ETV Bharat / state

ತನ್ನೂರಿಗೆ ತೆರಳಲು ವ್ಯಕ್ತಿಯೋರ್ವನಿಗೆ ಹಣದ ಸಹಾಯ ಮಾಡಿ ಮಾನವೀಯತೆ ಮೆರೆದ ಪಿಎಸ್ಐ - ಧಾರವಾಡ ಲೆಟೆಸ್ಟ್ ನ್ಯೂಸ್

ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಗಿದು ಮನೆಗೆ ಹೋಗಲು ಆತನ ಬಳಿ ಹಣ ಇರಲಿಲ್ಲ. ದೂರದ ಮಧ್ಯಪ್ರದೇಶಕ್ಕೆ ಹೋಗುವುದಾದರೂ ಹೇಗೆ ಎಂದುಕೊಂಡವನಿಗೆ ಪಿಎಸ್ಐ ಮಹೇಂದ್ರ ಕುಮಾರ ಸಹಾಯ ಮಾಡಿ, ಆತನನ್ನು ಊರಿಗೆ ಕಳುಹಿಸಿಕೊಟ್ಟಿದ್ದಾರೆ..

PSI helps a man to go back to his native
ತನ್ನೂರಿಗೆ ತೆರಳಲು ಹಣದ ಸಹಾಯ ಮಾಡಿ ಮಾನವೀಯತೆ ಮೆರೆದ ಪಿಎಸ್ಐ
author img

By

Published : Oct 4, 2020, 3:55 PM IST

ಧಾರವಾಡ : ಜೀವನೋಪಾಯಕ್ಕಾಗಿಮಧ್ಯಪ್ರದೇಶದಿಂದ ಧಾರವಾಡಕ್ಕೆ ಬಂದು ಸಂಕಷ್ಟಕ್ಕೊಳಗಾದವನಿಗೆ, ವಾಪಸ್​​ ಹೋಗಲು ಹಣವಿಲ್ಲದೆ ಪರದಾಡುತ್ತಿದ್ದಾಗ ಪೊಲೀಸ್ ಅಧಿಕಾರಿಯೊಬ್ಬರು ಸಹಾಯ ಮಾಡಿ ಮಾನವೀಯತೆ ‌ಮೆರೆದಿದ್ದಾರೆ.

ಪೊಲೀಸರ ಮಾನವೀಯತೆ

ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯ ಪಿಎಸ್ಐ ಮಹೇಂದ್ರಕುಮಾರ ಆತನಿಗೆ ಸಹಾಯ ಹಸ್ತ ಚಾಚಿದ್ದಾರೆ. ‌ಹಲವು ದಿನಗಳ ಹಿಂದೆ ಹೆದ್ದಾರಿ ಬಳಿ ಬೈಕ್ ಹಾಗೂ ಲಾರಿಯ ನಡುವೆ ಅಪಘಾತವಾಗಿತ್ತು. ಅದರಲ್ಲಿ ಮಧ್ಯಪ್ರದೇಶ ಇಂದೋರ ಬಳಿಯ ನಿವಾಸಿ ಈಶ್ವರ ಗಾಯಗೊಂಡು ಕಾಲು ಮುರಿದುಕೊಂಡಿದ್ದರು. ತನ್ನ ಕುಟುಂಬಸ್ಥರನ್ನು ಸಾಕುವ ಸಲುವಾಗಿ ಚಾಪೆ ಮಾರಾಟ ಮಾಡುತ್ತಿದ್ದವನ ಬಳಿ ಚಿಕಿತ್ಸೆಗೂ ಹಣವಿಲ್ಲದೆ ಇರುವಾಗ ಗ್ರಾಮೀಣ ಪೊಲೀಸ್ ಠಾಣೆಯ ಹೆಡ್ ಕಾನ್ಸ್​​​ಟೇಬಲ್ ನಿಂಗಪ್ಪ ತಂಬೋಗಿ ಹಾಗೂ ಮೋಹನ ಪಾಟೀಲ ವಿಷಯವನ್ನು ಪಿಎಸ್ಐ ಮಹೇಂದ್ರಕುಮಾರ ಅವರಿಗೆ ತಿಳಿಸಿದ್ದಾರೆ. ಬಳಿಕ ಮಹೇಂದ್ರಕುಮಾರ ಆತನ ನೆರವಿಗೆ ಧಾವಿಸಿದ್ದಾರೆ.

ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಗಿದು ಮನೆಗೆ ಹೋಗಲು ಆತನ ಬಳಿ ಹಣ ಇರಲಿಲ್ಲ. ದೂರದ ಮಧ್ಯಪ್ರದೇಶಕ್ಕೆ ಹೋಗುವುದಾದರೂ ಹೇಗೆ ಎಂದುಕೊಂಡವನಿಗೆ ಪಿಎಸ್ಐ ಮಹೇಂದ್ರ ಕುಮಾರ ಸಹಾಯ ಮಾಡಿ, ಆತನನ್ನು ಊರಿಗೆ ಕಳುಹಿಸಿಕೊಟ್ಟಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.