ETV Bharat / state

ಬೆಣ್ಣೆಹಳ್ಳ ಪ್ರವಾಹದಲ್ಲಿ ಕೊಚ್ಚಿಹೋದವರ ಕುಟುಂಬಗಳಿಗೆ ತಲಾ 5 ಲಕ್ಷ ರೂ. ಪರಿಹಾರ ವಿತರಣೆ - Relief fond give two familis

ಅಣ್ಣಿಗೇರಿ ತಾಲೂಕಿನ ಬಲ್ಲರವಾಡ ಗ್ರಾಮದ ಬೆಣ್ಣೆಹಳ್ಳದ ಪ್ರವಾಹದಲ್ಲಿ ಕೊಚ್ಚಿಹೋದ ಇಬ್ಬರು ವ್ಯಕ್ತಿಗಳ ಕುಟುಂಬಕ್ಕೆ ತಲಾ ಐದು ಲಕ್ಷ ಪರಿಹಾರ ಹಣವನ್ನು ವಿತರಿಸಲಾಯಿತು.

Dharwad
Dharwad
author img

By

Published : Sep 16, 2020, 5:28 PM IST

ಧಾರವಾಡ: ಅಣ್ಣಿಗೇರಿ ತಾಲೂಕಿನ ಬಲ್ಲರವಾಡ ಗ್ರಾಮದಲ್ಲಿ ಬೆಣ್ಣೆಹಳ್ಳದ ಪ್ರವಾಹದಲ್ಲಿ ಕೊಚ್ಚಿಹೋದ ವ್ಯಕ್ತಿಗಳ ಕುಟುಂಬಗಳಿಗೆ ತಲಾ 5 ಲಕ್ಷ ರೂ. ಪರಿಹಾರ ಧನ ವಿತರಿಸಲಾಯಿತು.

ಅಣ್ಣಿಗೇರಿ ತಾಲೂಕಿನ ಬಲ್ಲರವಾಡ ಗ್ರಾಮದ ಬೆಣ್ಣೆಹಳ್ಳದ ಪ್ರವಾಹದಲ್ಲಿ ಕೊಚ್ಚಿಹೋದ ಶ್ರೀಕಾಂತರಡ್ಡಿ ಇನಾಮತಿ ಹಾಗೂ ದೇವೆಂದ್ರಪ್ಪ ಯಮನಪ್ಪ ಮಾದರ ಎಂಬುವವರ ಕುಟುಂಬಗಳಿಗೆ ಇಂದು ತಲಾ 5 ಲಕ್ಷ ರೂ. ಪರಿಹಾರ ವಿತರಿಸಲಾಯಿತು.

ಶಾಸಕರಾದ ಶಂಕರ ಪಾಟೀಲ ಮುನೇನಕೊಪ್ಪ, ಜಿಲ್ಲಾಧಿಕಾರಿ ನಿತೇಶ್ .ಕೆ ಪಾಟೀಲ ಅವರು ಮೃತರ ವಾರಸುದಾರರಾದ ಅನಸೂಯಾ ಶ್ರೀಕಾಂತರಡ್ಡಿ ಇನಾಮತಿ ಹಾಗೂ ಸಾವಕ್ಕ ಮಾದರ ಇವರಿಗೆ ತಲಾ 5 ಲಕ್ಷ ರೂಗಳ ಪರಿಹಾರ ಧನದ ಚೆಕ್ ನೀಡಿದರು. ಬಳಿಕ ಬೆಣ್ಣೆಹಳ್ಳ ವೀಕ್ಷಿಸಿದರು.

ಈ ವೇಳೆ ಹುಬ್ಬಳ್ಳಿ ಗ್ರಾಮೀಣ ತಹಶೀಲ್ದಾರ ಪ್ರಕಾಶ ನಾಶಿ,ಅಣ್ಣಿಗೇರಿ ತಹಶೀಲ್ದಾರ ಕೊಟ್ರೇಶ, ನವಲಗುಂದ ತಹಶೀಲ್ದಾರ ನವೀನ ಹುಲ್ಲೂರ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.