ಮಾಡ್ಲಿ, ನಮಗೆ ಗೊತ್ತಿಲ್ಲ. ಆದ್ರೆ, ನಮ್ಮ ಪ್ರಧಾನಿ ಬಡವರಿಗೆ ಸೂರು ಕೊಡಿ, ಮೂಲಸೌಕರ್ಯ ಕೊಡಿ ಎಂದು ಹೇಳುತ್ತಿದ್ದಾರೆ. ಬಡವರ ಉದ್ಧಾರಕ್ಕೆ 75 ವರ್ಷದ ನಂತರ ಗಮನ ಹರಿಸಿದ್ರೆ ಅದು ಬಿಜೆಪಿ ಸರ್ಕಾರ..

v-somanna-statement-on-3-lacs-house-distribution-in-the-state
ಸಚಿವ ವಿ ಸೋಮಣ್ಣ
author img

By

Published : Oct 2, 2021, 7:44 PM IST

ಹುಬ್ಬಳ್ಳಿ : ರಾಜ್ಯದಲ್ಲಿ 3.27 ಲಕ್ಷ ಮನೆಗಳ ಹಂಚಿಕೆಯಾಗಬೇಕು. ಈ ನಿಟ್ಟಿನಲ್ಲಿ ಮೊದಲ ಬಾರಿಗೆ ನಾವು ಕ್ರಾಂತಿಕಾರಿ ತೀರ್ಮಾನ ಮಾಡಿದ್ದೇವೆ. 8 ಸಾವಿರ ಎಕರೆಗೂ ಅಧಿಕ ಜಾಗದ ಹಕ್ಕನ್ನು ನೀಡಲು ತೀರ್ಮಾನ ಮಾಡಿದ್ದೇವೆ ಎಂದು ವಸತಿ ಸಚಿವ ವಿ ಸೋಮಣ್ಣ ಹೇಳಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಧಾರವಾಡದ ಕೊಳಚೆ ಅಭಿವೃದ್ಧಿ ಮಂಡಳಿಯ ಮನೆಗಳ ಹಂಚಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿ, ಇನ್ನು 3 ರಿಂದ 4 ತಿಂಗಳಲ್ಲಿ ಎಲ್ಲ ಮನೆಗಳ ಹಂಚಿಕೆ ಮಾಡುವುದಾಗಿ ಭರವಸೆ ನೀಡಿದರು.

3.27 ಲಕ್ಷ ಮನೆ ಹಂಚಿಕೆಗೆ ಕ್ರಾಂತಿಕಾರಿ ತೀರ್ಮಾನ ಮಾಡಲಾಗಿದೆ ಅಂತಿದಾರೆ ವಸತಿ ಸಚಿವ ವಿ ಸೋಮಣ್ಣ..

ನಮ್ಮ ಪ್ರಧಾನಿ ಬಡವರ ಬಗ್ಗೆ ಚಿಂತಿಸುತ್ತಿದ್ದಾರೆ : ಅಹಿಂದ ಹೋರಾಟವನ್ನು ಸಿದ್ದರಾಮಯ್ಯ ಆದ್ರೂ ಸ್ಟಾರ್ಟ್ ಮಾಡ್ಲಿ, ಬೇರೆಯವರಾದ್ರೂ ಮಾಡ್ಲಿ, ನಮಗೆ ಗೊತ್ತಿಲ್ಲ. ಆದ್ರೆ, ನಮ್ಮ ಪ್ರಧಾನಿ ಬಡವರಿಗೆ ಸೂರು ಕೊಡಿ, ಮೂಲಸೌಕರ್ಯ ಕೊಡಿ ಎಂದು ಹೇಳುತ್ತಿದ್ದಾರೆ. ಬಡವರ ಉದ್ಧಾರಕ್ಕೆ 75 ವರ್ಷದ ನಂತರ ಗಮನ ಹರಿಸಿದ್ರೆ ಅದು ಬಿಜೆಪಿ ಸರ್ಕಾರ ಎಂದು ಹೇಳಿದರು.

ಸಿದ್ದರಾಮಯ್ಯಗೆ ಮನವರಿಕೆಯಾಗಿದೆ : ಬಿಜೆಪಿ ತಾಲಿಬಾನ್ ಹೋಲಿಕೆ ವಿಚಾರ ಸಾಕಷ್ಟು ಬಾರಿ ಚರ್ಚೆ ಆಗಿದೆ. ಸಿದ್ದರಾಮಯ್ಯರಿಗೂ ಈ ಕುರಿತು ಮನವರಿಕೆ ಆಗಿದೆ. ಮುಂದೆ ಸಿದ್ದರಾಮಯ್ಯ ಮಾತನಾಡುವಾಗ ತಮ್ಮ ಹಿಡಿತವನ್ನ ತಾವೇ ಸೃಷ್ಟಿ ಮಾಡಿಕೊಳ್ಳಬೇಕು ಅನ್ನೋದು ನಮ್ಮ ಮನವಿ ಎಂದರು.

ಬಡವರ ಜೀವನಕ್ಕೆ ಕಲ್ಲಾಗಬಾರದು : ಬೆಲೆ ಏರಿಕೆ ವಿಚಾರದಲ್ಲಿ ಯಾವಾಗ ಯಾವುದನ್ನ ಯಾವ ಕಾಲಕ್ಕೆ ತಹಬದಿಗೆ ತರಬೇಕು ಅನ್ನೋದು ಕೇಂದ್ರ ಮಾಡುತ್ತಿದೆ ಎಂದರು. ರಾಜ್ಯದಲ್ಲಿ ಈಗಾಗಲೇ ಮತಾಂತರ ಬಗ್ಗೆ ಕಾನೂನು ಆಗಿದೆ, ಗೃಹ ಸಚಿವರು ಈ ಕುರಿತು ಸ್ಪಷ್ಟ ಸೂಚನೆ ಕೊಟ್ಟಿದ್ದಾರೆ. ಕಾಯ್ದೆ ತರುವ ಮೊದಲೇ ವಿರೋಧ ವ್ಯಕ್ತಪಡಿಸುವುದಕ್ಕಿಂತ ಚಿಂತನೆ ಮಾಡಬೇಕು. ಬಡವರ ತಲೆ ಕೆಡಿಸಿ ಜೀವನಕ್ಕೆ ಕಲ್ಲಗಬಾರದು ಎಂದು ಹೇಳಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.