ETV Bharat / state

ಹುಬ್ಬಳ್ಳಿ: ನಡುರಸ್ತೆಯಲ್ಲೇ ಖಾಸಗಿ ಕಂಪನಿ ಉದ್ಯೋಗಿ ಎದೆಗೆ ಗುಂಡಿಟ್ಟು ಹತ್ಯೆ - crime news of hubli

ಕೆಲವು ದಿನಗಳ ಹಿಂದೆ ಚೂರಿ ಇರಿತ ಪ್ರಕರಣಗಳಿಂದ ಬೆಚ್ಚಿಬಿದ್ದಿದ್ದ ವಾಣಿಜ್ಯ ನಗರಿ ಜನರಿಗೆ ಈಗ ಮತ್ತೊಂದು ಶಾಕ್ ಆಗಿದೆ. ನಗರದ ಮಂಜುನಾಥ ನಗರ ಕ್ರಾಸ್ ಬಳಿ ಬಿಹಾರ ಮೂಲದ ಸರ್ವೇಶ್ ಎಂಬ ವ್ಯಕ್ತಿಯೋರ್ವನಿಗೆ ದುಷ್ಕರ್ಮಿಗಳು ಗುಂಡಿನ ದಾಳಿ ಮಾಡಿ ಪರಾರಿ ಆಗಿದ್ದಾರೆ.

ವಾಣಿಜ್ಯ ನಗರಿಯಲ್ಲಿ ಮತ್ತೆ ನೆತ್ತರು
author img

By

Published : Sep 21, 2019, 11:15 PM IST

Updated : Sep 21, 2019, 11:53 PM IST

ಹುಬ್ಬಳ್ಳಿ: ಕೆಲವು ದಿನಗಳ ಹಿಂದೆ ಚೂರಿ ಇರಿತ ಪ್ರಕರಣಗಳಿಂದ ಬೆಚ್ಚಿಬಿದ್ದಿದ್ದ ವಾಣಿಜ್ಯ ನಗರಿ ಜನರಿಗೆ ಈಗ ಮತ್ತೊಂದು ಶಾಕ್ ಆಗಿದೆ. ನಗರದ ಮಂಜುನಾಥ ನಗರ ಕ್ರಾಸ್ ಬಳಿ ಬಿಹಾರ ಮೂಲದ ಸರ್ವೇಶ್ ಎಂಬ ವ್ಯಕ್ತಿಯೋರ್ವನಿಗೆ ದುಷ್ಕರ್ಮಿಗಳು ಗುಂಡಿಟ್ಟು ಹತ್ಯೆಗೈದು, ಪರಾರಿ ಆಗಿದ್ದಾರೆ.

ವಾಣಿಜ್ಯ ನಗರಿಯಲ್ಲಿ ಮತ್ತೆ ನೆತ್ತರು : ಚೂರಿ ಇರಿತ ಪ್ರಕರಣಗಳಿಂದ ಬೆಚ್ಚಿಬಿದ್ದಿದ್ದ ಜನರಿಗೆ ಈಗ ಮತ್ತೊಂದು ಶಾಕ್ !

ತಿಂಗಳ ಹಿಂದೆ ಬಿಹಾರದಿಂದ ಬಂದಿರುವ ಸರ್ವೇಶ್ ಹುಬ್ಬಳ್ಳಿಯಲ್ಲಿ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡ್ತಿದ್ದ. ಇಂದು ಸ್ಕೂಟಿ ಮೇಲೆ ಮನೆ ಕಡೆ ತೆರಳುತ್ತಿದ್ದ ವೇಳೆ ಎದೆಗೆ ಗುಂಡು ಹಾರಿಸಿ ಅಪರಿಚಿತರು ಪರಾರಿಯಾಗಿದ್ದಾರೆ. ಇನ್ನು ಸರ್ವೇಶ್​ಗೆ ಮದುವೆಯಾಗಿದ್ದು ಹೆಂಡತಿ ಗರ್ಭಿಣಿ ಅಂತ ತಿಳಿದು ಬಂದಿದೆ.

ಇನ್ನು ಕಳೆದ ಒಂದು ವಾರದಲ್ಲಿ ಚೂರಿ ಇರಿತಕ್ಕೆ ಇಬ್ಬರು ಬಲಿಯಾಗಿದ್ದಾರೆ, ಹಲವರು ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಘಟನೆಗಳಿಂದ ಹುಬ್ಬಳ್ಳಿ ಜನರಲ್ಲಿ ಆತಂಕ ಮನೆ ಮಾಡಿದ್ದು, ಅವಳಿ ನಗರದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆಯೆಂದು ಸಾರ್ವಜನಿಕರು ಆರೋಪ ಮಾಡುತ್ತಿದ್ದಾರೆ.

ಸರ್ವೇಶ್ ಮುಗ್ಧ ಸ್ವಭಾವದವರಾಗಿದ್ದು, ಯಾರ ತಂಟೆಗೂ ಹೋಗುತ್ತಿರಲಿಲ್ಲವೆಂದು ಪೊಲೀಸರು ತಿಳಿಸಿದ್ದಾರೆ ಆದ್ರೆ, ಕೊಲೆಗೆ ಕಾರಣ ತಿಳಿದು ಬಂದಿಲ್ಲ. ಇನ್ನು ಸ್ಥಳಕ್ಕೆ ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮಿಷನರ್ ಆರ್ ದಿಲೀಪ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸದ್ಯ ಸ್ಥಳದಲ್ಲಿ ಗೋಕುಲ್ ರೋಡ್ ಪೊಲೀಸರು ಮೊಕ್ಕಾಂ ಹೂಡಿದ್ದಾರೆ.

Intro:ಹುಬ್ಬಳ್ಳಿ-05
ವಾಣಿಜ್ಯ ನಗರಿಯಲ್ಲಿ ಮತ್ತೆ ನೆತ್ತರು ಹರಿದಿದೆ. ಬಿಹಾರ ಮೂಲದ ಯುವಕನಿಗೆ ಗುಂಡು ಹಾರಿಸಿ ಹತ್ಯೆ ಮಾಡಿರುವ ಘಟನೆ ಹುಬ್ಬಳ್ಳಿಯ ಮಂಜುನಾಥ ನಗರ ಕ್ರಾಸ್ ಬಳಿ ನಡೆದಿಸೆ.
ಬಿಹಾರ ಮೂಲದ ಸರ್ವೆಶ್ ಸಿಂಗ್ ಶೂಟೌಟಿಗೆ ಬಲಿಯಾದ ಯುವಕನಾಗಿದ್ದಾನೆ.
ಕಳೆದ ಒಂದು ವಾರದಲ್ಲಿ ಚೂರಿ ಇರಿತಕ್ಕೆ ಇಬ್ಬರ ಬಲಿಯಾಗಿದ್ದರು. ಇಂದು ಮತ್ತೊಂದು ಶುಟೌಟ್ ನಡೆದಿದ್ದು, ವಾಣಿಜ್ಯ ನಗರಿ ಜನರಲ್ಲಿ ಆತಂಕ ಸೃಷ್ಟಿಯಾಗಿದೆ. ಘಟನೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ಸ್ಥಳಕ್ಕೆ ಗೋಕುಲ್ ಠಾಣೆಯ ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಬೈಟ್- ಆರ್ ದಿಲೀಪ್, ಪೊಲೀಸ್ ಕಮೀಷ‌ರ್Body:H B GaddadConclusion:Etv hubli
Last Updated : Sep 21, 2019, 11:53 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.