ಹುಬ್ಬಳ್ಳಿ: ಎಪಿಎಂಸಿ ಕಾಯ್ದೆ ಹಾಗೂ ಕೃಷಿ ತಿದ್ದುಪಡಿ ಕಾಯ್ದೆ ವಿರೋಧಿಸಿ ಇಂದು ಭಾರತ್ ಬಂದ್ ಇರುವ ಹಿನ್ನೆಲೆ ಹುಬ್ಬಳ್ಳಿ ಸರ್ಕಿಟ್ ಹೌಸ್ನಲ್ಲಿ ಸಭೆ ನಡೆಸಿದ ರೈತ ಮುಖಂಡರು ಹಾಗೂ ಹಲವಾರು ಕನ್ನಡಪರ ಸಂಘಟನೆಗಳು ಬಂದ್ಗೆ ಬೆಂಬಲ ಸೂಚಿಸುವುದಾಗಿ ಸಭೆಯಲ್ಲಿ ತೀರ್ಮಾನ ಕೈಗೊಂಡಿದ್ದಾರೆ.
ಇಂದು ಭಾರತ್ ಬಂದ್ಗೆ ರೈತರು ಕರೆ ಕೊಟ್ಟ ಹಿನ್ನೆಲೆ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ವ್ಯಾಪಕ ಬೆಂಬಲ ದೊರಕುವ ಸಾಧ್ಯತೆ ಇದೆ. ನಿನ್ನೆ ಹುಬ್ಬಳ್ಳಿಯಲ್ಲಿ ನಡೆದ ಎಲ್ಲಾ ಸಂಘಟನೆಗಳ ಸಭೆಯಲ್ಲಿ ನಾಳೆಯ ಬಂದ್ಗೆ ಬೆಂಬಲ ಸಿಕ್ಕಿದೆ. ವಿವಿಧ ರೈತ ಸಂಘಟನೆಗಳು, ಜಿಲ್ಲಾ ಕಾಂಗ್ರೆಸ್ ಘಟಕ ಸೇರಿದಂತೆ ದಲಿತ ಸಂಘಟನೆಗಳು ಮತ್ತು ಕನ್ನಡ ಪರ ಸಂಘಟನೆಗಳಿಂದ ಬಂದ್ಗೆ ಬೆಂಬಲ ದೊರಕಿದೆ. ಈ ಬಂದ್ ವೇಳೆಯಲ್ಲಿ ಪೊಲೀಸರು ನಮ್ಮನ್ನ ತಡೆದರೆ ಅವರ ವಿರುದ್ಧವೇ ಪ್ರತಿಭಟನೆ ಮಾಡುವುದಾಗಿ ರೈತ ಮುಖಂಡರು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ಇದನ್ನು ಓದಿ:ನೂರಕ್ಕೆ ನೂರರಷ್ಟು ಗೋಹತ್ಯೆ ತಡೆ ವಿಧೇಯಕ ಜಾರಿಗೆ ತರುತ್ತೇವೆ: ಸಚಿವ ಆರ್.ಅಶೋಕ್
ಈಗಾಗಲೇ ಬಂದ್ಗೆ ಸುಮಾರು 10ಕ್ಕೂ ಹೆಚ್ಚು ಸಂಘಟನೆಗಳು ಬೆಂಬಲ ಸೂಚಿಸಿದ್ದು, ನಿನ್ನೆ ಎಲ್ಲಾ ಸಂಘಟನೆಗಳ ಸದಸ್ಯರ ಸಭೆ ಕರೆದಿರುವ ರೈತ ಮುಖಂಡರು ವಿವಿಧ ಸಂಘಟನೆಗಳು ಬಂದ್ಗೆ ಪೂರಕ ಬೆಂಬಲ ನೀಡಿವೆ ಎಂದು ಸ್ಪಷ್ಟನೆ ನೀಡಿದ್ದಾರೆ.