ಧಾರವಾಡ : ಪರಿಷತ್ ಸಭಾಪತಿ ಅವಿಶ್ವಾಸ ಗೊತ್ತುವಳಿ ವಿಚಾರಕ್ಕೆ ನಗರದಲ್ಲಿ ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಪ್ರತಿಕ್ರಿಯಿಸಿದ್ದಾರೆ. 12 ಜನ ಅವಿಶ್ವಾಸ ಮಂಡನೆ ಮಾಡಿದ್ದು, ಹೀಗಾಗಿ ಸಭಾಪತಿ ರಾಜೀನಾಮೆ ಕೊಡಲೇಬೇಕು ಎಂದು ಹೇಳಿದ್ದಾರೆ.
ನಗರದಲ್ಲಿ ಸತ್ಯಾಗ್ರಹ ಸ್ಥಳದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜೆಡಿಎಸ್ ಪರೀಕ್ಷೆ ಮಾಡಲು ಸಿದ್ದರಾಮಯ್ಯ ಹೊರಟಿದ್ದಾರೆ. ಅದಕ್ಕಾಗಿಯೇ ಅದೆಲ್ಲವೂ ಸದನದಲ್ಲಿ ಆಗಲಿ ಎಂದು ಹೇಳುತ್ತಿದ್ದಾರೆ. ಸಭಾಪತಿ ಇದ್ದವರು ಸದನದಲ್ಲಿ ಗೌರವ ಕಡಿಮೆ ಮಾಡಿಕೊಳ್ಳಬಾರದು ಎಂದು ಹೇಳಿದ್ದಾರೆ.
ಆದರೆ, ಅಲ್ಲಿಯೂ ಕಾಂಗ್ರೆಸ್ ರಾಜಕಾರಣ ಮಾಡುತ್ತಿದೆ. ಸಿದ್ದರಾಮಯ್ಯಗೆ ಜೆಡಿಎಸ್-ಬಿಜೆಪಿ ಹೊಂದಾಣಿಕೆಯನ್ನು ಜನರಿಗೆ ತೋರಿಸಬೇಕಿದೆಯಂತೆ. ಕಾಂಗ್ರೆಸ್‌ನವರೇ ಬಂದು ಸಿಎಂ ಮಾಡುತ್ತೇವೆ ಎಂದಿದ್ದರು. ಆದರೆ, ಅವರೇ ಆಗ ಸರ್ಕಾರ ನಡೆಯಲು ಬಿಡಲಿಲ್ಲ ಎಂದರು.
ವಿನಯ್ ಕುಲಕರ್ಣಿ ನ್ಯಾಯಾಂಗ ಬಂಧನ ಅವಧಿ ಅಂತ್ಯ: ಮಧ್ಯಾಹ್ನ ವಿಚಾರಣೆ ಸಾಧ್ಯತೆ
ಈ ಹಿಂದೆ ನರೇಂದ್ರ ಮೋದಿಯೇ ಹೆಚ್‌ಡಿಕೆಗೆ ಕರೆ ಮಾಡಿದ್ರು. 8 ಎಂಪಿ ಕ್ಷೇತ್ರ ತೆಗೆದುಕೊಳ್ಳಿ, ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಡಿ, ನಾಳೆ ನೀವೇ ಮತ್ತೆ ಸಿಎಂ ಎಂದಿದ್ದರು. ಆದ್ರೆ, ಕಾಂಗ್ರೆಸ್‌ಗೆ ಗೌರವ ಕೊಡಬೇಕು ಎಂದು ನಾವು ಆಗ ಒಪ್ಪಲಿಲ್ಲ ಎಂದರು.