ಹುಬ್ಬಳ್ಳಿ: ಕೊರೊನಾ ವೈರಸ್ ಹರಡುವಿಕೆ ತಡೆಗಟ್ಟಲು ನೈಋತ್ಯ ರೈಲ್ವೇ ವಲಯದ ರೈಲು ಬೋಗಿಗಳನ್ನು ಪ್ರತ್ಯೇಕ ವಾರ್ಡ್‌ಗಳಾಗಿ ಪರಿವರ್ತಿಸುವ ಮೂಲಕ ಭಾರತೀಯ ರೈಲ್ವೆ ಭವಿಷ್ಯದ ಗಂಭೀರ ಸಮಸ್ಯೆಗೆ ಪರಿಹಾರ ಕಂಡುಹಿಡಿದಿದೆ.
ಪ್ರತ್ಯೇಕ ವೈದ್ಯಕೀಯ ಸೌಲಭ್ಯಗಳಿಗಾಗಿ ದೇಶದ ಸಾಮರ್ಥ್ಯವನ್ನು ಹೆಚ್ಚಿಸುವ ಪ್ರಯತ್ನದಲ್ಲಿ ರೈಲ್ವೆ ಸ್ಲೀಪರ್ ಕ್ಲಾಸ್ ಬೋಗಿಗಳು ಕೋವಿಡ್ - 19 ಐಸೊಲೇಷನ್ ವಾರ್ಡ್‌ಗಳಾಗಿ ಪರಿವರ್ತನೆಯಾಗಲಿವೆ.
ಈ ಬೋಗಿಗಳು ಸ್ವಚ್ಚವಾಗಿದ್ದು ರೋಗಿಗಳಿಗೆ ಆರಾಮವಾಗಿ ಚೇತರಿಸಿಕೊಳ್ಳಲು ಆರೋಗ್ಯಕರ ಪರಿಸರ ಹೊಂದಿವೆ. ಕೋವಿಡ್ -19 ರೋಗಿಗಳನ್ನು ಸರ್ಕಾರವು ಪ್ರತ್ಯೇಕವಾಗಿರಿಸಿಕೊಳ್ಳುವ ಅಗತ್ಯತೆಯನ್ನು ಪೂರೈಸಲು ರೈಲ್ವೆ ಇಲಾಖೆ ಆರಂಭದಲ್ಲಿ 5,000 ಪ್ರಯಾಣಿಕರ ಬೋಗಿಗಳನ್ನು ವಾರ್ಡುಗಳಾಗಿ ಮಾರ್ಪಡಿಸಲು ಯೋಜಿಸುತ್ತಿದೆ.
ಮಾರ್ಚ್ 25ರಂದು ಪ್ರಾರಂಭವಾದ ರಾಷ್ಟ್ರವ್ಯಾಪಿ ಲಾಕ್‌ಡೌನ್‌ನಿಂದಾಗಿ ಇದು ಸಾಧ್ಯವಾಗಿದ್ದು, ಭಾರತೀಯ ರೈಲ್ವೆ ದೇಶಾದ್ಯಂತ ಎಲ್ಲಾ ಪ್ರಯಾಣಿಕ ರೈಲು ಸೇವೆಗಳನ್ನು ಸ್ಥಗಿತಗೊಳಿಸಿದೆ.