ETV Bharat / state

ಧಾರವಾಡದಲ್ಲಿ ಆಸ್ತಿ ವಿಚಾರವಾಗಿ ಶೂಟೌಟ್​... ಓರ್ವ ಸಾವು, ಇಬ್ಬರಿಗೆ ಗಂಭೀರ ಗಾಯ - dharwad murder news

ಧಾರವಾಡದ ಮದಿಹಾಳ ಗಣೇಶನಗರದ ಮನೆಯೊಂದರಲ್ಲಿ ಆಸ್ತಿ ವಿಚಾರಕ್ಕೆ ಸಂಬಂಧಿಕರ ನಡುವೆ ಜಗಳ ತಾರಕಕ್ಕೇರಿ ಶೂಟೌಟ್ ನಡೆದಿದೆ. ಘಟನೆಯಲ್ಲಿ ಓರ್ವ ವ್ಯಕ್ತಿ ಸಾವನ್ನಪ್ಪಿದ್ದರೆ, ಇನ್ನಿಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.

Shootout for  property..one death, two serious injury
ಆಸ್ತಿವಾಗಿ ವಿಚಾರವಾಗಿ ಶೂಟೌಟ್​..ಓರ್ವ ಸಾವು, ಇಬ್ಬರಿಗೆ ಗಂಭೀರ ಗಾಯ
author img

By

Published : Jul 5, 2020, 4:26 PM IST

ಧಾರವಾಡ: ನಗರದ ಮದಿಹಾಳ ಗಣೇಶನಗರದ ಮನೆಯೊಂದರಲ್ಲಿ ಆಸ್ತಿ ವಿಚಾರಕ್ಕೆ ಸಂಬಂಧಿಕರ ನಡುವಿನ ಜಗಳ ತಾರಕಕ್ಕೇರಿ ಶೂಟೌಟ್ ನಡೆದಿದ್ದು, ಘಟನೆಯಲ್ಲಿ ಓರ್ವ ಸಾವನ್ನಪ್ಪಿದ್ದಾನೆ.

ಆಸ್ತಿ ವಿಚಾರವಾಗಿ ಶೂಟೌಟ್​... ಓರ್ವ ಸಾವು, ಇಬ್ಬರಿಗೆ ಗಂಭೀರ ಗಾಯ

ಶಿವಯೋಗಿ ಗುರುಸಿದ್ದಪ್ಪ ಬಾವಿಕಟ್ಟಿ (44) ಮೃತ ವ್ಯಕ್ತಿ. ಶುಕ್ರವಾರ ತಡರಾತ್ರಿ ಈರಪ್ಪ ಯಂಗಳ್ಳಿ ಎಂಬಾತ ತನ್ನ ಗೆಳೆಯರಾದ ಸುನೀಲ್​ ಕೋನಣ್ಣವರ್ ಹಾಗೂ ಶಿವಯೋಗಿ ಗುರುಸಿದ್ದಪ್ಪ ಬಾವಿಕಟ್ಟಿ ಜೊತೆಗೆ ತನ್ನ ಸಂಬಂಧಿ ಶ್ರೀಶೈಲ ಮನೆಗೆ ತೆರಳಿದ್ದರು. ಈ ವೇಳೆ ಆಸ್ತಿ ವಿಚಾರವಾಗಿ ಈರಪ್ಪ ಮತ್ತು ಶ್ರೀಶೈಲ ನಡುವಿನ ಜಗಳ ತಾರಕಕ್ಕೇರಿದ್ದು, ಶ್ರೀಶೈಲ​ ರಿವಾಲ್ವರ್​ನಿಂದ ಮೂರು ಸುತ್ತು ಗುಂಡು ಹಾರಿಸಿದ್ದಾನೆ. ಪರಿಣಾಮ ಶಿವಯೋಗಿ ಸ್ಥಳದಲ್ಲೇ ಮೃತಪಟ್ಟಿದ್ದು, ಈರಪ್ಪ (27) ಮತ್ತು ಸುನೀಲ್ (22) ಗಂಭೀರವಾಗಿ ಗಾಯಗೊಂಡಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿದ ನಗರ ಪೊಲೀಸ್ ಆಯುಕ್ತ ಆರ್. ದಿಲೀಪ್ ಅವರು ಈರಪ್ಪ ಮತ್ತು ಶ್ರೀಶೈಲ ಮಧ್ಯೆ ಆಸ್ತಿ ವ್ಯವಹಾರಕ್ಕೆ ಸಂಬಂಧಿಸಿದಂತೆ ಹಳೇ ವೈಷಮ್ಯವಿದ್ದು, ಅದೇ ಈ ಘಟನೆಗೆ ನಡೆಯಲು ಕಾರಣ ಎಂದು ತಿಳಿಸಿದರು. ಈ ಬಗ್ಗೆ ಖಚಿತವಾದ ಎಲ್ಲಾ ಮಾಹಿತಿಗಳು ಸಹ ನಮಗೆ ಲಭ್ಯವಾಗಿವೆ. ತನಿಖೆಗಾಗಿ ಟೀಂ ಸಹ ರಚನೆ ಮಾಡಿದ್ದೇವೆ. ಶೀಘ್ರವೇ ಶೂಟ್ ಮಾಡಿರುವ ಆರೋಪಿಯನ್ನ ಬಂಧಿಸಲಾಗುವುದು ಎಂದು ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.