ಧಾರವಾಡ: ಧಾರವಾಡ ಮೂಲದ ಯೋಧನೊಬ್ಬ ಚೀನಾ ಗಡಿಯಿಂದ ವಿಡಿಯೋ ಸಂದೇಶ ರವಾನಿಸಿದ್ದಾರೆ. ಚೀನಾ ಗಡಿಯಲ್ಲಿ ನಿಂತು ಸೈನಿಕ ಈರಯ್ಯ ಪೂಜಾರ ಎಂಬವರು ವಿಡಿಯೋ ಮಾಡಿದ್ದಾರೆ.
ಧಾರವಾಡ ತಾಲೂಕಿನ ಬೆನಕನಕಟ್ಟಿ ಗ್ರಾಮದ ಈರಯ್ಯ ಪೂಜಾರ ಕಳೆದ 15 ವರ್ಷಗಳಿಂದ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಚೀನಾ ಗಡಿಯಲ್ಲಿದ್ದೇ ಜೀವನ ಮಾಡುತ್ತಿದ್ದೇವೆ. 8 ದಿನ ಆಯ್ತು ನಾವಿಲ್ಲಿ ಬಂದು. ಯುದ್ಧದ ಸಲುವಾಗಿಯೇ ಬಂದಿದ್ದೇವೆ, ಏನಾಗುತ್ತೋ ನೋಡೋಣ ಎಂದಿದ್ದಾರೆ.
ಬೆನಕಟ್ಟಿಯ ಹುಲಿ ನಾ ಹೆದರೋದಿಲ್ಲ ಎಂದು ಸ್ನೇಹಿತರಿಗೆ ವಿಡಿಯೋ ಸಂದೇಶವನ್ನು ಸೈನಿಕ ಈರಯ್ಯಾ ಪೂಜಾರ ರವಾನಿಸಿದ್ದಾರೆ.