ETV Bharat / state

ಸತ್ಯ ಮುಚ್ಚಿ ಹಾಕುವ ಪ್ರಯತ್ನ ನಡೆದಿದೆ: ದಿಂಗಾಲೇಶ್ವರ ಶ್ರೀ ಅಸಮಾಧಾನ

author img

By

Published : Feb 23, 2020, 5:24 PM IST

ಮೂರುಸಾವಿರ ಮಠದ ಉತ್ತರಾಧಿಕಾರವಾಗಿ ಇಂದು ಸತ್ಯ ದರ್ಶನವಾಗಲಿಲ್ಲ. ಸತ್ಯವನ್ನು ಮುಚ್ಚಿ ಹಾಕುವ ಪ್ರಯತ್ನ ನಡೆದಿದೆ ಎಂದು ಬಾಲೇಹೊಸೂರಿನ ದಿಂಗಾಲೇಶ್ವರ ಶ್ರೀಗಳು ಹೇಳಿದರು.

dhingaleshwara swamiji
ದಿಂಗಾಲೇಶ್ವರ ಶ್ರೀಗಳು

ಹುಬ್ಬಳ್ಳಿ: ಮೂರುಸಾವಿರ ಮಠ ಉತ್ತರಾಧಿಕಾರವಾಗಿ ಇಂದು ಸತ್ಯ ದರ್ಶನವಾಗಲಿಲ್ಲ. ಸತ್ಯವನ್ನು ಮುಚ್ಚಿ ಹಾಕುವ ಪ್ರಯತ್ನ ನಡೆದಿದೆ ಎಂದು ಬಾಲೇಹೊಸೂರಿನ ದಿಂಗಾಲೇಶ್ವರ ಶ್ರೀಗಳು ಹೇಳಿದರು.

ಬಾಲೇಹೊಸೂರಿನ ದಿಂಗಾಲೇಶ್ವರ ಶ್ರೀಗಳು

ಮೂರುಸಾವಿರ ಮಠದಲ್ಲಿ ದತ್ತ ದರ್ಶನಕ್ಕೆ ಶ್ರೀಗಳಿಗೆ ಆಹ್ವಾನ ನೀಡಲಾಗಿತ್ತು. ಆದರೆ ಮಠ ಪ್ರವೇಶಿಸದಂತೆ ಬ್ಯಾರಿಕೇಡ್ ಹಾಕಲಾದ ಹಿನ್ನೆಲೆಯಲ್ಲಿ ಮಠದ ಹೊರಭಾಗದಲ್ಲಿಯೇ ಭಕ್ತರನ್ನು ಉದ್ದೇಶಿಸಿ ಶ್ರೀಗಳು ಮಾತನಾಡಿದರು. ಬಳಿಕ ಮಠ ಪ್ರವೇಶಿಸಿದ ದಿಂಗಾಲೇಶ್ವರ ಸ್ವಾಮೀಜಿ, ಜಗದ್ಗುರು ಗುರು ಸಿದ್ದೇಶ್ವರ ಮಹಾಶಿವಯೋಗಿಗಳ ಗದ್ದುಗೆ ದರ್ಶನ ಪಡೆದುಕೊಂಡರು.

ಇದಾದ ಬಳಿಕ ಮಾಧ್ಯಮದವರ ಜೊತೆ ಮಾತನಾಡಿದ ಅವರು, ನಾವು ಯಾವುದೇ ಗಲಾಟೆ ಮಾಡಲು ಬಂದಿಲ್ಲ. ನಾವು ಮಠದ ಮೇಲೆ ಅಭಿಮಾನ ಉಳ್ಳವರು. ಮುಂದಿನ 45 ದಿನದಲ್ಲಿ ವ್ಯಾಜ್ಯ ಇತ್ಯರ್ಥ ಆಗಬೇಕು ಎಂದರು.

ನಿನ್ನೆ ರಾತ್ರಿ ಕೆಲವರು ನಮ್ಮ ಬಳಿ ಬಂದು, ಸತ್ಯ ದರ್ಶನ ನಿಲ್ಲಿಸಲು ಒತ್ತಡ ಹೇರಿದರು ಎಂದು ಅವರು ತಿಳಿಸಿದರು. ನಮ್ಮ ಗುರುಗಳನ್ನು ಕಟ್ಟಿ ಹಾಕುವ ಯತ್ನ ನಡೆದಿದೆ‌. ಇದರಲ್ಲಿ ಕೆಲ ಕಾವಿಧಾರಿಗಳ ಕುತಂತ್ರವಿದೆ. ಈ ಬಾರಿ ಸತ್ಯ ದರ್ಶನ ಆಗಿಲ್ಲ. ವಿವಾದ ಕೋರ್ಟ್​ನಲ್ಲಿ ಇತ್ಯರ್ಥ ಬೇಡ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.