ಧಾರವಾಡ: ರಾಮಮಂದಿರ ನಿರ್ಮಾಣಕ್ಕೆ ವಿವಿಧ ಸಮಾಜದ ಗಣ್ಯರನ್ನು ಭೇಟಿ ಮಾಡಿ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ರಾಮಮಂದಿರ ನಿಧಿ ಸಮರ್ಪಣಾ ಅಭಿಯಾನದಲ್ಲಿ ಪಾಲ್ಗೊಂಡು ನಿಧಿ ಸಂಗ್ರಹಿಸಿದರು.
ಸೌಹಾರ್ಥ ಪ್ರತೀಕವಾಗಿ ಧಾರವಾಡದ ಕ್ರಿಶ್ಚಿಯನ್ ಸಮುದಾಯದ ಪ್ರಮುಖ ಸ್ಟೀವ್ ಅಬ್ರಹಾಂ 1 ಲಕ್ಷ ರೂಪಾಯಿ ಹಾಗೂ ರಾಜ್ಯ ನೌಕರ ಸಂಘದ ಅಧ್ಯಕ್ಷ ಬಸವರಾಜ ಗುರಿಕಾರ 1 ಲಕ್ಷ ಹಾಗೂ ಮಧುಸೂದನ್ ಕುಲಕರ್ಣಿ 50,000 ರವಿ ದೇಶಪಾಂಡೆ 50,000 ನಿಧಿ ಸಮರ್ಪಣೆ ಮಾಡಿದರು.
ಶ್ರೀರಾಮ ಭಾರತದ ಅಸ್ಮಿತೆಯಾಗಿದ್ದು, ಎಲ್ಲಾ ಧರ್ಮದ ಜನ ಒಗ್ಗೂಡಿ ಭವ್ಯವಾದ ಮಂದಿರ ನಿರ್ಮಾಣ ಮಾಡಬೇಕು. ಎಲ್ಲಾ ಜನತೆ ಈ ಭವ್ಯ ಮಂದಿರ ನಿರ್ಮಾಣಕ್ಕೆ ಕೈಜೋಡಿಸಬೇಕು ಹಾಗೂ ಇತಿಹಾಸದ ಪುಟಗಳಲ್ಲಿ ಸುವರ್ಣಾಕ್ಷರದಲ್ಲಿ ಈ ಘಳಿಗೆಗಳು ಅಜರಾಮರವಾಗುವವು ಎಂದು ಅವರು ಇದೇ ವೇಳೆ ತಿಳಿಸಿದರು. ಹಾಗು ನಿಧಿ ಸಮರ್ಪಣಾ ಮಾಡಿದ ಎಲ್ಲರಿಗೂ ಅಭಿನಂದನೆಗಳು ಅರ್ಪಿಸಿದರು.
ಶಾಸಕರಾದ ಅರವಿಂದ ಬೆಲ್ಲದ, ಅಮೃತ ದೇಸಾಯಿ, ಡಾ.ಎಸ್ ಆರ್, ರಾಮನಗೌಡರ, ಈರೇಶ ಅಂಚಟಗೇರಿ, ಪೂರ್ಣಾ ಪಾಟೀಲ್ ವಿಜಯಾನಂದ ಶೆಟ್ಟಿ ಸೇರಿದಂತೆ ಹಲವರು ಸಾಥ್ ನೀಡಿದರು.