ಧಾರವಾಡ: ಕೊರೊನಾ ಫ್ರಂಟ್ ಲೈನ್ ವಾರಿಯರ್ಸ್ಗಳಿಗೂ ಬಿಟ್ಟು ಬಿಡದಂತೆ ಕಾಡಿದ ವೈರಸ್ ಈಗಾ ಸೋಲನ್ನು ಒಪ್ಪಿಕೊಂಡಿದೆ. ಯಾಕೆಂದರೆ ಧಾರವಾಡ ಪೊಲೀಸ್ ಠಾಣೆಯೊಂದರ ಇಬ್ಬರು ಪೊಲೀಸ್ ಕಾನ್ಸ್ಟೇಬಲ್ ಗಳು ಕೊರೊನಾ ವಿರುದ್ದ ಜಯಿಸಿ ಕರ್ತವ್ಯಕ್ಕೆ ಮರಳಿದ್ದಾರೆ.
![ಕೊರೊನಾ ಜಯಿಸಿದ ಪೊಲೀಸರು](https://etvbharatimages.akamaized.net/etvbharat/prod-images/kn-dwd-6-police-win-corona-av-ka10001_17082020224313_1708f_1597684393_396.jpg)
ಇಂದು ಕರ್ತವ್ಯಕ್ಕೆ ಹಾಜರಾಗಲು ಬಂದ ಇಬ್ಬರು ಕಾನ್ಸ್ಟೇಬಲ್ಗಳಿಗೆ, ಪೊಲೀಸ್ ಠಾಣೆಯ ಸಿಬ್ಬಂದಿ ಹೂ ಮಳೆಯ ಸ್ವಾಗತದೊಂದಿಗೆ ಬರಮಾಡಿಕೊಂಡರು.
ಈ ವೇಳೆ ಗುಲಾಬಿ ಹೂ ನೀಡಿ ಚಪ್ಪಾಳೆ ತಟ್ಟಿ ಅವರಿಗೆ ಪ್ರೋತ್ಸಾಹಿಸಿದರು. ಇನ್ನೂ ಈ ಸಂದರ್ಭದಲ್ಲಿ ಸಿಪಿಐ ಬಸಾಪುರ ಅವರು ಇಬ್ಬರು ಪೇದೆಗಳಿಗೆ ಶಾಲು ಹಾಕಿ ಸನ್ಮಾನಿಸಿದರು.