ಹುಬ್ಬಳ್ಳಿ: ಐಟಿಐ ತರಬೇತುದಾರರಿಗೆ ಜಾರಿಗೊಳಿಸಿರುವ ಆನ್ಲೈನ್ ಪರೀಕ್ಷಾ ಪದ್ಧತಿಯನ್ನು ಕೈ ಬಿಡುವಂತೆ ಒತ್ತಾಯಿಸಿ ಆಲ್ ಇಂಡಿಯಾ ಡೆಮಾಕ್ರಟಿಕ್ ಯೂಥ್ ಸಂಘಟನೆ ಹಾಗೂ ವಿಧ್ಯಾರ್ಥಿಗಳು ನಗರದ ಮಿನಿ ವಿಧಾನಸೌಧದ ಎದುರು ಪ್ರತಿಭಟನೆ ನಡೆಸಿದರು.
ಐಟಿಐ ತರಬೇತುರಾರಿಗೆ ಆನ್ಲೈನ್ ಪರೀಕ್ಷೆಯನ್ನು ಜಾರಿಗೊಳಿಸಿದ್ದು, ಖಂಡನೀಯವಾಗಿದೆ. ಕೂಡಲೇ ಆನ್ಲೈನ್ ಪರೀಕ್ಷೆ ಪದ್ಧತಿಯನ್ನು ರದ್ದುಗೊಳಿಸಬೇಕು ಎಂದು ಪ್ರತಿಭಟನಾ ನಿರತ ತರಬೇತುದಾರರು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಆನ್ಲೈನ್ ಪರೀಕ್ಷೆಯಿಂದ ತರಬೇತುದಾರರು ಗೊಂದಲಕ್ಕೆ ಒಳಗಾಗುತ್ತಿದ್ದು, ಕೂಡಲೇ ಈ ನಿರ್ಧಾರವನ್ನು ಸರಕಾರ ಕೈ ಬಿಡಬೇಕು ಎಂದು ಒತ್ತಾಯಿಸಿದರು.