ಹುಬ್ಬಳ್ಳಿ: ಜಗದೀಶ್ ನಗರ ಆಶ್ರಯ ಬಡಾವಣೆಯಲ್ಲಿ ಬಾಕಿ ಉಳಿದ 188 ಆಶ್ರಯ ಮನೆಗಳನ್ನು ಮೂಲ ಫಲಾನುಭವಿಗಳಿಗೆ ಹಸ್ತಾಂತರ ಮಾಡಬೇಕು ಎಂದು ಆಗ್ರಹಿಸಿ ಜಗದೀಶ್ ನಗರ ಆಶ್ರಯ ನಿವಾಸಿಗಳ ಹಿತ ರಕ್ಷಣಾ ಸಮಿತಿ ವತಿಯಿಂದ ವಸತಿ ಸಚಿವ ವಿ. ಸೋಮಣ್ಣನವರಿಗೆ ಮನವಿ ಸಲ್ಲಿಸಲಾಯಿತು.
ಮನವಿ ಸ್ವೀಕರಿಸಿ ಮಾತನಾಡಿದ ವಿ. ಸೋಮಣ್ಣ, ಬಡವರ ಶೋಷಣೆ ನಿಂತಿಲ್ಲ. ನಾಳೆ ಬರುತ್ತೇನೆ, ಆಯುಕ್ತರನ್ನ ಕರೆಸಿ ಅರ್ಹ ಫಲಾನುಭವಿಗಳಿಗೆ ಮನೆಗಳನ್ನು ನೀಡುವಂತೆ ತಿಳಿಸುತ್ತೇನೆ. 2001 ರಲ್ಲಿ ಅಲರ್ಟ್ ಆದ ಮನೆಗಳನ್ನು ಇನ್ನೂ ಫಲಾನುಭವಿಗಳಿಗೆ ಹಸ್ತಾಂತರಿಸಿಲ್ಲ, ಹತ್ತು ಹದಿನೈದು ದಿನಗಳಲ್ಲಿ ಇಷ್ಟು ವರ್ಷದ ಸಮಸ್ಯೆ ಪರಿಹರಿಸುತ್ತೇನೆ ಎಂದು ತಿಳಿಸಿದರು.
ಓದಿ : ಸಾಲ ಮಾಡಿಯಾದ್ರೂ ಬಡವರಿಗೆ ನೆರ ನಗದು ವರ್ಗಾಯಿಸಿ: ಕೇಂದ್ರಕ್ಕೆ ವಿತ್ತ ತಜ್ಞರ ಒತ್ತಾಯ